4 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ, ಕಾನ್ಪುರದ VVIP ಏರಿಯಾದಲ್ಲಿ ಹೆಣವಾಗಿ ಪತ್ತೆ!

ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬ ಹೈ ಪ್ರೊಪೈಲ್ ನಾಪತ್ತೆ ಪ್ರಕರಣಕ್ಕೆ ಇದೀಗ ಮಹತ್ತರ ಟ್ವಿಸ್ಟ್ ದೊರೆತಿದ್ದು, ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆಯ ಬಳಿ ಮಹಿಳೆಯ ಶವ ಪತ್ತೆಯಾಗಿದೆ.
UP Woman Went Missing 4 Months Ago
ನಾಪತ್ತೆಯಾಗಿದ್ದ ಮಹಿಳೆ ಮತ್ತು ಆರೋಪಿ ವಿಮಲ್ ಸೋನಿ
Updated on

ಕಾನ್ಪುರ: 4 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಶವವೊಂದು ಉತ್ತರ ಪ್ರದೇಶದ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆಯ ಬಳಿ ಪತ್ತೆಯಾದ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬ ಹೈ ಪ್ರೊಪೈಲ್ ನಾಪತ್ತೆ ಪ್ರಕರಣಕ್ಕೆ ಇದೀಗ ಮಹತ್ತರ ಟ್ವಿಸ್ಟ್ ದೊರೆತಿದ್ದು, ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆಯ ಬಳಿ ಮಹಿಳೆಯ ಶವ ಪತ್ತೆಯಾಗಿದೆ. ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಖ್ಯಾತ ಉದ್ಯಮಿಯೊಬ್ಬರ ಪತ್ನಿ 4 ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಈ ಪ್ರಕರಣ ಉತ್ತರ ಪ್ರದೇಶದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಈ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ದೊರೆತಿದ್ದು, ನಾಪತ್ತೆಯಾಗಿದ್ದ ಮಹಿಳೆಯ ಶವ ಕಾನ್ಪುರದ ವಿವಿಐಪಿ ಏರಿಯಾದಲ್ಲಿ ಪತ್ತೆಯಾಗಿದೆ. ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆಯ ಬಳಿ ಮಹಿಳೆಯ ಶವ ಪತ್ತೆಯಾಗಿದ್ದು, ಆಕೆಯ ಪ್ರಿಯಕರನೇ ಆಕೆಯನ್ನು ಕೊಂದು ಈ ಪ್ರದೇಶದಲ್ಲಿ ಹೂತು ಹಾಕಿದ್ದ ಎನ್ನಲಾಗಿದೆ.

ಈ ಸಂಬಂಧ ಕಾನ್ಪುರ ಪೊಲೀಸರು ಆರೋಪಿ ವಿಮಲ್ ಸೋನಿ ಎಂಬಾತನನ್ನು ಬಂಧಿಸಿದ್ದು, ಗ್ರೀನ್ ಪಾರ್ಕ್ ಪ್ರದೇಶದಲ್ಲಿ ಜಿಮ್ ತರಬೇತುದಾರನಾಗಿದ್ದ ಎನ್ನಲಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ಮಂಜೂರು ಮಾಡಿದ ಬಂಗಲೆಗಳನ್ನು ಒಳಗೊಂಡಿರುವ ಪ್ರದೇಶದಲ್ಲಿ ಉದ್ಯಮಿಯ ಪತ್ನಿಯ ಶವವನ್ನು ಹೂತಿಟ್ಟಿದ್ದಾಗಿ ಪೊಲೀಸರ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಕಾನ್ಪುರದ ರಾಯ್ಪುರ್ವಾ ಪ್ರದೇಶದ ನಿವಾಸಿ ಎಂದು ತಿಳಿದುಬಂದಿದೆ.

ಡಿಸಿಪಿ (ಉತ್ತರ ಕಾನ್ಪುರ) ಶ್ರವಣ್ ಕುಮಾರ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, ಜೂನ್ 24 ರಂದು ಮಹಿಳೆ ನಾಪತ್ತೆಯಾಗಿದ್ದು, ನಂತರ ತನಿಖೆ ನಡೆಸಿದಾಗ ಆಕೆ ಮೃತಪಟ್ಟಿರುವುದು ಪತ್ತೆಯಾಗಿತ್ತು. ಈಕೆ ಆರೋಪಿ ವಿಮಲ್ ಸೋನಿಯನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆತನಿಗೆ ಮತ್ತೊಂದು ಹುಡುಗಿ ಜೊತೆ ವಿವಾಹ ನಿಶ್ಚಯವಾಗುತ್ತಿರುವ ಬಗ್ಗೆ ಮಹಿಳೆ ಅಸಮಾಧಾನಗೊಂಡಿದ್ದಳು.

ಅಪರಾಧದ ದಿನ, ಅವಳು 20 ದಿನಗಳ ನಂತರ ಜಿಮ್‌ಗೆ ಬಂದಿದ್ದಳು ಮತ್ತು ಇಬ್ಬರೂ ಮಾತುಕತೆ ನಡೆಸಲು ಕಾರಿನಲ್ಲಿ ಹೋಗಿದ್ದರು. ಬಳಿಕ ಜಗಳ ನಡೆದು ವಿಮಲ್ ಸೋನಿ ಆಕೆಯ ಕುತ್ತಿಗೆಗೆ ಗುದ್ದಿದ್ದು, ಬಳಿಕ ಆಕೆ ಮೂರ್ಛೆ ಹೋಗಿದ್ದಾಳೆ. ನಂತರ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಿದರು.

ಆರೋಪಿ ವಿಮಲ್ ಸೋನಿ ಮೊಬೈಲ್ ಫೋನ್ ಬಳಸದ ಕಾರಣ ವ್ಯಕ್ತಿಯನ್ನು ಪತ್ತೆ ಹಚ್ಚುವುದು ಕಷ್ಟವಾಗಿತ್ತು. ತನಿಖೆಗಾಗಿ ಪುಣೆ, ಆಗ್ರಾ ಮತ್ತು ಪಂಜಾಬ್‌ಗೆ ತಂಡಗಳನ್ನು ಕಳುಹಿಸಲಾಗಿತ್ತು. ಪ್ರಕರಣದ ಎಲ್ಲಾ ಸಂಭಾವ್ಯ ಕೋನಗಳನ್ನು ತನಿಖೆ ಮಾಡಿದ ನಂತರ ಕೊತ್ವಾಲಿ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕಾನೂನು ಕ್ರಮವನ್ನು ಅನುಸರಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com