'ಸುಳ್ಳು ಸತ್ಯಕ್ಕಿಂತ ಬಹಳ ವೇಗವಾಗಿ ಹರಡುತ್ತದೆ': ಲೈಂಗಿಕ ದೌರ್ಜನ್ಯ ಕೇಸು ಎದುರಿಸುತ್ತಿರುವ ನಟ ಜಯಸೂರ್ಯ ಬಹಿರಂಗ ಪತ್ರ

ಪ್ರಸ್ತುತ ಅಮೆರಿಕದಲ್ಲಿರುವ ಜಯಸೂರ್ಯ ಅವರು ತಮ್ಮ ಮೇಲೆ ಕೇಳಿಬಂದಿರುವ ಗಂಭೀರ ಆರೋಪಗಳನ್ನು ಉಲ್ಲೇಖಿಸಿ ಪತ್ರದಲ್ಲಿ ವಿವರವಾಗಿ ಬರೆದಿದ್ದಾರೆ. ನಿನ್ನೆ ಆಗಸ್ಟ್ 31 ಅವರ 46ನೇ ವರ್ಷದ ಜನ್ಮದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಮೇಲೆ ಬಂದಿರುವ ಆಪಾದನೆಯನ್ನು ಉಲ್ಲೇಖಿಸಿ ಪತ್ರ ಬರೆದಿದ್ದಾರೆ.
ನಟ ಜಯಸೂರ್ಯ
ನಟ ಜಯಸೂರ್ಯ
Updated on

ತಿರುವನಂತಪುರ: ತಮ್ಮ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಕೊನೆಗೂ ನಟ ಜಯಸೂರ್ಯ ಮೌನ ಮುರಿದು ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಬರೆದಿರುವ ಬಹಿರಂಗ ಪತ್ರದಲ್ಲಿ ಅವರು, ತಮ್ಮ ವಿರುದ್ಧ ಕೇಳಿಬಂದಿರುವ ಈ ಸುಳ್ಳು ಆರೋಪಗಳಿಂದ ತಮಗೆ, ತಮ್ಮ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳಿಗೆ ತೀವ್ರ ನೋವುಂಟಾಗಿದ್ದು, ಸಾಕಷ್ಟು ಪರಿಣಾಮ ಬೀರಿದೆ ಎಂದಿದ್ದಾರೆ.

ನಟ ಜಯಸೂರ್ಯ
ಮಾಲಿವುಡ್ #MeToo: ಈ ವರೆಗೂ 17 ಪ್ರಕರಣ ಬಹಿರಂಗ, ಮಾತನಾಡಿದ್ದಕ್ಕೆ ಬೆದರಿಕೆ ಬರುತ್ತಿವೆ- ನಟಿಯರ ಆರೋಪ

ಪ್ರಸ್ತುತ ಅಮೆರಿಕದಲ್ಲಿರುವ ಜಯಸೂರ್ಯ ಅವರು ತಮ್ಮ ಮೇಲೆ ಕೇಳಿಬಂದಿರುವ ಗಂಭೀರ ಆರೋಪಗಳನ್ನು ಉಲ್ಲೇಖಿಸಿ ಪತ್ರದಲ್ಲಿ ವಿವರವಾಗಿ ಬರೆದಿದ್ದಾರೆ. ನಿನ್ನೆ ಆಗಸ್ಟ್ 31 ಅವರ 46ನೇ ವರ್ಷದ ಜನ್ಮದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಮೇಲೆ ಬಂದಿರುವ ಆಪಾದನೆಯನ್ನು ಉಲ್ಲೇಖಿಸಿ ಪತ್ರ ಬರೆದಿದ್ದಾರೆ.

ಇಂದು ನನ್ನ ಜನ್ಮದಿನದಂದು ನನಗೆ ಶುಭ ಹಾರೈಸಿದ ನಿಮ್ಮೆಲ್ಲರಿಗೂ ಮತ್ತು ಈ ಕಷ್ಟದ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತಿರುವ ಎಲ್ಲರಿಗೂ ಧನ್ಯವಾದಗಳು.

ನಟ ಜಯಸೂರ್ಯ
'ಕ್ಯಾರವಾನ್ ಗಳಲ್ಲಿ ಹಿಡನ್ ಕ್ಯಾಮರಾ, ಲೈಂಗಿಕ ದೌರ್ಜನ್ಯ': ಮಲಯಾಳಂ ಚಿತ್ರರಂಗದ ಭಯಾನಕ ಮುಖ ತೆರೆದಿಟ್ಟ ಹಿರಿಯ ನಟಿಯರು...

ತಾವು ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ ಹಾಗೂ ತಮ್ಮ ಕಾನೂನು ತಂಡವು ಅಗತ್ಯ ಪ್ರಕ್ರಿಯೆಗಳನ್ನು ನಿರ್ವಹಿಸುತ್ತದೆ ಎಂದಿದ್ದಾರೆ. ಆತ್ಮಸಾಕ್ಷಿ ಇಲ್ಲದವರಿಗೆ ಸುಳ್ಳು ಆರೋಪ ಮಾಡುವುದು ಸುಲಭ ಎಂದು ಒತ್ತಿ ಹೇಳಿದ ಅವರು, ಲೈಂಗಿಕ ಕಿರುಕುಳದ ಸುಳ್ಳು ಆರೋಪವನ್ನು ಎದುರಿಸುವುದು ಕಿರುಕುಳ ಎದುರಿಸಿದಷ್ಟೇ ನೋವುಂಟುಮಾಡುತ್ತದೆ ಎಂದು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಸತ್ಯಕ್ಕಿಂತ ಸುಳ್ಳು ವೇಗವಾಗಿ ಹರಡುತ್ತದೆ, ಆದರೆ ಸತ್ಯವೇ ಕೊನೆಯದಾಗಿ ನನ್ನ ಕೈಹಿಡಿಯುತ್ತದೆ, ಮೇಲುಗೈ ಸಾಧಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ನನ್ನ ಈ ಜನ್ಮದಿನವನ್ನು ಅತ್ಯಂತ ನೋವುಂಟುಮಾಡಿದವರಿಗೆ ಧನ್ಯವಾದಗಳು ಎಂದು ವ್ಯಂಗ್ಯವಾಗಿ ಪತ್ರದಲ್ಲಿ ಸೇರಿಸಿದ್ದಾರೆ. ನಟ ಜಯಸೂರ್ಯ ವಿರುದ್ಧ ಮೊದಲ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮೊನ್ನೆ ಆಗಸ್ಟ್ 28 ರಂದು ತಿರುವನಂತಪುರಂ ಕಂಟೋನ್ಮೆಂಟ್ ಪೊಲೀಸರು ಐಪಿಸಿ ಸೆಕ್ಷನ್ 354 (ಅತಿರೇಕದ ವರ್ತನೆ) ಅಡಿಯಲ್ಲಿ ದಾಖಲಿಸಿದ್ದಾರೆ.

2012-13ರಲ್ಲಿ ತೊಡುಪುಳ ಬಳಿಯ ಸಿನಿಮಾ ಸೆಟ್‌ವೊಂದರಲ್ಲಿ ತನಗೆ ನಟ ಜಯಸೂರ್ಯ ಲೈಂಗಿಕ ಕಿರುಕುಳ ನೀಡಿದ್ದರು ಎಂದು ನಟಿಯೊಬ್ಬರು ನೀಡಿದ ದೂರಿನ ಮೇರೆಗೆ ತಿರುವನಂತಪುರ ಕರಮಾನ ಪೊಲೀಸರು ಆಗಸ್ಟ್ 29 ರಂದು ಎರಡನೇ ಪ್ರಕರಣವನ್ನು ಐಪಿಸಿ ಸೆಕ್ಷನ್ 354, 354A (A1) (I), ಮತ್ತು 354D ಅಡಿಯಲ್ಲಿ ದಾಖಲಿಸಿದ್ದಾರೆ.

ಹೇಮಾ ಸಮಿತಿ ವರದಿ ಬಿಡುಗಡೆಯಾದಾಗಿನಿಂದ, ಹಲವು ನಟಿಯರೂ ಸೇರಿದಂತೆ ಮಲಯಾಳಂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಹಲವು ಮಹಿಳೆಯರು ಮಾಲಿವುಡ್ ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳ, ನಿಂದನೆ ಮತ್ತು ತಾರತಮ್ಯದ ಅನುಭವಗಳನ್ನು ಒಬ್ಬೊಬ್ಬರಾಗಿಯೇ ಬಹಿರಂಗವಾಗಿ ಹಂಚಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com