ಪುಲ್ವಾಮ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಇಂದು ಮಹತ್ವದ ಕಾರ್ಯಾಚರಣೆ ನಡೆಸಿದ ಪೊಲೀಸರು 6 ಮಂದಿ ಉಗ್ರರ ಸಹಚರರನ್ನು ಬಂಧಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಆರು ಭಯೋತ್ಪಾದಕ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಬಂಧಿತರು ಜೈಶ್-ಎ-ಮೊಹಮ್ಮದ್‌ನ ಪಾಕಿಸ್ತಾನ ಮೂಲದ ಕಾಶ್ಮೀರಿ ಭಯೋತ್ಪಾದಕ ಉಗ್ರಗಾಮಿ ಶ್ರೇಣಿಗೆ ಸೇರಲು ಯುವಕರನ್ನು ಪ್ರಚೋದಿಸುತ್ತಿದ್ದರು. ಇದೀಗ ಇವರ ಬಂಧನವಾಗಿದ್ದು, ಇವರ ಪ್ರಚೋದನೆಯಿಂದ ಉಗ್ರ ಸಂಘಟನೆಗೆ ಸೇರಿದ ಯುವಕರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಶಂಕಿತರು ಉಗ್ರ ಸಂಘಟನೆಗೆ ಯುವಕರನ್ನು ಸೇರ್ಪಡೆಗೊಳಿಸುವ ಮುನ್ನ ಅವರಿಗೆ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ನೀಡಿ ತರಬೇತಿ ನೀಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
"ತನಿಖೆಯ ಸಮಯದಲ್ಲಿ, ಈ ಮಾಡ್ಯೂಲ್‌ನ ಭಾಗವಾಗಿದ್ದ ಯುವಕರನ್ನು ಗುರುತಿಸಲಾಗಿದ್ದು, ಜೈಲಿನಲ್ಲಿ ಒಜಿಡಬ್ಲ್ಯೂ ಸಹಾಯದಿಂದ ಪಾಕಿಸ್ತಾನ ಮೂಲದ ಭಯೋತ್ಪಾದಕನು, ಕುಲ್ಗಾಮ್ ಜಿಲ್ಲೆ ಆವಂತಿಪೋರಾದ ತ್ರಾಲ್ ಪ್ರದೇಶದಲ್ಲಿ ಭಯೋತ್ಪಾದಕ ಶ್ರೇಣಿಗೆ ಸೇರಲು ಪ್ರೇರೇಪಿಸಲ್ಪಟ್ಟ ಅನೇಕ ಯುವಕರನ್ನು ಗುರುತಿಸಿದ್ದಾನೆ ಈ ಯುವಕರಿಗೆ ಪಿಸ್ತೂಲ್, ಗ್ರೆನೇಡ್, ಐಇಡಿ ಮತ್ತು ಇತರ ಸ್ಫೋಟಕಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement