Fake currency case: ಮದರಸಾದಲ್ಲಿ RSS​ 'ದಿ ಬಿಗ್ಗೆಸ್ಟ್ ಟೆರರಿಸ್ಟ್​ ಆರ್ಗನೈಸೇಷನ್ ಇನ್​ ದಿ ಕಂಟ್ರಿ' ಪುಸ್ತಕ ಪತ್ತೆ!

ಆರ್​ಎಸ್​ಎಸ್​ ದಿ ಬಿಗ್ಗೆಸ್ಟ್ ಟೆರರಿಸ್ಟ್​ ಆರ್ಗನೈಸೇಷನ್ ಇನ್​ ದಿ ಕಂಟ್ರಿ (RSS: The Biggest Terrorist Organization in the Country) ಎನ್ನುವ ಪುಸ್ತಕವನ್ನು ಉರ್ದುವಿನಿಂದ ಹಿಂದಿಗೆ ತರ್ಜುಮೆ ಮಾಡಲಾಗಿದದ್ದು, ಈ ಪುಸ್ತಕವನ್ನು ಎಸ್​ಎಂ ಮುಷರಫ್​ ಎಂಬುವವರು ಬರೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಪ್ರಯಾಗರಾಜ್ (ಉತ್ತರಪ್ರದೇಶ): ನಕಲಿ ನೋಟು ಮುದ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮದರಸಾವೊಂದರ ಮೇಲೆ ಶೋಧ ಕಾರ್ಯಾಚರಣೆ ನಡೆಸಿದ್ದು, ಪರಿಶೀಲನೆ ವೇಳೆ ಆರ್‌ಎಸ್‌ಎಸ್ ಅನ್ನು ಭಯೋತ್ಪಾದಕ ಸಂಘಟನೆಯೊಂದಿಗೆ ಹೋಲಿಸುವ ಪುಸ್ತಕವೊಂದು ಸಿಕ್ಕಿದ್ದು, ಈ ಪುಸ್ಕತ ಇದೀಗ ವಿವಾದ ಸೃಷ್ಟಿಸಿದೆ.

ಆರ್​ಎಸ್​ಎಸ್​ ದಿ ಬಿಗ್ಗೆಸ್ಟ್ ಟೆರರಿಸ್ಟ್​ ಆರ್ಗನೈಸೇಷನ್ ಇನ್​ ದಿ ಕಂಟ್ರಿ (RSS: The Biggest Terrorist Organization in the Country) ಎನ್ನುವ ಪುಸ್ತಕವನ್ನು ಉರ್ದುವಿನಿಂದ ಹಿಂದಿಗೆ ತರ್ಜುಮೆ ಮಾಡಲಾಗಿದದ್ದು, ಈ ಪುಸ್ತಕವನ್ನು ಎಸ್​ಎಂ ಮುಷರಫ್​ ಎಂಬುವವರು ಬರೆದಿದ್ದಾರೆ.

ಮದರಸಾದಲ್ಲಿ ಆರ್​ಎಸ್​ಎಸ್​ ವಿರುದ್ಧ ಮಕ್ಕಳಲ್ಲಿ ವಿಷಬೀಜ ಬಿತ್ತಲು ಮೌಲ್ವಿ ಮೊಹಮ್ಮದ್ ತಫ್ಸೀರುಲ್ ಅರಿಫೀನ್​ ಈ ಪುಸ್ತಕವನ್ನು ಬಳಕೆ ಮಾಡುತ್ತಿರಬಹುದು ಎಂಬ ಅನುಮಾನ ವ್ಯಕ್ತವಾಗಿವೆ.

ಸಂಗ್ರಹ ಚಿತ್ರ
ದೇಶದಲ್ಲಿ ಜಾತಿಗಣತಿಗೆ ನಮ್ಮ ತಕರಾರಿಲ್ಲ, ಆದರೆ..: RSS ಸ್ಪಷ್ಟನೆ

ಆಗಸ್ಟ್ 28 ರಂದು ಅತರ್ಸುಯಿಯಾ ಪ್ರದೇಶದ ಜಾಮಿಯಾ ಹಬೀಬಿಯಾ ಮಸೀದಿ ಅಜಮ್ ಮದರಸಾದಲ್ಲಿ ನಡೆದ ದಾಳಿಯಲ್ಲಿ ನಕಲಿ ನೋಟುಗಳ ಜತೆಗೆ, ಪೊಲೀಸರು ಪುಸ್ತಕವನ್ನು ಪತ್ತೆ ಮಾಡಿದ್ದಾರೆ ಎಂದು ಪ್ರಯಾಗರಾಜ್ ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದರಸಾದಲ್ಲಿ ಈ ಪುಸ್ತಕ ಪತ್ತೆಯಾದ ಬೆನ್ನಲ್ಲೇ ಭದ್ರತಾ ಏಜೆನ್ಸಿಗಳು ಮತ್ತಷ್ಟು ಆ್ಯಕ್ಟಿವ್ ಆಗಿದ್ದು, ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.

ಶೋಧ ಕಾರ್ಯಾಚರಣೆಯಲ್ಲಿ 1 ಲಕ್ಷ ರೂಪಾಯಿಯ ನಕಲಿ ನೋಟುಗಳು ಮತ್ತು ಮುದ್ರಣಕ್ಕೆ ಬಳಸಲಾದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳೀಯ ಗುಪ್ತಚರ ಘಟಕ (LIU) ಮತ್ತು ಭಯೋತ್ಪಾದನಾ ನಿಗ್ರಹ ದಳ (ATS) ತಂಡಗಳು ಮಂಗಳವಾರ ಮದ್ರಸಾ ಸಿಬಂದಿಗಳನ್ನು ವಿಚಾರಣೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com