
ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಹೊಲವೊಂದರಲ್ಲಿ ಏಳು ನವಿಲುಗಳು ಸಾವನ್ನಪ್ಪಿವೆ. ವಿಷ ಪ್ರಾಶನದಿಂದ ಈ ನವಿಲುಗಳು ಸಾವನ್ನಪ್ಪಿರಬಹುದೆಂಬ ಅನುಮಾನ ಇರುವುದಾಗಿ ಅರಣ್ಯ ಇಲಾಖೆ ಭಾನುವಾರ ತಿಳಿಸಿದೆ.
ಭಿಕ್ಕವಾಲೆ ಗ್ರಾಮದ ಮೋರಿ ಬಳಿಯ ಹೊಲದಲ್ಲಿ ಶನಿವಾರ ಸಂಜೆ ಹೆಣ್ಣು ನವಿಲು ಸೇರಿದಂತೆ ಏಳು ನವಿಲುಗಳ ಮೃತದೇಹ ಪತ್ತೆಯಾಗಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಜ್ಞಾನ್ ಸಿಂಗ್ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣವನ್ನು ಕಂಡು ಹಿಡಿಯಲಾಗುವುದು, ಇದು ವಿಷಪೂರಿತ ಪ್ರಕರಣವೆಂದು ತೋರುತ್ತದೆ ಎಂದು ಸಿಂಗ್ ಹೇಳಿದರು.
ಈ ಸಂಬಂಧ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಉಪವಿಭಾಗಾಧಿಕಾರಿಗೆ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement