ಕೊಚ್ಚಿ: ಖಾಸಗಿ ಬಸ್ಸಿನೊಳಗೆ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಶಾಲಾ ಶಿಕ್ಷಕನನ್ನು ಭಾನುವಾರ ಕೊಚ್ಚಿಯಲ್ಲಿ ಬಂಧಿಸಲಾಗಿದೆ.
ಅಂಬಲಮೇಡುವಿನ 52 ವರ್ಷದ ಶಿಕ್ಷಕ ಕೆಎಂ ಕಮಲ್ ಅವರನ್ನು ಎರ್ನಾಕುಲಂ ಟೌನ್ ಸೌತ್ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಸಂಜೆ ಕಾಲೂರು ಮತ್ತು ಫೋರ್ಟ್ ಕೊಚ್ಚಿ ನಡುವೆ ಖಾಸಗಿ ಬಸ್‌ನಲ್ಲಿ ಈ ಘಟನೆ ನಡೆದಿದೆ.
ಪೆರುಂಬವೂರ್‌ನಿಂದ ಬಂದ ನಂತರ ಕಾಲೂರಿನಿಂದ ತೊಪ್ಪುಂಪಾಡಿಗೆ ಬಸ್ ಹತ್ತಿದ ಆರೋಪಿ 19 ವರ್ಷದ ಯುವತಿಗೆ ತನ್ನ ಪ್ಯಾಂಟ್ ಜಿಪ್ ಬಿಚ್ಚಿ ಅಶ್ಲೀಲ ಸನ್ನೆಗಳನ್ನು ಮಾಡಿ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾನೆ. ತಕ್ಷಣ ಯುವತಿ ಅಲಾರಾಂ ಒತ್ತಿ, ಬಸ್ ಕಂಡಕ್ಟರ್ ಹಾಗೂ ಇತರ ಪ್ರಯಾಣಿಕರನ್ನು ಎಚ್ಚರಿಸಿದ್ದಾಳೆ, ಕೂಡಲೇ ಆರೋಪಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುವತಿ ಹೇಳಿಕೆ ಸಂಗ್ರಹಿಸಿದ ನಂತರ ಆರೋಪಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಎರ್ನಾಕುಲಂ ಟೌನ್ ಸೌತ್ ಎಸ್‌ಎಚ್‌ಒ ಕುರಿಯಾಕೋಸ್ ತಿಳಿಸಿದ್ದಾರೆ. ಶಿಕ್ಷಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
Advertisement