ದೆಹಲಿ: ಮನೆಯೊಂದರಲ್ಲಿ ನಾಲ್ವರು ಪುತ್ರಿಯರೊಂದಿಗೆ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ!

ಮೃತರನ್ನು ಹೀರಾಲಾಲ್ ಶರ್ಮಾ ಎಂದು ಗುರುತಿಸಲಾಗಿದೆ. ಅವರು ಕಳೆದ 28 ವರ್ಷಗಳಿಂದ ವಸಂತ್ ಕುಂಜ್‌ನಲ್ಲಿರುವ ಭಾರತೀಯ ಬೆನ್ನುಮೂಳೆ ಗಾಯ ಕೇಂದ್ರದಲ್ಲಿ (Indian Spinal Injury Centre ) ಬಡಗಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ದೆಹಲಿ ಪೊಲೀಸರು
ದೆಹಲಿ ಪೊಲೀಸರು
Updated on

ದೆಹಲಿ: ನೈಋತ್ಯ ದೆಹಲಿಯ ವಸಂತ್ ಕುಂಜ್ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ 46 ವರ್ಷದ ವ್ಯಕ್ತಿ ಮತ್ತು ಅವರ ನಾಲ್ವರು ಪುತ್ರಿಯರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ನಾಲ್ವರು ಪುತ್ರಿಯರ ಪೈಕಿ ಇಬ್ಬರು ವಿಶೇಷ ಚೇತನರಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಮೃತರನ್ನು ಹೀರಾಲಾಲ್ ಶರ್ಮಾ ಎಂದು ಗುರುತಿಸಲಾಗಿದೆ. ಅವರು ಕಳೆದ 28 ವರ್ಷಗಳಿಂದ ವಸಂತ್ ಕುಂಜ್‌ನಲ್ಲಿರುವ ಭಾರತೀಯ ಬೆನ್ನುಮೂಳೆ ಗಾಯ ಕೇಂದ್ರದಲ್ಲಿ (Indian Spinal Injury Centre ) ಬಡಗಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅವರ ನಾಲ್ವರು ಪುತ್ರಿಯರನ್ನು ನೀತು (26), ನಿಕ್ಕಿ (24), ನೀರು (23) ಮತ್ತು ನಿಧಿ (20) ಎಂದು ಗುರುತಿಸಲಾಗಿದೆ.

ಶುಕ್ರವಾರ ಮಧ್ಯಾಹ್ನ ಪತ್ತೆಯಾದ ಶವಗಳಲ್ಲಿ ಯಾವುದೇ ಗಾಯದ ಗುರುತು ಕಂಡುಬಂದಿರಲಿಲ್ಲ. ಮನೆಯಲ್ಲಿ ಮೂರು ಪ್ಯಾಕೆಟ್ ಸೆಲ್ಫೋಸ್ ವಿಷ, ಐದು ಲೋಟಗಳು ಮತ್ತು ಒಂದು ಚಮಚದಲ್ಲಿ ಅನುಮಾನಾಸ್ಪದ ದ್ರವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇದು ಆತ್ಮಹತ್ಯೆಯ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.

ವ್ಯಕ್ತಿಯ ಇಬ್ಬರು ಕಿರಿಯ ಹೆಣ್ಣುಮಕ್ಕಳು ವಿಕಲಚೇತನರಾಗಿದ್ದರು ಎಂದು ಪೊಲೀಸರು ಹೇಳಿದರೆ, ನಾಲ್ವರೂ ದೈಹಿಕವಾಗಿ ವಿಕಲಾಂಗರು ಎಂದು ನೆರೆಹೊರೆಯವರು ಹೇಳಿದ್ದಾರೆ.ಈ ಹೇಳಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ರೋಹಿತ್ ಮೀನಾ ಹೇಳಿದ್ದಾರೆ.

ದೆಹಲಿ ಪೊಲೀಸರು
ತುಮಕೂರು: ಕೆರೆಗೆ ಹಾರಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಸೆಪ್ಟೆಂಬರ್ 24 ರಂದು ಶರ್ಮಾ ಮತ್ತು ಅವರ ಪುತ್ರಿಯರನ್ನು ಕೊನೆಯದಾಗಿ ನೋಡಿದ್ದೇವೆ ಎಂದು ನೆರೆಹೊರೆಯವರು ಹೇಳಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 194 ರ ಅಡಿಯಲ್ಲಿ ವಿಚಾರಣೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಮತ್ತು ಸೋಮವಾರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com