ಹರಿಯಾಣ ವಿಧಾನಸಭಾ ಚುನಾವಣೆ: 20 AAP ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

90 ಸದಸ್ಯ ಬಲದ ವಿಧಾನಸಭೆಗೆ ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 12 ಕೊನೆಯ ದಿನವಾಗಿದೆ. ಹೀಗಾಗಿ ಇಂದು ಎಎಪಿ 20 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ಅಕ್ಟೋಬರ್ 5 ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷವು ತನ್ನ 20 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಜೊತೆಗಿನ ಮೈತ್ರಿ ಮಾತುಕತೆಗೆ ಅಡ್ಡಿಯಾಗುವ ಸಾಧ್ಯತೆ ಇದೆ.

90 ಸದಸ್ಯ ಬಲದ ವಿಧಾನಸಭೆಗೆ ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 12 ಕೊನೆಯ ದಿನವಾಗಿದೆ. ಹೀಗಾಗಿ ಇಂದು ಎಎಪಿ 20 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಎಎಪಿ ಹರಿಯಾಣ ಘಟಕದ ಉಪಾಧ್ಯಕ್ಷ ಅನುರಾಗ್ ಧಂಡಾ ಅವರನ್ನು ಕಲಾಯತ್‌ನಿಂದ ಮತ್ತು ಇಂದು ಶರ್ಮಾ ಅವರನ್ನು ಭಿವಾನಿಯಿಂದ ಕಣಕ್ಕಿಳಿಸಿದೆ.

ಮೆಹಮ್‌ನಿಂದ ವಿಕಾಸ್ ನೆಹ್ರಾ ಮತ್ತು ರೋಹ್ಟಕ್‌ನಿಂದ ಬಿಜೇಂದರ್ ಹೂಡಾ ಅವರು ಎಎಪಿಯಿಂದ ಸ್ಪರ್ಧಿಸುತ್ತಿದ್ದಾರೆ.

ಅರವಿಂದ್ ಕೇಜ್ರಿವಾಲ್
ಹರಿಯಾಣ ವಿಧಾನಸಭೆ ಚುನಾವಣೆ: ನನ್ನ ಪತಿ ಪ್ರಧಾನಿ ಮೋದಿ ಮುಂದೆ ತಲೆಬಾಗಲ್ಲ- ಸುನೀತಾ ಕೇಜ್ರಿವಾಲ್

ಹರಿಯಾಣ ವಿಧಾನಸಭೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾತುಕತೆ ನಡೆಯುತ್ತಿದ್ದು, ಎಎಪಿ ಸ್ಪರ್ಧಿಸಲಿರುವ ಸೀಟುಗಳ ಸಂಖ್ಯೆ ಕುರಿತು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.

ಮೂಲಗಳ ಪ್ರಕಾರ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು 10 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರೆ, ಕಾಂಗ್ರೆಸ್ ಐದು ಸ್ಥಾನಗಳನ್ನು ನೀಡುತ್ತಿದೆ. ಇಂದು

ಸಂಜೆಯೊಳಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸದಿದ್ದರೆ ಎಲ್ಲಾ 90 ಸ್ಥಾನಗಳ ಅಭ್ಯರ್ಥಿಗಳ ಹೆಸರನ್ನು ತಮ್ಮ ಪಕ್ಷವು ಬಿಡುಗಡೆ ಮಾಡಲಿದೆ ಎಂದು ಎಎಪಿ ರಾಜ್ಯ ಘಟಕದ ಮುಖ್ಯಸ್ಥ ಸುಶೀಲ್ ಗುಪ್ತಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com