ಪ್ರತಿ ಅಂಗಡಿ ಮಾಲಿಕ, ಬೀದಿ ಬದಿ ವ್ಯಾಪಾರಿ ಗುರುತು ಪ್ರಕಟಿಸುವುದು ಕಡ್ಡಾಯ: ಹಿಮಾಚಲ ಪ್ರದೇಶ ಸರ್ಕಾರ

ಆಹಾರ ಔಟ್ ಲೆಟ್ ಗಳಿಗೆ ಸಂಬಂಧಿಸಿದ ಆದೇಶ ಇದಾಗಿದೆ. ಲೋಕೋಪಯೋಗಿ ನಗರ ಇಲಾಖೆ ಹಾಗೂ ಪುರಸಭಾ ನಿಗಮದೊಂದಿಗೆ ಸಭೆ ನಡೆಸಿದ ಬಳಿಕ ಔಟ್ ಲೆಟ್ ಗಳ ವ್ಯಾಪಾರಿಗಳು ತಮ್ಮ ಗುರುತನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ
File pic
ಬೀದಿ ಬದಿ ವ್ಯಾಪಾರಿ (ಸಂಗ್ರಹ ಚಿತ್ರ)online desk
Updated on

ಶಿಮ್ಲಾ: ಪ್ರತಿಯೊಬ್ಬ ಅಂಗಡಿ ಮಾಲಿಕ ಹಾಗೂ ಬೀದಿ ಬದಿಯ ವ್ಯಾಪಾರಿ ತಮ್ಮ ಗುರುತನ್ನು ಪ್ರಕಟಿಸುವುದನ್ನು ಹಿಮಾಚಲ ಪ್ರದೇಶ ಸರ್ಕಾರ ಕಡ್ಡಾಯಗೊಳಿಸಿದೆ.

ಆಹಾರ ಔಟ್ ಲೆಟ್ ಗಳಿಗೆ ಸಂಬಂಧಿಸಿದ ಆದೇಶ ಇದಾಗಿದೆ. ಲೋಕೋಪಯೋಗಿ ನಗರ ಇಲಾಖೆ ಹಾಗೂ ಪುರಸಭಾ ನಿಗಮದೊಂದಿಗೆ ಸಭೆ ನಡೆಸಿದ ಬಳಿಕ ಔಟ್ ಲೆಟ್ ಗಳ ವ್ಯಾಪಾರಿಗಳು ತಮ್ಮ ಗುರುತನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ, ಸಚಿವ ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.

File pic
ಹಿಮಾಚಲ ಪ್ರದೇಶ: ಮಸೀದಿಗೆ 2 ಲಕ್ಷ ರೂ. ನೀಡಿದ್ದ ಬಿಜೆಪಿಯ ಜೈರಾಮ್ ಠಾಕೂರ್- ಕಾಂಗ್ರೆಸ್

ರಸ್ತೆ ಬದಿಗಳಲ್ಲಿ ಮಾರಾಟ ಮಾಡುವ ಆಹಾರದ ಶುದ್ಧತೆ ಬಗ್ಗೆ ಅನುಮಾನಗಳು ಮೂಡುತ್ತಿರುವುದರ ಬಗ್ಗೆ ಜನತೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಕ್ರಮಾದಿತ್ಯ ಹೇಳಿದ್ದಾರೆ. ಜನರು ಕಳವಳ, ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಉತ್ತರ ಪ್ರದೇಶ ಮಾದರಿಯ ನೀತಿಯನ್ನು ಜಾರಿಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ವಿಕ್ರಮಾದಿತ್ಯ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಆಹಾರ ಔಟ್ ಲೆಟ್ ಗಳ ಮಾಲಿಕರು ತಮ್ಮ ಹೆಸರುಗಳನ್ನು, ಗುರುತುಗಳನ್ನು ಘೋಷಿಸುವುದನ್ನು ಕಡ್ಡಾಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com