ಸಂವಿಧಾನದಲ್ಲಿ ಸಾವರ್ಕರ್ ಧ್ವನಿ ಇದೆಯೆ?: ರಾಹುಲ್ ಪ್ರಶ್ನೆ

ಹಿಂಸಾಚಾರವನ್ನು ಬಳಸಬೇಕು, ಜನರನ್ನು ಕೊಲ್ಲಬೇಕು ಅಥವಾ ಸುಳ್ಳುಗಳನ್ನು ಹೇಳಿ ಸರ್ಕಾರ ಮಾಡಬೇಕು ಎಂದು ಎಲ್ಲಾದರೂ ಬರೆಯಲಾಗಿದೆಯೇ? ಅಥವಾ ಇದು ಸತ್ಯ ಮತ್ತು ಅಹಿಂಸೆಯ ಪುಸ್ತಕವೇ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
Rahul Gandhi- VD Savarkar (file pic)
ರಾಹುಲ್ ಗಾಂಧಿ-ಸಾವರ್ಕರ್online desk
Updated on

ನವದೆಹಲಿ: ಟಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, "ಸಂವಿಧಾನದಲ್ಲಿ ಸಾವರ್ಕರ್ ಅವರ ಅವರ ಧ್ವನಿ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ಹಿಂಸಾಚಾರವನ್ನು ಬಳಸಬೇಕು, ಜನರನ್ನು ಕೊಲ್ಲಬೇಕು ಅಥವಾ ಸುಳ್ಳುಗಳನ್ನು ಹೇಳಿ ಸರ್ಕಾರ ಮಾಡಬೇಕು ಎಂದು ಎಲ್ಲಾದರೂ ಬರೆಯಲಾಗಿದೆಯೇ? ಅಥವಾ ಇದು ಸತ್ಯ ಮತ್ತು ಅಹಿಂಸೆಯ ಪುಸ್ತಕವೇ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

"ಕೆಲವು ದಿನಗಳ ಹಿಂದೆ ನಾವು ತೆಲಂಗಾಣದಲ್ಲಿ ಜಾತಿ ಗಣತಿ ಕಾರ್ಯವನ್ನು ಪ್ರಾರಂಭಿಸಿದ್ದೇವೆ ಮತ್ತು ಇದು ಅಧಿಕಾರಶಾಹಿ ಕಸರತ್ತು ಅಲ್ಲ, ಮೊದಲ ಬಾರಿಗೆ ತೆಲಂಗಾಣದಲ್ಲಿ ಜಾತಿ ಗಣತಿಯನ್ನು ಸಾರ್ವಜನಿಕ ಚಟುವಟಿಕೆಯನ್ನಾಗಿ ಮಾಡಲಾಗಿದೆ.

Rahul Gandhi- VD Savarkar (file pic)
ಭಾರತ ಸಂವಿಧಾನ ಜೀವಂತ, ಪ್ರಗತಿಪರ ದಾಖಲೆಯಾಗಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

ಕೇಳಲಾಗುತ್ತಿರುವ ಪ್ರಶ್ನೆಗಳು ಮುಚ್ಚಿದ ಕೋಣೆಯಲ್ಲಿ 10-15 ಜನರು ಆಯ್ಕೆ ಮಾಡಿದ್ದಲ್ಲ. ಅವರು ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದ ಜನರು, ಬಡವರು, ಸಾಮಾನ್ಯ ಜಾತಿಗಳು, ಅಲ್ಪಸಂಖ್ಯಾತರು, ಎಲ್ಲರೂ ಮತ್ತು ತೆಲಂಗಾಣದ ಜನರು ಸೇರಿದಂತೆ ಲಕ್ಷಾಂತರ ಜನರು ಜನಗಣತಿಯನ್ನು ರೂಪವನ್ನು ನಿರ್ಧರಿಸಿದ್ದಾರೆ. ಭವಿಷ್ಯದಲ್ಲಿ ನಮ್ಮ ಸರ್ಕಾರ ಎಲ್ಲಿಯೇ ಆಯ್ಕೆಯಾದರೂ ಅಲ್ಲಿ ಜಾತಿ ಗಣತಿ ನಡೆಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com