ಚೆನ್ನೈ: ಚೆನ್ನೈನಲ್ಲಿ ಚಂಡಮಾರುತದ ಪರಿಣಾಮ ಉಂಟಾಗಿರುವ ಪ್ರವಾಹಕ್ಕೆ ಎಟಿಎಂನಲ್ಲಿ ವಿದ್ಯುತ್ ಪ್ರವಹಿಸಿದ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ.
ನೀರಿನಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ವ್ಯಕ್ತಿಯ ದೇಹ ತೇಲುತ್ತಿತ್ತು. ಸ್ಥಳೀಯರು ಅದನ್ನು ಮರದ ಕಂಬದಿಂದ ಮುಂದೂಡಿದರು. ನಂತರ ಕೆಲವು ವ್ಯಕ್ತಿಗಳು ಚೆನ್ನೈನ ಎಟಿಎಂನ ಹೊರಗೆ ಪ್ರವಾಹದ ನೀರಿನಿಂದ ಆತನ ದೇಹವನ್ನು ಹೊರತೆಗೆದರು. ಫೆಂಗಲ್ ಚಂಡಮಾರುತ ಸಂಜೆಯ ವೇಳೆಗೆ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ಮಳೆಯಾಗುತ್ತಿದೆ.
ಇದುವರೆಗೆ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆತನಿಗೆ ವಿದ್ಯುತ್ ಸ್ಪರ್ಶವಾಗಿರುವ ಸಾಧ್ಯತೆ ಇದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಜೆ 7 ಗಂಟೆಯವರೆಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ನಗರದ ಹಲವೆಡೆ ಜಲಾವೃತವಾಗಿರುವ ಬಗ್ಗೆ ವರದಿಯಾಗಿದೆ.
Advertisement