Indian Railways ವಿಐಪಿ ಆಹಾರದಲ್ಲಿ ಹುಳು ಪತ್ತೆ, Sorry ಹೇಳಿದ IRCTC!

ದೆಹಲಿ ಮೂಲದ ಆರೇನ್ಶ್ ಸಿಂಗ್ ಎಂಬುವವರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ದೆಹಲಿಯ ವಿಐಪಿ ಎಕ್ಸಿಕ್ಯುಟಿವ್ ಲಾಂಜ್‌ನಲ್ಲಿ ತಾವು ತೆಗೆದುಕೊಂಡಿದ್ದ ಆಹಾರದಲ್ಲಿ 'ಜರಿ ಹುಳು' ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.
Delhi Man Finds Centipede In Meal At Railways VIP Lounge
ರೈಲ್ವೇ ಆಹಾರದಲ್ಲಿ ಜರಿ ಹುಳು ಪತ್ತೆ
Updated on

ನವದೆಹಲಿ: ಭಾರತೀಯ ರೈಲ್ವೇ ಆಹಾರದಲ್ಲಿ 'ಜರಿ ಹುಳು' ಪತ್ತೆಯಾಗಿದ್ದು, ಈ ಕುರಿತ ಫೋಟೋ ವ್ಯಾಪಕ ವೈರಲ್ ಆಗುತ್ತಿದೆ.

ದೆಹಲಿ ಮೂಲದ ಆರೇನ್ಶ್ ಸಿಂಗ್ ಎಂಬುವವರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ದೆಹಲಿಯ ವಿಐಪಿ ಎಕ್ಸಿಕ್ಯುಟಿವ್ ಲಾಂಜ್‌ನಲ್ಲಿ ತಾವು ತೆಗೆದುಕೊಂಡಿದ್ದ ಆಹಾರದಲ್ಲಿ 'ಜರಿ ಹುಳು' ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಅಲ್ಲದೆ ಭಾರತೀಯ ರೈಲ್ವೇ ಆಹಾರದ ಗುಣಮಟ್ಟ ಸುಧಾರಿಸಿದ್ದು, ಈಗ ಅವರು ಹೆಚ್ಚು ಪ್ರೋಟೀನ್‌ನೊಂದಿಗೆ ರಾಯ್ತಾವನ್ನು ನೀಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

Delhi Man Finds Centipede In Meal At Railways VIP Lounge
ವಂದೇ ಭಾರತ್ ರೈಲಿನಲ್ಲಿ ಸ್ಲೀಪರ್ ಕೋಚ್; RVNL ಜೊತೆ ಭಾರತೀಯ ರೈಲ್ವೇ ಮಹತ್ವದ ಒಪ್ಪಂದ

ಅಲ್ಲದೆ ಆರೇನ್ಶ್ ಸಿಂಗ್ ವಿಐಪಿ ಎಕ್ಸಿಕ್ಯುಟಿವ್ ಲಾಂಜ್ ನಲ್ಲೇ ಇಂತಹುದು ಸಂಭವಿಸಿದರೆ ಇನ್ನು ನೀವು ಸಾಮಾನ್ಯ ರೈಲುಗಳಲ್ಲಿ ನೀಡುವ ಆಹಾರದ ಗುಣಮಟ್ಟದ ಕುರಿತು ಕಲ್ಪನೆ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ಅಲ್ಲದೆ ಅವರು ಕಲುಷಿತ ಆಹಾರದ ಬಗ್ಗೆ ಸಹ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದು, ರೈಲ್ವೇ ಆಹಾರ ಸುರಕ್ಷತೆಯ ಬಗ್ಗೆ ಕಳವಳಕಾರಿ ಕೊರತೆ ಇದೆ ಎಂದು ಹೇಳಿದ್ದಾರೆ.

Sorry ಹೇಳಿದ IRCTC

ಆರೇನ್ಶ್ ಸಿಂಗ್ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಈ ಕುರಿತು ಪ್ರತಿಕ್ರಿಯೆ ನೀಡಿರುವ IRCTC, 'ಸರ್ ನಿಮಗಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ. ತಕ್ಷಣದ ಕ್ರಮಕ್ಕಾಗಿ ರಶೀದಿ/ಬುಕಿಂಗ್ ವಿವರಗಳು, ನಿಲ್ದಾಣದ ಹೆಸರು ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ದಯವಿಟ್ಟು ಹಂಚಿಕೊಳ್ಳಿ ಎಂದು ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com