S Jaishankar
ಎಸ್ ಜೈಶಂಕರ್TNIE

ಚೀನಾ-ಭಾರತ ಸಂಬಂಧ ಇಡೀ ಜಗತ್ತಿನ ಭವಿಷ್ಯವನ್ನು ಪ್ರಭಾವಿಸಬಹುದು: ಜೈಶಂಕರ್

ದ್ವಿಪಕ್ಷೀಯ ಸಂಬಂಧಗಳು ಮುಂದುವರೆಯಬೇಕಾದರೆ ಮೊದಲು ಗಡಿ ಭಾಗದಲ್ಲಿ ಶಾಂತಿ ಮರುಸ್ಥಾಪನೆಯಾಗಬೇಕು ಎಂದು ಅವರು ಹೇಳಿದ್ದಾರೆ.
Published on

ನವದೆಹಲಿ: ಭಾರತ- ಚೀನಾ ದ್ವಿಪಕ್ಷೀಯ ಸಂಬಂಧ ಇಡೀ ಜಗತ್ತಿನ ಭವಿಷ್ಯವನ್ನು ಪ್ರಭಾವಿಸಬಲ್ಲದು ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.

ದ್ವಿಪಕ್ಷೀಯ ಸಂಬಂಧಗಳು ಮುಂದುವರೆಯಬೇಕಾದರೆ ಮೊದಲು ಗಡಿ ಭಾಗದಲ್ಲಿ ಶಾಂತಿ ಮರುಸ್ಥಾಪನೆಯಾಗಬೇಕು ಎಂದು ಅವರು ಹೇಳಿದ್ದಾರೆ.

ಏಷ್ಯಾ ಸೊಸೈಟಿ ಹಾಗೂ ಮಂಗಳವಾರ ನ್ಯೂಯಾರ್ಕ್‌ನಲ್ಲಿ ಏಷ್ಯಾ ಸೊಸೈಟಿ ಪಾಲಿಸಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಜೈಶಂಕರ್, ಚೀನಾದೊಂದಿಗೆ ಭಾರತದ ಅಹಿತಕರ ಇತಿಹಾಸವನ್ನು ಉಲ್ಲೇಖಿಸಿದ್ದು, ಚೀನಾ ಹಾಗೂ ಭಾರತದ ಸಮಾನಾಂತರ ಉಗಮ ವಿಶಿಷ್ಟವಾದ ಸಮಸ್ಯೆಯನ್ನು ಉಂಟುಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಭಾರತ-ಚೀನಾ ಸಂಬಂಧ ಏಷ್ಯಾದ ಭವಿಷ್ಯಕ್ಕೆ ಪ್ರಮುಖವಾಗಿದೆ ಎಂದು ನಾನು ಭಾವಿಸುತ್ತೇನೆ. ಒಂದು ರೀತಿಯಲ್ಲಿ, ಜಗತ್ತು ಬಹು-ಧ್ರುವೀಯವಾಗಬೇಕಾದರೆ, ಏಷ್ಯಾ ಬಹು-ಧ್ರುವೀಯವಾಗಿರಬೇಕು ಎಂದು ನೀವು ಹೇಳಬಹುದು, ಆದ್ದರಿಂದ, ಈ ಸಂಬಂಧವು ಕೇವಲ ಏಷ್ಯಾದ ಭವಿಷ್ಯದ ಮೇಲೆ ಪ್ರಭಾವ ಬೀರುವುದಷ್ಟೇ ಅಲ್ಲದೇ, ಒಂದು ರೀತಿಯಲ್ಲಿ ಬಹುಶಃ ಪ್ರಪಂಚದ ಭವಿಷ್ಯದ ಮೇಲೆಯೂ ಪ್ರಭಾವ ಬೀರುತ್ತದೆ" ಎಂದು 'ಭಾರತ, ಏಷ್ಯಾ ಮತ್ತು ವಿಶ್ವ' ಶೀರ್ಷಿಕೆಯ ಈವೆಂಟ್‌ನಲ್ಲಿ ಜೈಶಂಕರ್ ಹೇಳಿದ್ದಾರೆ.

"ನೀವು ನೆರೆಹೊರೆಯವರಾಗಿರುವ ಎರಡು ದೇಶಗಳನ್ನು ಹೊಂದಿದ್ದೀರಿ, ಅವುಗಳು ಒಂದು ಬಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಹೊಂದಿರುವ ಎರಡು ದೇಶಗಳು ಎಂಬ ಅರ್ಥದಲ್ಲಿ ಅನನ್ಯವಾಗಿವೆ. ಎರಡೂ ಜಾಗತಿಕ ಕ್ರಮದಲ್ಲಿ ಏರುತ್ತಿವೆ ಮತ್ತು ಅವುಗಳು ಸಾಮಾನ್ಯ ಗಡಿಯನ್ನು ಹೊಂದಿರುವ ಅಂಶವನ್ನು ಒಳಗೊಂಡಂತೆ ಅತಿಕ್ರಮಿಸುವ ಪರಿಧಿಗಳನ್ನು ಹೊಂದಿವೆ. ಹಾಗಾಗಿ ಇದು ನಿಜವಾಗಿಯೂ ಬಹಳ ಸಂಕೀರ್ಣವಾದ ಸಮಸ್ಯೆಯಾಗಿದೆ, ”ಎಂದು ಅವರು ಹೇಳಿದರು.

S Jaishankar
ತಂದೆ ಇದ್ದ ವಿಮಾನ ಹೈಜಾಕ್ ಆಗಿದ್ದನ್ನು ನೆನಪಿಸಿಕೊಂಡ ವಿದೇಶಾಂಗ ಸಚಿವ ಎಸ್ ಜೈಶಂಕರ್

"ಗಡಿ ವಿಷಯಗಳಿಗೆ ಸಂಬಂಧಿಸಿದಂತೆ 75 ಪ್ರತಿಶತವನ್ನು ಬಗೆಹರಿಸಲಾಗಿದೆ ಎಂದು ನಾನು ಹೇಳಿದಾಗ ಪ್ರಮಾಣೀಕರಿಸಲು ನನಗೆ ಕೇಳಲಾಯಿತು. ಇದು ಸೇನಾ ಹಿಂತೆಗೆತಕ್ಕೆ ಸಂಬಂಧಿಸಿದ್ದಾಗಿದೆ. ಸದ್ಯದ ಪ್ರಮುಖ ಸಮಸ್ಯೆ ಎಂದರೆ ಗಸ್ತು ತಿರುಗುವುದು. ನಾವಿಬ್ಬರೂ ನಿಜವಾದ ನಿಯಂತ್ರಣ ರೇಖೆಯವರೆಗೂ ಹೇಗೆ ಗಸ್ತು ತಿರುಗುತ್ತೇವೆ ಎಂದು ನಿಮಗೆ ತಿಳಿದಿದೆ, 2020ರ ನಂತರ ಗಸ್ತು ವ್ಯವಸ್ಥೆಗೆ ತೊಂದರೆಯಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.

X

Advertisement

X
Kannada Prabha
www.kannadaprabha.com