ಭಾರತ ಸಂವಿಧಾನ ಜೀವಂತ, ಪ್ರಗತಿಪರ ದಾಖಲೆಯಾಗಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿಗಳು ಮೈತೇಯಿ ಮತ್ತು ಸಂಸ್ಕೃತ ಭಾಷೆಯಲ್ಲಿರುವ ಸಂವಿಧಾನ ಆವೃತ್ತಿಗಳನ್ನು ಹಾಗೂ ಸಂವಿಧಾನ ದಿನದ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದರು.
President Droupadi Murmu during 'Samvidhan Divas' function at Samvidhan Sadan, in New Delhi, Tuesday.
ನವದೆಹಲಿಯ ಸಂವಿಧಾನ ಸದನದಲ್ಲಿ ನಡೆದ ಸಂವಿಧಾನ ದಿನಕಾರ್ಯಕ್ರಮದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು.
Updated on

ನವದೆಹಲಿ: ಭಾರತ ಸಂವಿಧಾನವು ಜೀವಂತ ಹಾಗೂ ಪ್ರಗತಿಪರ ದಾಖಲೆಯಾಗಿದ್ದು, ಈ ಮೂಲಕ ಸಮಾಜದಲ್ಲಿ ಸಾಮಾಜಿಕ ನ್ಯಾಯ ಮತ್ತು ಅಂತರ್ಗತ ಅಭಿವೃದ್ಧಿಯ ಗುರಿಗಳನ್ನು ಸಾಧಿಸಿದ್ದೇವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಹೇಳಿದರು.

ಸಂವಿಧಾನ ಅಂಗೀಕಾರದ 75 ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ರಚನೆಗೆ ನೆರವಾದ ಮಹಿಳಾ ಸದಸ್ಯರ ಕೊಡುಗೆಯನ್ನು ಸ್ಮರಿಸಿದರು.

ನಮ್ಮ ಸಂವಿಧಾನವು ಜೀವಂತ ಮತ್ತು ಪ್ರಗತಿಪರ ದಾಖಲೆಯಾಗಿದೆ. ನಮ್ಮ ಸಂವಿಧಾನದ ಮೂಲಕ ನಾವು ಸಾಮಾಜಿಕ ನ್ಯಾಯ ಮತ್ತು ಅಂತರ್ಗತ ಅಭಿವೃದ್ಧಿಯ ಗುರಿಗಳನ್ನು ಸಾಧಿಸಿದ್ದೇವೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಮಹಿಳಾ ಮೀಸಲಾತಿಯ ಕಾನೂನಿಂದಾಗಿ ಮಹಿಳಾ ಸಬಲೀಕರಣದ ಹೊಸ ಯುಗವನ್ನೇ ಪ್ರಾರಂಭಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ಮೈತೇಯಿ ಮತ್ತು ಸಂಸ್ಕೃತ ಭಾಷೆಯಲ್ಲಿರುವ ಸಂವಿಧಾನ ಆವೃತ್ತಿಗಳನ್ನು ಹಾಗೂ ಸಂವಿಧಾನ ದಿನದ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದರು. ಇದರ ಜೊತೆಗೆ ಸಂವಿಧಾನ ದಿನದ 75 ನೇ ವಾರ್ಷಿಕೋತ್ಸವದ ಸಲುವಾಗಿ ಅಂಚೆ ಚೀಟಿ, ಸಂವಿಧಾನಕ್ಕೆ ಮೀಸಲಾದ ಎರಡು ಕಿರು ಪುಸ್ತಕಗಳನ್ನು ಬಿಡುಗಡೆ ಮಾಡಿದರು.

‘ಮೇಕಿಂಗ್ ಆಫ್ ದಿ ಕಾನ್ಸ್ಟಿಟ್ಯೂಷನ್ ಆಫ್ ಇಂಡಿಯಾ: ಎ ಗ್ಲಿಂಪ್ಸ್’. ಮತ್ತು ‘ಮೇಕಿಂಗ್ ಆಫ್ ದಿ ಕಾನ್ ಸ್ಟಿಟ್ಯೂಷನ್ ಆಫ್ ಇಂಡಿಯಾ ಅಂಡ್ ಇಟ್ಸ್ ಗ್ಲೋರಿಯಸ್ ಜರ್ನಿ’ ಎಂಬ ಹೆಸರಿನ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು.

President Droupadi Murmu during 'Samvidhan Divas' function at Samvidhan Sadan, in New Delhi, Tuesday.
ಇಂದು ಸಂವಿಧಾನ ದಿನ: ಜನತೆಗೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರಿಂದ ಶುಭಾಶಯ

ದೇಶದಲ್ಲಿಂದು ಭಾರತೀಯ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ ಹಳೆಯ ಸಂಸತ್ ಭವನದಲ್ಲಿ 75ನೇ ಸಂವಿಧಾನ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಂಸತ್ ಸದಸ್ಯರೆಲ್ಲರೂ ಲೋಕಸಭೆಯಲ್ಲಿ ಹಾಜರಿದ್ದರು.

ಇದಕ್ಕೂ ಮುನ್ನ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತ ಭಾಷಣ ಮಾಡಿ, 75 ವರ್ಷಗಳ ಹಿಂದೆ ಇದೇ ದಿನ ನಮ್ಮ ಸಂವಿಧಾನವನ್ನು ಅಂಗೀಕರಿಸಲಾಯಿತು. ಇಂದು ಇಡೀ ದೇಶ ಸಂವಿಧಾನಕ್ಕೆ ಕೃತಜ್ಞತೆ ಸಲ್ಲಿಸುತ್ತಿದೆ. 2015 ರಲ್ಲಿ, ನಾವು ನವೆಂಬರ್ 26 ಅನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದೇವೆ. ನಮ್ಮ ಒಪ್ಪಂದವು ವರ್ಷಗಳ ಸ್ಥಿರತೆ, ಶಕ್ತಿ ಮತ್ತು ಸಾಮರ್ಥ್ಯದ ಫಲಿತಾಂಶವಾಗಿದೆ. ಪ್ರಸ್ತುತ, ಭಾರತೀಯ ಸಂವಿಧಾನದ ವೈಭವ, ಅದರ ರಚನೆ ಮತ್ತು ಐತಿಹಾಸಿಕ ಪಯಣವನ್ನು ಬಿಂಬಿಸುವ ಕಿರುಚಿತ್ರವನ್ನು ಸಹ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದರು.

ನಂತರ ಮಾತನಾಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್, ಇದೊಂದು ಐತಿಹಾಸಿಕ ಕ್ಷಣ. ಸಂವಿಧಾನದ ಅನುಷ್ಠಾನದ 75ನೇ ವರ್ಷಾಚರಣೆಯನ್ನು ನಾವು ಆಚರಿಸುತ್ತಿದ್ದೇವೆ. ಈ 75 ವರ್ಷಗಳಲ್ಲಿ ನಾವು ಅನೇಕ ದೊಡ್ಡ ಸಾಧನೆಗಳನ್ನು ಮಾಡಿದ್ದೇವೆ. ಇದೆಲ್ಲ ಸಾಧ್ಯವಾಗಿದ್ದು ಸಂವಿಧಾನದಿಂದಲೇ. ಯಾವುದೇ ಸಂದರ್ಭದಲ್ಲೂ ನಾವು ಸಂವಿಧಾನವನ್ನು ಗೌರವಿಸಬೇಕು. ದೇಶಕ್ಕೆ ಮೊದಲ ಆದ್ಯತೆ ನೀಡಬೇಕು. ಸಂವಿಧಾನ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಭಾರತದ ಸಂವಿಧಾನವನ್ನು ಪ್ರಪಂಚದಾದ್ಯಂತ ಪ್ರಶಂಸಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಸೆಂಟ್ರಲ್ ಹಾಲ್ ತಲುಪುತ್ತಿದ್ದಂತೆ ರಾಷ್ಟ್ರಗೀತೆ ಪ್ರಾರಂಭವಾಯಿತು. ಉಪರಾಷ್ಟ್ರಪತಿ, ಲೋಕಸಭಾ ಸ್ಪೀಕರ್ ಮತ್ತು ಇತರ ಅತಿಥಿಗಳು ಅವರೊಂದಿಗೆ ಉಪಸ್ಥಿತರಿದ್ದರು. ನಂತರ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರನ್ನು ಉದ್ದೇಶಿಸಿ ದ್ರೌಪದಿ ಮುರ್ಮು ಭಾಷಣ ಆರಂಭಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com