Video: ಉತ್ತರ ಪ್ರದೇಶದಲ್ಲಿ 'ಗೂಳಿ' ಅಟ್ಟಹಾಸ; 15 ಮಂದಿಗೆ ಗಾಯ, 3 ಗಂಟೆ ಕಾರ್ಯಾಚರಣೆ ಬಳಿಕ ಸೆರೆ!

ಗೂಳಿ ದಾಳಿಯಿಂದ 15 ಮಂದಿ ಗಾಯಗೊಂಡಿದ್ದು, ಓರ್ವ ವ್ಯಕ್ತಿಯ ಕಣ್ಣಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.
Stray Bull Injures 15 In Uttar Pradesh
ಜಲಾಲಬಾದ್ ಗೂಳಿ ದಾಳಿ
Updated on

ಲಖನೌ: ಬೀದಿ ಗೂಳಿಯೊಂದು ಸರಣಿ ದಾಳಿ ಮಾಡಿದ್ದು, ಪರಿಣಾಮ ಬರೊಬ್ಬರಿ 15 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಜಲಾಲಬಾದ್ ನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ದಾರಿ ತಪ್ಪಿದ ಗೂಳಿಯೊಂದು ರಸ್ತೆಯಲ್ಲಿದ್ದ ಜನರ ಮೇಲೆ ದಾಳಿ ಮಾಡಿದ್ದು, ತನ್ನ ಕೊಂಬುಗಳಿಂದ ಮನಸೋ ಇಚ್ಛೆ ದಾಳಿ ಮಾಡಿದೆ.

ನೋಡ ನೋಡುತ್ತಲೇ ದಾರಿಹೋಕರ ಮೇಲೆ ದಾಳಿ ಮಾಡಿದ ಗೂಳಿ ತನ್ನ ಕೊಂಬಿನ ಮೂಲಕ ಜನರನ್ನು ತಿವಿದು ಅವರನ್ನು ಎತ್ತೆಸೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಗೂಳಿ ದಾಳಿಯಿಂದ 15 ಮಂದಿ ಗಾಯಗೊಂಡಿದ್ದು, ಓರ್ವ ವ್ಯಕ್ತಿಯ ಕಣ್ಣಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಗೂಳಿ ದಾಳಿಗೆ ತುತ್ತಾದ ಹಲವರ ಸೊಂಟ, ಬೆನ್ನು ಮತ್ತು ಹೊಟ್ಟೆಗೆ ಗೂಳಿ ಗುದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Stray Bull Injures 15 In Uttar Pradesh
ರಾಜಸ್ಥಾನ: ಉದಯಪುರ ಅರಮನೆ ಪ್ರವೇಶಕ್ಕಾಗಿ ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ! ಪರಿಸ್ಥಿತಿ ಉದ್ವಿಗ್ನ

ಇನ್ನು ಗೂಳಿ ದಾಳಿ ಕುರಿತು ವಿಚಾರ ತಿಳಿದ ಕೂಡಲೇ ಗೂಳಿಯನ್ನು ಹಿಡಿಯಲು ಹೊರಟ ಜಲಾಲಾಬಾದ್ ಮುನ್ಸಿಪಲ್ ಕೌನ್ಸಿಲ್ ಗೂ ಗೂಳಿ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿತ್ತು. ಗೂಳಿ ಹಿಡಿಯಲು ಸುಮಾರು 25ಕ್ಕೂ ಅಧಿಕ ಸಿಬ್ಬಂದಿ ಬರೊಬ್ಬರಿ 3 ಗಂಟೆಗಳ ಕಾಲ ಹರಸಾಹಸ ಪಟ್ಟರು. ಆದರೆ ಅವರಿಂದ ಬಚಾವ್ ಆದ ಗೂಳಿ ಮತ್ತೆ ದಾರಿಯಲ್ಲಿ ಸಿಕ್ಕವರ ಮೇಲೆ ದಾಳಿ ಮಾಡಿದೆ.

ಬಳಿಕ ಸತತ 3 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಕೊನಗೂ ಗೂಳಿಯನ್ನು ಹಿಡಿಯುವಲ್ಲಿ ಕಾರ್ಪೋರೇಷನ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಗೂಳಿಯನ್ನು ಮುನ್ಸಿಪಲ್ ಕಚೇರಿ ಆವರಣದಲ್ಲಿ ಕಟ್ಟಿ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ವೈದ್ಯರ ಪರಿಶೀಲನೆ ಬಳಿಕ ಗೂಳಿಯನ್ನು ರವಾನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಗೂಳಿ ದಾಳಿ ಇದೇ ಮೊದಲೇನಲ್ಲ. ಈ ತಿಂಗಳ ಆರಂಭದಲ್ಲಿ ಗ್ರೇಟರ್ ವೆಸ್ಟ್‌ನ ಸೆಕ್ಟರ್ 16-ಬಿ, ಸೂಪರ್‌ಟೆಕ್ ಆಕ್ಸ್‌ಫರ್ಡ್ ಸ್ಕ್ವೇರ್ ಬಳಿ ಗೂಳಿಯೊಂದು ಬೈಕ್‌ ಸವಾರನ ಮೇಲೆ ದಾಳಿ ಗಾಯಗೊಳಿಸಿತ್ತು. ಬೈಕ್ ಸವಾರ ತನ್ನ ಪಾಡಿಗೆ ಹೋಗುತ್ತಿದ್ದರೂ ಗೂಳಿಯೊಂದು ಆತನನ್ನು ನೋಡಿ ಏಕಾಏಕಿ ಆತನ ಮೇಲೆರಗಿತ್ತು.

ಈ ವೇಳೆ ಬೈಕ್ ಸವಾರ ವಾಹನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದ. ಸುತ್ತಮುತ್ತ ನಿಂತಿದ್ದ ಜನರು ರಕ್ಷಣೆಗೆ ಬಂದು ಆ ವ್ಯಕ್ತಿಯನ್ನು ರಕ್ಷಿಸಿದರು. ಅದೃಷ್ಟವಶಾತ್, ವ್ಯಕ್ತಿಗೆ ತೀವ್ರ ಗಾಯಗಳಾಗಿರಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com