ನವದೆಹಲಿ: ಅಮೆರಿಕದಲ್ಲಿ ಸಂದರ್ಶನದ ವೇಳೆ ಭಾರತದಲ್ಲಿ ನೆಲೆಸಿರುವ ಸಿಖ್ ವಿರೋಧಿ ಹೇಳಿಕೆ ಸಂಬಂಧ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಛತ್ತೀಸಗಢದಲ್ಲಿ ಮೂರು ಎಫ್ಐಆರ್ ಗಳು ದಾಖಲಾಗಿವೆ. ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ಮತ್ತು ತಿಲಕ್ ನಗರ ಪೊಲೀಸ್ ಠಾಣೆಗಳು ಹಾಗೂ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಬಿಜೆಪಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಮೋಹನ್ ಲಾಲ್ ಗಿಹಾರ, ಬಿಜೆಪಿ ಸಿಖ್ ಸೆಲ್ ಸದಸ್ಯ ಚರಂಜಿತ್ ಸಿಂಗ್ ಲವ್ಲಿ ಮತ್ತು ಪಕ್ಷದ ಎಸ್ಟಿ ವಿಭಾಗದ ಸದಸ್ಯ ಸಿಎಲ್ ಮೀನಾ ಕಾಂಗ್ರೆಸ್ ನಾಯಕನ ವಿರುದ್ಧ ದೂರು ದಾಖಲಿಸಿದ್ದಾರೆ.
ಬಿಜೆಪಿಯ ಸಿಖ್ ಸೆಲ್ ನಾಯಕ ಚರಂಜಿತ್ ಸಿಂಗ್ ಲವ್ಲಿ ಅವರ ದೂರಿನಲ್ಲಿ, ರಾಹುಲ್ ಗಾಂಧಿ ಸಿಖ್ಖರ ಬಗ್ಗೆ ವಿದೇಶಗಳಲ್ಲಿ ತಪ್ಪಾಗಿ ಬಿಂಬಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಹುಲ್ ಗಾಂಧಿ ಅವರು ಸಾಂವಿಧಾನಿಕ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷ ಸಿಎಲ್ ಮೀನಾ ಅವರು ತಮ್ಮ ದೂರಿನಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಹೇಳಿಕೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಪ್ರಚೋದಿಸುವ ಮಾತುಗಳನ್ನು ಹೇಳಿದ್ದಾರೆ. ದೇಶದ ಆಂತರಿಕ ಭದ್ರತೆಗೆ ಗಂಭೀರ ಧಕ್ಕೆ ತರುವಂತಹ ಮಾತುಗಳನ್ನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕನ ವಿರುದ್ಧ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ:
ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಕೂಡ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಗಳಿಂದ ತಪ್ಪುದಾರಿಗೆಳೆಯುತ್ತಿದ್ದು ಈ ಕುರಿತು ದೇಶದ ಕ್ಷಮೆಯಾಚಿಸುವ ಬದಲು, ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕರನ್ನು ಹೆಚ್ಚು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಉದ್ವಿಗ್ನತೆಯನ್ನು ಉಂಟುಮಾಡುತ್ತಿದ್ದಾರೆ ಎಂದು ಹೇಳಿದರು. ರಾಹುಲ್ ಗಾಂಧಿಯವರ ಹೇಳಿಕೆಗಳು ಸಿಖ್ ಸಮುದಾಯವನ್ನು ತೀವ್ರವಾಗಿ ಘಾಸಿಗೊಳಿಸಿವೆ. ಅವರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿವೆ. ಅವರು ತಮ್ಮ ದೂರುಗಳ ಆಧಾರದ ಮೇಲೆ ದೆಹಲಿ ಪೊಲೀಸರಿಂದ ರಾಹುಲ್ ಗಾಂಧಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ಸಚ್‌ದೇವ ಪ್ರತಿಪಾದಿಸಿದ್ದಾರೆ.
Advertisement