ಅಗರ್ತಲಾ: ಸರಿಯಾದ ದಾಖಲೆಗಳಿಲ್ಲದೆ ತ್ರಿಪುರಾ ಪ್ರವೇಶಿಸಿದ ಐವರು ಬಾಂಗ್ಲಾದೇಶಿಗಳು ಮತ್ತು ಇಬ್ಬರು ರೋಹಿಂಗ್ಯಾಗಳನ್ನು ಪ್ರತ್ಯೇಕ ಕಡೆಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಸರ್ಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿ ಶುಕ್ರವಾರ ಅಗರ್ತಲಾ ನಿಲ್ದಾಣದಿಂದ ಇಬ್ಬರನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಚಾರಣೆ ವೇಳೆ, ತಾವು ನೆರೆಯ ದೇಶದ ಕಾಕ್ಸ್ ಬಜಾರ್ ರೋಹಿಂಗ್ಯಾ ಶಿಬಿರದಲ್ಲಿ ಇದಿದ್ದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ. ರಂಜಾನ್ ಅಲಿ ಮತ್ತು ಅಜಿದಾ ಬೇಗಂ ಅಂತಾರಾಷ್ಟ್ರೀಯ ಗಡಿ ದಾಟಿ ರೈಲಿನಲ್ಲಿ ಕೋಲ್ಕತ್ತಾಗೆ ಹೋಗಲು ಯೋಜಿಸಿದ್ದರು ಎಂದು ಅಗರ್ತಲಾ GRP ನಿಲ್ದಾಣದ ಅಧಿಕಾರಿ ತಪಸ್ ದಾಸ್ ಹೇಳಿದ್ದಾರೆ.
ಮತ್ತೊಂದು ಘಟನೆಯಲ್ಲಿ ಧಲೈ ಜಿಲ್ಲೆಯಲ್ಲಿ ಐವರು ಬಾಂಗ್ಲಾದೇಶಿ ನುಸುಳುಕೋರರು ಮತ್ತು ಇಬ್ಬರು ಭಾರತೀಯರನ್ನು ಬಂಧಿಸಲಾಗಿದೆ. ಬಂಧಿತ ಬಾಂಗ್ಲಾದೇಶೀಯರೆಲ್ಲರೂ ನೆರೆಯ ದೇಶದ ಮೌಲ್ವಿಬಜಾರ್ ಮತ್ತು ಸಿಲ್ಹೆಟ್ ಜಿಲ್ಲೆಗಳ ನಿವಾಸಿಗಳು ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಂಗ್ಲಾದೇಶದ ಪ್ರಜೆಗಳು ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದ್ದಾರೆ ಮತ್ತು ಇಬ್ಬರು ಭಾರತೀಯರು ಅಕ್ರಮ ವಲಸೆಯನ್ನು ಸುಗಮಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.
Advertisement