ಚಂಡೀಗಢ: ಅಕ್ರಮವಾದ ಔಷಧ ಕಂಪನಿಗಳು ಮತ್ತು ಮೆಡಿಕಲ್ ಸ್ಟೋರ್‌ಗಳಿಗೆ ಸಂಬಂಧಿಸಿದ ಮಾದಕವಸ್ತು ಕಳ್ಳಸಾಗಣೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪಂಜಾಬ್ ಪೊಲೀಸ್‌ನ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆ (ಎಎನ್‌ಟಿಎಫ್) ಡ್ರಗ್ ಇನ್‌ಸ್ಪೆಕ್ಟರ್ ಶಿಶನ್ ಮಿತ್ತಲ್ ಅವರನ್ನು ಬಂಧಿಸಿದ್ದು, ರೂ. 1.49 ಕೋಟಿ ನಗದು, 260 ಗ್ರಾಂ ಚಿನ್ನ ಮತ್ತು ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದೆ. ಜೊತೆಗೆ 7.09 ಕೋಟಿ ರೂ. ನಗದು ಹೊಂದಿರುವ ಹೊಂದಿರುವ 24 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.
ಮಿತ್ತಲ್ ಮಾದಕವಸ್ತು ಕಾರ್ಯಾಚರಣೆಗಳನ್ನು ಸುಗಮಗೊಳಿಸಿದರು ಮತ್ತು ಜೈಲಿನೊಳಗಿರುವ ಕಳ್ಳಸಾಗಣೆದಾರರೊಂದಿಗೆ ಸಮನ್ವಯದಿಂದ ಮಾದಕವಸ್ತು ಹಣವನ್ನು ವರ್ಗಾವಣೆ ಮಾಡಿದ್ದಾರೆ. ಹೊರಗಡೆ ಅವರ ಜಾಲ ಸಕ್ರಿಯವಾಗುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ರಾಜ್ಯ ಪೊಲೀಸರು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಂಭೀರ ಆರ್ಥಿಕ ಅವ್ಯವಹಾರಗಳನ್ನು ಗಮನಿಸಲಾಗಿದ್ದು, ANTF 7.09 ಕೋಟಿ ರೂ. ಹಣವಿರುವ 24 ಬ್ಯಾಂಕ್ ಖಾತೆಗಳನ್ನು ಗುರುತಿಸಿ ಅವುಗಳನ್ನು ಸ್ಥಗಿತಗೊಳಿಸಿದೆ. ಇದರ ಜೊತೆಗೆ ಎರಡು ಬ್ಯಾಂಕ್ ಲಾಕರ್‌ಗಳನ್ನು ವಶಪಡಿಸಿಕೊಂಡಿದ್ದು, 1.49 ಕೋಟಿ ರೂ. ನಗದು, 260 ಗ್ರಾಂ ಚಿನ್ನ ಮತ್ತು ವಿದೇಶಿ ಕರೆನ್ಸಿ ವಶಪಡಿಸಿಕೊಂಡಿದೆ.
ಅಲ್ಲದೇ, ಜಿರಾಕ್‌ಪುರ ಮತ್ತು ದಬ್ವಾಲಿಯಲ್ಲಿ 2.40 ಕೋಟಿ ಮೌಲ್ಯದ ರಿಯಲ್ ಎಸ್ಟೇಟ್ ಸೇರಿದಂತೆ ಅಕ್ರಮ ಚಟುವಟಿಕೆಗಳ ಆದಾಯದ ಮೂಲಕ ಗಳಿಸಿದ ಗಣನೀಯ ಆಸ್ತಿಯನ್ನು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 8 ರಂದು ಪಂಜಾಬ್, ಹರಿಯಾಣ ಮತ್ತು ಚಂಡೀಘಡದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಆ ಸಂದರ್ಭದಲ್ಲಿ ಮಿತ್ತಲ್ ವೈದ್ಯಕೀಯ ರಜೆಯಲ್ಲಿದ್ದರು. ಅದು ಆಗಸ್ಟ್ 31 ರಂದು ಅಂತ್ಯವಾಗಿದ್ದು, ವಿಸ್ತರಣೆಗೆ ಅವರು ಮನವಿ ಮಾಡಿದ್ದರು. ಆದರೆ, ಅದನ್ನು ಅವರ ಇಲಾಖೆ ತಿರಸ್ಕರಿಸಿದ್ದು, ಮುಕ್ತಾಸರ್-1 ಔಷಧ ನಿಯಂತ್ರಣಾಧಿಕಾರಿಯಾಗಿ ವರ್ಗಾವಣೆ ಮಾಡಿದೆ. ಆದರೆ ಈ ಹಿಂದೆ ಅವರು ಫಾಜಿಕಾ-2 ನಲ್ಲಿ ಔಷಧ ನಿಯಂತ್ರಣಾಧಿಕಾರಿಯಾಗಿ ಅವರು ಕೆಲಸ ಮಾಡಿರುವುದರಿಂದ ಹೊಸ ಹುದ್ದೆಗೆ ಅವರು ಸೇರಿಲ್ಲ.
ಕಳೆದ ತಿಂಗಳು NDPS ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ, ಮಿತ್ತಲ್ ಅವರನ್ನು ಆರಂಭದಲ್ಲಿ ಬಂಧನ ಅಥವಾ ಅಮಾನತುಗೊಳಿಸಿರಲಿಲ್ಲ. ಆದಾಗ್ಯೂ, ಕಳೆದ ಎರಡು ವಾರಗಳಿಂದ ಹಲವು ಸುತ್ತಿನ ವಿಚಾರಣೆಯ ನಂತರ ಶುಕ್ರವಾರ ಮೊಹಾಲಿಯಲ್ಲಿ ಅವರನ್ನು ಬಂಧಿಸಲಾಯಿತು. ಮಾದಕ ವಸ್ತು ಕಳ್ಳಸಾಗಣೆದಾರರಿಗೆ ನೆರವು ಮತ್ತು ಅಕ್ರಮವಾಗಿ ಹಣ ವರ್ಗಾವಣೆ ಆರೋಪ ಅವರ ಮೇಲಿದೆ.
Advertisement