ತೆಲಂಗಾಣ ಸರ್ಕಾರ 'ವಾಯ್ಸ್ ಆಫ್ ಮುಮೆನ್' ವರದಿ ಬಹಿರಂಗಪಡಿಸಲಿ: ಸಮಂತಾ ಸೇರಿ ತೆಲುಗು ಚಿತ್ರರಂಗದ ಕಲಾವಿದರ ಒಕ್ಕೊರಲ ಒತ್ತಾಯ

ತೆಲುಗು ಚಲನಚಿತ್ರೋದ್ಯಮದಲ್ಲಿ (TFI) ಮಹಿಳೆಯರನ್ನು ಬೆಂಬಲಿಸಲುವ ದಿ ವಾಯ್ಸ್ ಆಫ್ ವುಮೆನ್ ಎಂಬ ಗುಂಪನ್ನು 2019ರಲ್ಲಿ ರಚಿಸಲಾಗಿತ್ತು. ಆ ಸಮಿತಿಯು ಹೇಮಾ ಸಮಿತಿಯಂತೆ ತೆಲುಗು ಚಿತ್ರರಂಗದಲ್ಲಿನ ಕರಾಳತೆ ಬಗ್ಗೆ ಬೆಳಕು ಚೆಲ್ಲುತ್ತಿದ್ದು ಅದನ್ನು ಸರ್ಕಾರ ಪ್ರಕಟಿಸಿ ಮಹಿಳೆಯರಿಗೆ ಚಿತ್ರರಂಗದಲ್ಲಿ ಕೆಲಸ ಮಾಡಲು ಪೂರಕ ವಾತಾವರಣ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಲಾಗುತ್ತಿದೆ.
ತೆಲುಗು ಚಿತ್ರರಂಗದ ಕಲಾವಿದೆಯರು
ತೆಲುಗು ಚಿತ್ರರಂಗದ ಕಲಾವಿದೆಯರು
Updated on

ಹೈದರಾಬಾದ್: ಮಲಯಾಳಂ ಚಿತ್ರರಂದಲ್ಲಿ ನಟಿಯರು ಮತ್ತು ಇತರ ಮಹಿಳೆಯರು ಪುರುಷರಿಂದ ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಹೇಮಾ ಸಮಿತಿ ವರದಿ ಬಹಿರಂಗಗೊಂಡ ನಂತರ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಇದೀಗ ಅದೇ ರೀತಿ ತೆಲುಗು ಚಿತ್ರರಂಗದಲ್ಲಿ ಕೂಡ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯಗಳನ್ನೊಳಗೊಂಡ ವರದಿಯನ್ನು ಬಿಡುಗಡೆಮಾಡಬೇಕೆಂಬ ಕೂಗು ಜೋರಾಗಿದೆ.

ತೆಲಂಗಾಣ ಸರ್ಕಾರವು ತೆಲುಗು ಚಿತ್ರೋದ್ಯಮದೊಳಗಿನ ಲೈಂಗಿಕ ಕಿರುಕುಳದ ಕುರಿತು ಉಪ ಸಮಿತಿಯ ವರದಿಯನ್ನು ಪ್ರಕಟಿಸಬೇಕೆಂದು ಖ್ಯಾತ ನಟಿ ಸಮಂತಾ ರುತ್ ಪ್ರಭು ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.

ತೆಲುಗು ಚಲನಚಿತ್ರೋದ್ಯಮದಲ್ಲಿ (TFI) ಮಹಿಳೆಯರನ್ನು ಬೆಂಬಲಿಸಲುವ ದಿ ವಾಯ್ಸ್ ಆಫ್ ವುಮೆನ್ ಎಂಬ ಗುಂಪನ್ನು 2019ರಲ್ಲಿ ರಚಿಸಲಾಗಿತ್ತು. ಆ ಸಮಿತಿಯು ಹೇಮಾ ಸಮಿತಿಯಂತೆ ತೆಲುಗು ಚಿತ್ರರಂಗದಲ್ಲಿನ ಕರಾಳತೆ ಬಗ್ಗೆ ಬೆಳಕು ಚೆಲ್ಲುತ್ತಿದ್ದು ಅದನ್ನು ಸರ್ಕಾರ ಪ್ರಕಟಿಸಿ ಮಹಿಳೆಯರಿಗೆ ಚಿತ್ರರಂಗದಲ್ಲಿ ಕೆಲಸ ಮಾಡಲು ಪೂರಕ ವಾತಾವರಣ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಲಾಗುತ್ತಿದೆ.

ನಿರ್ದೇಶಕಿ ನಂದಿನಿ ರೆಡ್ಡಿ, ನಟಿಯರಾದ ಸಮಂತಾ ರುತ್ ಪ್ರಭು, ಝಾನ್ಸಿ, ಲಕ್ಷ್ಮಿ ಮಂಚು, ಗಾಯಕಿಯರಾದ ಚಿನ್ಮಯಿ ಶ್ರೀಪಾದ, ಕೌಸಲ್ಯ, ನಿರೂಪಕಿ ಸುಮಾ ಕನಕಲಾ ಸೇರಿದಂತೆ ಉದ್ಯಮದ ಹಲವು ಪ್ರಭಾವಿ ಮಹಿಳೆಯರು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಒಕ್ಕೊರಲಿನಿಂದ ವರದಿಯನ್ನು ಸಾರ್ವಜನಿಕಗೊಳಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತೆಲುಗು ಚಿತ್ರರಂಗದ ಕಲಾವಿದೆಯರು
'ಸುಳ್ಳು ಸತ್ಯಕ್ಕಿಂತ ಬಹಳ ವೇಗವಾಗಿ ಹರಡುತ್ತದೆ': ಲೈಂಗಿಕ ದೌರ್ಜನ್ಯ ಕೇಸು ಎದುರಿಸುತ್ತಿರುವ ನಟ ಜಯಸೂರ್ಯ ಬಹಿರಂಗ ಪತ್ರ

ಖ್ಯಾತ ನಟಿ ಸಮಂತಾ ತಮ್ಮ ಪೋಸ್ಟ್‌ನಲ್ಲಿ, ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳವನ್ನು ಮುಂಚೂಣಿಗೆ ತರುವಲ್ಲಿ ಪ್ರಮುಖ ಪಾತ್ರಕ್ಕಾಗಿ ಕೇರಳದ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (ಡಬ್ಲ್ಯುಸಿಸಿ) ನ್ನು ಶ್ಲಾಘಿಸಿದ್ದಾರೆ. "ನಾವು, ತೆಲುಗು ಚಿತ್ರರಂಗದ ಮಹಿಳೆಯರು, ಹೇಮಾ ಸಮಿತಿಯ ವರದಿಯನ್ನು ಸ್ವಾಗತಿಸುತ್ತೇವೆ. ಕೇರಳದ ಡಬ್ಲ್ಯುಸಿಸಿಯ ನಿರಂತರ ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ, ಇದು ಈ ಕ್ಷಣಕ್ಕೆ ದಾರಿ ಮಾಡಿಕೊಟ್ಟಿದೆ. ಮಲಯಾಳಂ ಚಿತ್ರರಂಗದಂತೆ ತೆಲುಗು ಉದ್ಯಮದಲ್ಲಿ ಇದೇ ರೀತಿಯ ಕ್ರಮದ ತುರ್ತು ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.

ತಮ್ಮ ಹೇಳಿಕೆಯಲ್ಲಿ, ದಿ ವಾಯ್ಸ್ ಆಫ್ ವುಮೆನ್ ಹೇಮಾ ಸಮಿತಿಯ ವರದಿಯನ್ನು ಸ್ವಾಗತಿಸಿದೆ ಮತ್ತು ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಚಳುವಳಿಯನ್ನು ಮುನ್ನಡೆಸಲು ಪ್ರಮುಖ ಪಾತ್ರ ವಹಿಸಿರುವ ಕೇರಳದ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (ಡಬ್ಲ್ಯುಸಿಸಿ) ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.

ಉಪಸಮಿತಿ ವರದಿಯನ್ನು ಬಿಡುಗಡೆ ಮಾಡುವ ಮೂಲಕ ತೆಲಂಗಾಣ ಸರ್ಕಾರವು ತಮ್ಮ ನ್ಯಾಯಯುತ ಬೇಡಿಕೆಯನ್ನು ಪರಿಹರಿಸುವ ಮಹತ್ವವನ್ನು ಗುಂಪು ಒತ್ತಿಹೇಳಿದೆ.

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಲಿಂಗ ತಾರತಮ್ಯ ಮತ್ತು ಕಿರುಕುಳದ ಮೇಲೆ ಕೇಂದ್ರೀಕರಿಸಿದ ಹೇಮಾ ಸಮಿತಿಯ ವರದಿಯನ್ನು ಉನ್ನತ ಮಟ್ಟದ ಲೈಂಗಿಕ ದೌರ್ಜನ್ಯ ಘಟನೆಯ ನಂತರ 2017 ರಲ್ಲಿ ಸ್ಥಾಪಿಸಲಾಯಿತು. ನ್ಯಾಯಮೂರ್ತಿ ಕೆ. ಹೇಮಾ ನೇತೃತ್ವದ ಸಮಿತಿಯು ಮಹಿಳೆಯರ ಸುರಕ್ಷತೆ ಮತ್ತು ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳ ಕುರಿತು ತನಿಖೆ ನಡೆಸಿತು. ಡಿಸೆಂಬರ್ 2019 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಅದನ್ನು ಕಳೆದ 19ರಂದು ಕೇರಳ ಸರ್ಕಾರ ಸಾರ್ವಜನಿಕಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com