BJP ಅಭಿಯಾನ: ಪಕ್ಷಕ್ಕೆ 10 ಕೋಟಿ ಸದಸ್ಯತ್ವ; ಇತಿಹಾಸ ಸೃಷ್ಟಿ

ಪ್ರಸ್ತುತ ಸದಸ್ಯತ್ವ ಪ್ರಕ್ರಿಯೆಯು ಮಂಡಲ್ ಮಟ್ಟದಲ್ಲಿ ಭೌತಿಕ ದಾಖಲಾತಿಗೆ ಒತ್ತು ನೀಡುತ್ತಿದೆ. ಬಳಿಕ ಇದು ಆನ್‌ಲೈನ್ ಸದಸ್ಯತ್ವಕ್ಕೆ ಪರಿವರ್ತನೆಗೊಳ್ಳುತ್ತದೆ.
BJP makes history with 10 crore members
ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಶೋಭಾ ಕರಂದ್ಲಾಜೆ
Updated on

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಸೋಮವಾರ ತನ್ನ ಸದಸ್ಯತ್ವವನ್ನು 10 ಕೋಟಿಗೆ ಏರಿಸಿಕೊಳ್ಳುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಬಿಜೆಪಿ ಪಕ್ಷ ಪ್ರಸ್ತುತ ನಡೆಸುತ್ತಿರುವ ಸದಸ್ಯತ್ವ ಅಭಿಯಾನವು ಮುಂದುವರೆದಿರುವಂತೆಯೇ ಪಕ್ಷದ ಸದಸ್ಯತ್ವವು ಇದೀಗ 10 ಕೋಟಿ ಗೇರಿದೆ. ಪಕ್ಷದ ಸದಸ್ಯತ್ವ ಅಭಿಯಾನವು ಅಕ್ಟೋಬರ್ 11 ರಂದು ಪ್ರಾರಂಭವಾಗಿತ್ತು. ಅಂತೆಯೇ ಇದು ಅಕ್ಟೋಬರ್ ಅಂತ್ಯದವರೆಗೆ ಇರುತ್ತದೆ.

ನಂತರ ನವೆಂಬರ್ 1 ರಿಂದ 5 ರವರೆಗೆ ಪರಿಶೀಲನೆಯ ಅವಧಿ ಇರುತ್ತದೆ. ಸದಸ್ಯರು 100 ರೂಪಾಯಿಗಳನ್ನು ದೇಣಿಗೆ ನೀಡಿ ಅವರ ವಿಧಾನಸಭಾ ಕ್ಷೇತ್ರದಲ್ಲಿ 50 ಸದಸ್ಯರನ್ನು ಹೊಂದಿದ ನಂತರ ಪ್ರಮಾಣಪತ್ರಗಳನ್ನು ಸ್ವೀಕರಿಸುತ್ತಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಪ್ರಸ್ತುತ ಸದಸ್ಯತ್ವ ಪ್ರಕ್ರಿಯೆಯು ಮಂಡಲ್ ಮಟ್ಟದಲ್ಲಿ ಭೌತಿಕ ದಾಖಲಾತಿಗೆ ಒತ್ತು ನೀಡುತ್ತಿದೆ. ಬಳಿಕ ಇದು ಆನ್‌ಲೈನ್ ಸದಸ್ಯತ್ವಕ್ಕೆ ಪರಿವರ್ತನೆಗೊಳ್ಳುತ್ತದೆ. ಈ ಸಕ್ರಿಯ ಸದಸ್ಯತ್ವ ಅಭಿಯಾನಕ್ಕೆ ಅನುಕೂಲವಾಗುವಂತೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಕಾರ್ಯಾಗಾರವನ್ನೂ ಆಯೋಜಿಸಲಾಗಿದೆ. ಈ ಪ್ರಯತ್ನವು ಮಂಡಲ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಚುನಾವಣೆಗಳಿಗೆ ಕಾರಣವಾಗಲಿದ್ದು, ಜನವರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯೊಂದಿಗೆ ಕೊನೆಗೊಳ್ಳುತ್ತದೆ ಎನ್ನಲಾಗಿದೆ.

BJP makes history with 10 crore members
BJP ಸದಸ್ಯತ್ವ ಅಭಿಯಾನ: ರಾಜ್ಯದಲ್ಲಿ ಈವರೆಗೆ 50 ಲಕ್ಷ ಮಂದಿ ನೋಂದಣಿ

ಮೂಲಗಳ ಪ್ರಕಾರ ವಿವಿಧ ಸಂಘಟನಾ ಹಂತಗಳಲ್ಲಿ ಪಕ್ಷದ ನಾಯಕರ ಆಯ್ಕೆ ಕುರಿತು ಚರ್ಚಿಸಲು ಇಂದು ಪಕ್ಷದ ವಿಸ್ತರಣಾ ಕಚೇರಿಯಲ್ಲಿ ಬಿಜೆಪಿ ಮಹತ್ವದ ಸಭೆ ನಡೆಸಲಿದೆ. ಕಾರ್ಯಾಗಾರವು ಪರಿಣಾಮಕಾರಿ ಚುನಾವಣಾ ನಿರ್ವಹಣೆಗಾಗಿ ಮತ್ತು ಪಕ್ಷದ ಆಂತರಿಕ ಚೌಕಟ್ಟನ್ನು ಬಲಪಡಿಸಲು ಅಗತ್ಯ ಸಾಧನಗಳು ಮತ್ತು ಕಾರ್ಯತಂತ್ರಗಳೊಂದಿಗೆ ನಾಯಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಸಾಂಸ್ಥಿಕ ಚುನಾವಣೆಗಳ ಮೇಲೆ ಕೇಂದ್ರೀಕರಿಸುತ್ತದೆ ಎನ್ನಲಾಗಿದೆ.

ಈ ಸಭೆಗೆ ಕೇಂದ್ರ ಚುನಾವಣಾ ಸಮಿತಿಯ ಪದಾಧಿಕಾರಿಗಳು, ರಾಜ್ಯ ಚುನಾವಣಾ ಪದಾಧಿಕಾರಿಗಳು, ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯಾಧ್ಯಕ್ಷರು ಮತ್ತು ಸಂಘಟನಾ ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com