
ನವದೆಹಲಿ: ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಯೊಡ್ಡುವ ವ್ಯಕ್ತಿಗಳನ್ನು ಪತ್ತೆ ಮಾಡಲು ಗುಪ್ತಚರ ಹಾಗೂ ಸೈಬರ್ ಭದ್ರತೆ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.
ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ಕಾನೂನು ಜಾರಿಗೊಳಿಸುವುದರ ಬಗ್ಗೆ ಚಿಂತನೆ ನಡೆಸುತ್ತಿದೆ. ಭಾರತ ಅಥವಾ ಬೇರೆ ಯಾವುದೇ ಸ್ಥಳಗಳಿಂದ ಬಾಂಬ್ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ನಿಟ್ಟಿನಲ್ಲಿ ಈ ಕಾನೂನು ರೂಪುಗೊಳ್ಳಲಿದೆ ಎಂದು ತಿಳಿದುಬಂದಿದೆ.
ಭಾರತವನ್ನು ಆರ್ಥಿಕವಾಗಿ ತೀವ್ರವಾಗಿ ಬಾಧಿಸುತ್ತಿರುವ ಇಂತಹ ಚಟುವಟಿಕೆಗಳ ಹಿಂದಿನ ನಿಜವಾದ ಅಪರಾಧಿಗಳನ್ನು ಏಜೆನ್ಸಿಗಳು ಕಂಡುಹಿಡಿಯುವವರೆಗೆ, ಪ್ರಸ್ತಾವಿತ ಕಾನೂನಿನಲ್ಲಿ ಕೇಂದ್ರ ಗೃಹ ಸಚಿವಾಲಯ (MHA) ನಿಬಂಧನೆಗಳ ಬಗ್ಗೆ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ನಿಂದ ಪ್ರಸ್ತಾವನೆಯನ್ನು ಕೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಳ್ಳು ಬಾಂಬ್ ಬೆದರಿಕೆ ಪ್ರಕರಣಗಳಲ್ಲಿ ಆರೋಪಿಗಳಿಗೆ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲು BCAS ಪ್ರಸ್ತಾಪಿಸಿದೆ ಎಂದು ಸರ್ಕಾರದ ಮೂಲವೊಂದು ತಿಳಿಸಿದೆ. ಏರ್‌ಕ್ರಾಫ್ಟ್ ಕಾಯ್ದೆ, 1934 ಮತ್ತು ಏರ್‌ಕ್ರಾಫ್ಟ್ ರೂಲ್ಸ್, 1937 ಗೆ ತಿದ್ದುಪಡಿಗಳನ್ನು ತರಲು, MHA ಕಾನೂನು ಮತ್ತು ನ್ಯಾಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ಸಮಾಲೋಚನಾ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
Advertisement