ದೆಹಲಿ ಮಾರುಕಟ್ಟೆಯಲ್ಲಿ ಅಕ್ರಮ ಚೈನೀಸ್ ಮೊಬೈಲ್ ಜಾಮರ್ ಮಾರಾಟ; ಅಂಗಡಿ ಮಾಲೀಕನ ಬಂಧನ

ಒಳಬರುವ ಮತ್ತು ಹೊರಹೋಗುವ ಕರೆಗಳು ಮತ್ತು SMS ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಸೆಲ್ಯುಲಾರ್ ಚಟುವಟಿಕೆಗಳನ್ನು ಜಾಮ್ ಮಾಡುವ ಸಾಮರ್ಥ್ಯ ಹೊಂದಿದೆ.
Chinese Mobile Jammer
ಚೈನೀಸ್ ಮೊಬೈಲ್ ಜಾಮರ್ ಮಾರಾಟ
Updated on

ನವದೆಹಲಿ: ಅಕ್ರಮ ಚೈನೀಸ್ ಮೊಬೈಲ್ ಜಾಮರ್ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ದೆಹಲಿ ಪೊಲೀಸರು ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ.

ದೆಹಲಿಯ ಪಾಲಿಕಾ ಬಜಾರ್‌ನ ಅಂಗಡಿಯೊಂದರಲ್ಲಿ ಎರಡು ಅಕ್ರಮ ಚೈನೀಸ್ ಜಾಮರ್‌ಗಳು ಪತ್ತೆಯಾಗಿದ್ದು, ಭದ್ರತೆಗೆ ಅಪಾಯವನ್ನುಂಟುಮಾಡುತ್ತವೆ ಮತ್ತು ಅನಧಿಕೃತ ಜನರಿಂದ ಅದರ ದುರ್ಬಳಕೆ ಅಥವಾ ಮಾರಾಟವನ್ನು ನಿಷೇಧಿಸುವ ಸಾಧ್ಯತೆ ಇದೆ. ಇದು ಕೇಂದ್ರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಂಗಡಿ ಮಾಲೀಕ ರವಿ ಮಾಥುರ್ ಎಂಬಾತನ ಬಳಿ ಈ ಸಾಧನಗಳನ್ನು ಮಾರಾಟ ಮಾಡಲು ಪರವಾನಗಿ ಮತ್ತು ದಾಖಲೆಗಳಿಲ್ಲದ ಕಾರಣ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೇಂದ್ರದ ನಿಯಮಗಳ ಪ್ರಕಾರ, ಚೀನಾದ ಜಾಮರ್‌ಗಳನ್ನು ಅಧಿಕೃತ ಸರ್ಕಾರ ಮತ್ತು ರಕ್ಷಣಾ ಅಧಿಕಾರಿಗಳು ನಿರ್ದಿಷ್ಟ ಪರವಾನಗಿ ಮತ್ತು ದಾಖಲಾತಿಗಳೊಂದಿಗೆ ಮಾತ್ರ ಬಳಸಬಹುದಾಗಿದೆ.

Chinese Mobile Jammer
ಊಹೆಗೂ ನಿಲುಕದ ಪರಿಸ್ಥಿತಿಯಲ್ಲಿ ಸೇನೆ ಕೆಲಸ: ಭಾರತ-ಚೀನಾ ಗಸ್ತು ಒಪ್ಪಂದ ಕುರಿತು ಜೈಶಂಕರ್

ಮಾಥುರ್ ಅವರು ಹೇಳುವಂತೆ, 'ಅವರು ದೆಹಲಿಯ ಲಜಪತ್ ರಾಯ್ ಮಾರುಕಟ್ಟೆಯಿಂದ 25,000 ರೂಗೆ ಜಾಮರ್‌ಗಳನ್ನು ಖರೀದಿಸಿದ್ದು, ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಗುರಿ ಹೊಂದಿದ್ದರು ಎನ್ನಲಾಗಿದೆ. ಈ ಸಾಧನಗಳು 50 ಮೀಟರ್‌ಗಳವರೆಗೆ ಮೊಬೈಲ್ ಸಿಗ್ನಲ್‌ಗಳನ್ನು ಅಡ್ಡಿಪಡಿಸಬಹುದು.

ಒಳಬರುವ ಮತ್ತು ಹೊರಹೋಗುವ ಕರೆಗಳು ಮತ್ತು SMS ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಸೆಲ್ಯುಲಾರ್ ಚಟುವಟಿಕೆಗಳನ್ನು ಜಾಮ್ ಮಾಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಈ ಜಾಮರ್‌ಗಳು ಈಗಾಗಲೇ ಚಾಲ್ತಿಯಲ್ಲಿರುವ ಎಲ್ಲಾ ಕರೆಗಳ ಸಂಪರ್ಕ ಕಡಿತಗೊಳಿಸುವಂತೆ ಒತ್ತಾಯಿಸುತ್ತದೆ. ಫೋನ್‌ಗಳು "ನೆಟ್‌ವರ್ಕ್ ಇಲ್ಲ" ಚಿಹ್ನೆಯನ್ನು ತೋರಿಸುತ್ತವೆ.

ಪೊಲೀಸರಿಗೆ ತಲೆನೋವಾಗುವ ಜಾಮರ್ ಗಳು

ಇನ್ನು ಅಪರಾಧ ಪ್ರಕರಣಗಳಲ್ಲಿ, ಜಾಮರ್‌ಗಳಿಂದಾಗಿ ಸ್ಥಳದಲ್ಲಿ ಯಾವ ಸಂವಹನ ನಡೆದಿದೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗುವುದಿಲ್ಲ. ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದೂರಸಂಪರ್ಕ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com