ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಗೆ 9 ಅಭ್ಯರ್ಥಿಗಳನ್ನೊಳಗೊಂಡ ಎರಡನೇ ಪಟ್ಟಿಯನ್ನು ಆಮ್ ಆದ್ಮಿ ಪಕ್ಷ ಮಂಗಳವಾರ ಬಿಡುಗಡೆ ಮಾಡಿದೆ.
ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್ ಜೊತೆಗಿನ ಮಾತುಕತೆ ವಿಫಲಗೊಂಡರಿಂದ 20 ಅಭ್ಯರ್ಥಿಗಳನ್ನೊಳಗೊಂಡ ಮೊದಲ ಪಟ್ಟಿಯನ್ನು ಎಎಪಿ ಸೋಮವಾರ ಬಿಡುಗಡೆ ಮಾಡಿತ್ತು.
ಇಂದು ಬಿಡುಗಡೆ ಮಾಡಿರುವ ಎರಡನೇ ಪಟ್ಟಿಯಲ್ಲಿ ಇದ್ರಿ, ಅದ್ದಂಪುರ, ಬರ್ವಾಲಾ, ಟಿಯಾಗಾನ್, ಫಾರಿದಾಬಾದ್, ಬಾವಲ್ ಕ್ಷೇತ್ರ ಸೇರಿದಂತೆ 9 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಹವಾಸಿಂಗ್ ಇಂದ್ರಿ ಕ್ಷೇತ್ರದಿಂದ ಹಾಗೂ ಪ್ರವೇಶ್ ಮೆಹ್ತಾ ಫಾರಿದಾಬಾದ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಎಲ್ಲಾ 90 ಸ್ಥಾನಗಳಲ್ಲಿ AAP ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಬಿಜೆಪಿ ಸರ್ಕಾರವನ್ನು ತೊಲಗಿಸುವುದೇ ನಮ್ಮ ಗುರಿಯಾಗಿದೆ ಎಂದು ಹರಿಯಾಣ ಎಎಪಿ ರಾಜ್ಯಾಧ್ಯಕ್ಷ ಸುಶೀಲ್ ಗುಪ್ತಾ ತಿಳಿಸಿದ್ದಾರೆ.
Advertisement