ಬಿಲ್ಕಿಸ್ ಬಾನೊ, ಸುಪ್ರೀಂಕೋರ್ಟ್ ಸಾಂದರ್ಭಿಕ ಚಿತ್ರ
ಬಿಲ್ಕಿಸ್ ಬಾನೊ, ಸುಪ್ರೀಂಕೋರ್ಟ್ ಸಾಂದರ್ಭಿಕ ಚಿತ್ರ

ಬಿಲ್ಕಿಸ್ ಬಾನೊ ಪ್ರಕರಣ: ಗುಜರಾತ್ ಸರ್ಕಾರದ ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್!

ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಉಜ್ಜಲ ಭುಯಾನ್ ಅವರಿದ್ದ ನ್ಯಾಯಪೀಠ, ಮರು ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿತು.
Published on

ನವದೆಹಲಿ: 2002ರಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ 11 ಅಪರಾಧಿಗಳಿಗೆ ನೀಡಲಾಗಿದ್ದ ಕ್ಷಮಾದಾನ ರದ್ದುಪಡಿಸುವ ಸಂದರ್ಭದಲ್ಲಿ ರಾಜ್ಯದ ವಿರುದ್ಧ ಕೆಲವು ಆಕ್ಷೇಪಣೆಗಳನ್ನೊಳಗೊಂಡಿರುವ ನ್ಯಾಯಾಲಯದ ತೀರ್ಪನ್ನು ಮರು ಪರಿಶೀಲಿಸುವಂತೆ ಗುಜರಾತ್ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಉಜ್ಜಲ ಭುಯಾನ್ ಅವರಿದ್ದ ನ್ಯಾಯಪೀಠ, ಮರು ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿತು.

ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಪುನರ್ ಪರಿಶೀಲನಾ ಅರ್ಜಿಯನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಆದೇಶ ತೃಪ್ತಿದಾಯಕವಾಗಿದೆ. ದಾಖಲೆ ಆಧಾರದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಹಾಗೆಯೇ ಪುನರ್ ಪರಿಶೀಲಿಸಲು ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಈ ಕಾರಣಗಳಿಂದಾಗಿ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿತು.

ಬಿಲ್ಕಿಸ್ ಬಾನೊ, ಸುಪ್ರೀಂಕೋರ್ಟ್ ಸಾಂದರ್ಭಿಕ ಚಿತ್ರ
ಬಿಲ್ಕಿಸ್ ಬಾನೊ ಕೇಸ್: ಆಯ್ದ ಅಪರಾಧಿಗಳಿಗೆ ಕ್ಷಮಾಪಣೆ ನೀಡುವುದನ್ನು ರಾಜ್ಯ ಸರ್ಕಾರಗಳು ಮಾಡಬಾರದು- ಸುಪ್ರೀಂ ಕೋರ್ಟ್

ಮತ್ತೊಂದು ಉನ್ನತ ನ್ಯಾಯಾಲಯದ ಪೀಠದ ಆದೇಶ ಪಾಲನೆಯನ್ನು ಅಧಿಕಾರ ಮತ್ತು "ವಿವೇಚನಾಧಿಕಾರದ ದುರುಪಯೋಗ ಹಾಗೂ ದಾಖಲೆ ಆಧಾರದ ಮೇಲೆ ದೋಷ ಸ್ಪಷ್ಟವಾಗಿದೆ ಎಂದು ಜನವರಿ 8 ರಂದು ಸುಪ್ರೀಂಕೋರ್ಟ್ ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ ಎಂದು ಗುಜರಾತ್ ಸರ್ಕಾರ ತನ್ನ ಮೇಲ್ಮನವಿಯಲ್ಲಿ ಹೇಳಿತ್ತು. ಇದನ್ನು ಪುನರ್ ಪರಿಶೀಲಿಸುವಂತೆ ಕೋರಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com