
ಲಖನೌ: ನಾಲ್ಕು ದಶಕಗಳ ಹಳೆಯ ಭೂಮಿ ವಿವಾದವೊಂದರಲ್ಲಿ ಏನೂ ಅರಿಯದ 17 ವರ್ಷದ ಬಾಲಕನ ಶಿರಚ್ಛೇದಗೊಂಡಿರುವ ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ವರದಿಯಾಗಿದೆ.
ಖಡ್ಗಧಾರಿಗಳಾದ ಕೆಲವು ವ್ಯಕ್ತಿಗಳು 17 ವರ್ಷದ ಬಾಲಕನ ತಲೆ ಕತ್ತರಿಸಿದ್ದು, ತಾಯಿ ತನ್ನ ಮಗನ ರುಂಡವನ್ನು ತನ್ನ ಮಡಿಲಲ್ಲಿಟ್ಟುಕೊಂಡು ರೋಧಿಸುತ್ತಿರುವ ಹೃದಯವಿದ್ರಾವಕ ದೃಶ್ಯ ಕಂಡುಬಂದಿತ್ತು.
ಕಬಿರುದ್ದೀನ್ ಗ್ರಾಮದಲ್ಲಿ ಇಬ್ಬರ ನಡುವೆ ಭೂಮಿ ವ್ಯಾಜ್ಯ ಉಂಟಾಗಿತ್ತು, ಇದು ತೀವ್ರಸ್ವರೂಪ ಪಡೆದುಕೊಂಡು ಅ.30 ರಂದು ಘರ್ಷಣೆಗೆ ಕಾರಣವಾಗಿತ್ತು. ಈ ಘರ್ಷಣೆಯಲ್ಲಿ ರಾಮ್ಜಿತ್ ಯಾದವ್ ಎಂಬುವವರ 17 ವರ್ಷದ ಪುತ್ರನ ಶಿರಚ್ಛೇದವಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಶಿರಚ್ಛೇದ ಮಾಡಿದ ವ್ಯಕ್ತಿ ತಪ್ಪಿಸಿಕೊಂಡಿದ್ದು ಆತನಿಗಾಗಿ ಹುಡುಕಾಟ ಆರಂಭವಾಗಿದೆ.
ಕಾನೂನು ಸುವ್ಯವಸ್ಥೆ ಹದಗೆಡದಂತೆ ತಡೆಯಲು ಹಲವು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಬಾಲಕನ ತಾಯಿ ತುಂಡರಿಸಿದ ತಲೆಯನ್ನು ಮಡಿಲಲ್ಲಿ ಹಲವು ಗಂಟೆಗಳ ಕಾಲ ರೋಧಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಲ್ ಶರ್ಮಾ ಮಾತನಾಡಿ, 40 ರಿಂದ 45 ವರ್ಷಗಳಿಂದ ಜಮೀನು ವಿವಾದ ತಾರಕಕ್ಕೇರಿದ್ದು, ನಡೆಸಿದವರಲ್ಲಿ ರಮೇಶ್ ಮತ್ತು ಲಾಲತಾ ಸೇರಿದ್ದಾರೆ. ಈ ಪೈಕಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ನಾನು ಮತ್ತು ಜಿಲ್ಲಾಧಿಕಾರಿ ಸ್ಥಳದಲ್ಲಿದ್ದೇವೆ. ಕೆಲವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Advertisement