ನವದೆಹಲಿ: ದೆಹಲಿಯ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸಿಹಿ ಅಂಗಡಿ ಹಾಗೂ ಪಿವಿಆರ್ ಬಳಿ ಗುರುವಾರ ಸ್ಫೋಟ ಸಂಭವಿಸಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ರೋಹಿಣಿಯ ಪ್ರಶಾಂತ್ ವಿಹಾರ್‌ನ ಬನ್ಸಿ ಸ್ವೀಟ್ ಶಾಪ್ ಬಳಿ ಸ್ಫೋಟ ಸಂಭವಿಸಿತ್ತು. ಬೆಳಿಗ್ಗೆ 11.48 ಕ್ಕೆ ಕರೆ ಸ್ವೀಕರಿಸಿದ ನಂತರ ನಾಲ್ಕು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಅಕ್ಟೋಬರ್ 20 ರಂದು ರೋಹಿಣಿಯಲ್ಲಿ ಸಿಆರ್‌ಪಿಎಫ್ ಶಾಲೆಯ ಸ್ಫೋಟದಲ್ಲಿ ಕಂಡುಬಂದ ರೀತಿಯ ಬಿಳಿ ಪುಡಿಯಂತಹ ವಸ್ತುವು ಸ್ಥಳದಲ್ಲಿ ಪತ್ತೆಯಾಗಿದೆ. ಬಾಂಬ್ ಡಾಟಾ ವಿಶ್ಲೇಷಣೆಗಾಗಿ ಎನ್‌ಎಸ್‌ಜಿ ತಂಡವನ್ನು ಕೋರುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ. ಸ್ಫೋಟದ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೆಹಲಿ ಪೊಲೀಸರಿಗೆ ನೆರವು ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 20 ರಂದು, ದೆಹಲಿಯ ರೋಹಿಣಿ ಪ್ರದೇಶದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಶಾಲೆಯ ಬಳಿ ನಿಗೂಢ ಸ್ಫೋಟ ಸಂಭವಿಸಿತ್ತು. ಕೆಲವು ಕಾರುಗಳು ಶಾಲೆಯ ಗೋಡೆಗೆ ಭಾಗಶಃ ಹಾನಿಯಾಯಿತು ಆದರೆ ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
Advertisement