
ನವದೆಹಲಿ: ಯುಪಿ ಆಡಳಿತದಲ್ಲಿ ಜಾತಿ ವಿಷಯ (caste dynamics) ಚರ್ಚಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ವಿರುದ್ಧ ಉತ್ತರ ಪ್ರದೇಶದಲ್ಲಿ ಪತ್ರಕರ್ತೆಯ ವಿರುದ್ಧ ದಾಖಲಾಗಿರುವ ನಾಲ್ಕು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಆಕೆಯ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಪಿ ಕೆ ಮಿಶ್ರಾ ಮತ್ತು ಕೆ ವಿ ವಿಶ್ವನಾಥನ್ ನೇತೃತ್ವದ ಪೀಠ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಪತ್ರಕರ್ತೆ ಮಮತಾ ತ್ರಿಪಾಠಿ ಸಲ್ಲಿಸಿದ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಎಫ್‌ಐಆರ್‌ಗಳು ರಾಜಕೀಯ ಪ್ರೇರಿತ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನದೊಂದಿಗೆ ಕ್ಷುಲ್ಲಕವಾಗಿ ದಾಖಲಿಸಲಾಗಿದೆ ಎಂದು ತ್ರಿಪಾಠಿ ಹೇಳಿದ್ದಾರೆ.
ತ್ರಿಪಾಠಿ ಅವರ ಪ್ರಕಾರ, ಎಫ್‌ಐಆರ್‌ಗಳು ಅವರು ಪೋಸ್ಟ್ ಮಾಡಿದ ಕೆಲವು ಟ್ವೀಟ್‌ಗಳಿಗೆ ಸಂಬಂಧಿಸಿವೆ.
ಆಕೆಯ ಮನವಿಯನ್ನು ಆಲಿಸಿದ ನ್ಯಾಯಪೀಠ, "ಲೇಖನಗಳಿಗೆ ಸಂಬಂಧಿಸಿದಂತೆ ಅರ್ಜಿದಾರರ (ತ್ರಿಪಾಠಿ) ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ನಿರ್ದೇಶಿಸಲಾಗಿದೆ" ಎಂದು ಹೇಳಿದರು.
ನಾಲ್ಕು ವಾರಗಳ ನಂತರ ಪ್ರಕರಣದ ವಿಚಾರಣೆ ನಡೆಯಲಿದೆ. ತ್ರಿಪಾಠಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ದವೆ, ‘ಸಾಮಾನ್ಯ ಆಡಳಿತದ ಜಾತಿ ಡೈನಾಮಿಕ್ಸ್’ ಕುರಿತ ಸುದ್ದಿ ವರದಿಗಾಗಿ ತಮ್ಮ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಪತ್ರಕರ್ತರಾದ ಅಭಿಷೇಕ್ ಉಪಾಧ್ಯಾಯ ಅವರು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಉಪಾಧ್ಯಾಯ ಅವರ ಮನವಿಯ ಮೇಲಿನ SC ಆದೇಶವನ್ನು ಉಲ್ಲೇಖಿಸಿದ ದವೆ, ತ್ರಿಪಾಠಿ ವಿರುದ್ಧ ದಾಖಲಾಗಿರುವ ಈ ಎಫ್‌ಐಆರ್‌ಗಳಲ್ಲಿ ಒಂದರಲ್ಲಿ ತಾನು ಸಹ-ಆರೋಪಿಯಾಗಿದ್ದೇನೆ ಮತ್ತು ಅವರ ಅರ್ಜಿಯ ಮೇರೆಗೆ, ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ಯಾವುದೇ ಬಲವಂತದ ಕ್ರಮಗಳಿಂದ ಅವರನ್ನು ರಕ್ಷಿಸಿತ್ತು ಎಂದು ಹೇಳಿದ್ದಾರೆ.
ಪತ್ರಕರ್ತರ ಬರಹಗಳನ್ನು ಸರ್ಕಾರದ ಟೀಕೆ ಎಂದು ಭಾವಿಸುವುದರಿಂದಲೇ ಲೇಖಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬಾರದು ಎಂದು ಉಪಾಧ್ಯಾಯ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿರುವುದಾಗಿ ಸಿದ್ಧಾರ್ಥ್ ದವೆ ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕೇವಲ X ನಲ್ಲಿನ ಪೋಸ್ಟ್‌ಗಳಿಗಾಗಿ ಪತ್ರಕರ್ತರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇದು ಶುದ್ಧ ಕಿರುಕುಳವಾಗಿದೆ ಎಂದು ದವೆ ಹೇಳಿದ್ದಾರೆ.
ವಕೀಲ ಅಮರ್ಜಿತ್ ಸಿಂಗ್ ಬೇಡಿ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ, ತ್ರಿಪಾಠಿ ನಾಲ್ಕು ಎಫ್‌ಐಆರ್‌ಗಳನ್ನು ಕ್ರಮವಾಗಿ ಅಯೋಧ್ಯೆ, ಅಮೇಥಿ, ಬಾರಾಬಂಕಿ ಮತ್ತು ಲಕ್ನೋದಲ್ಲಿ ದಾಖಲಿಸಲಾಗಿದೆ ಎಂದು ಹೇಳಿದರು.
"ಎಫ್‌ಐಆರ್‌ಗಳು ರಾಜಕೀಯ ಪ್ರೇರಿತವಾಗಿದ್ದು, ಅರ್ಜಿದಾರರ ವಿರುದ್ಧ ಕ್ಷುಲ್ಲಕ ಎಫ್‌ಐಆರ್‌ಗಳನ್ನು ದಾಖಲಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ಹಾಳುಮಾಡಲು ಪ್ರಯತ್ನಿಸಲಾಗುತ್ತಿದೆ ಎಫ್‌ಐಆರ್‌ಗಳು ಆಕೆಯ ಧ್ವನಿಯನ್ನು ಮೌನಗೊಳಿಸಲು ರಾಜ್ಯದ ಕಾನೂನು ಜಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುವ ಸ್ಪಷ್ಟ ಪ್ರಯತ್ನವಾಗಿದೆ" ಎಂದು ದವೆ ವಾದ ಮಂಡಿಸಿದ್ದಾರೆ.
Advertisement