ಗುಜರಾತ್: ಸೋಮನಾಥ ದೇವಾಲಯ ಬಳಿ ಅಕ್ರಮ ಮಸೀದಿ, ದರ್ಗಾ, ವಸತಿ ಕಟ್ಟಡಗಳ ಧ್ವಂಸ!

ಈ ವೇಳೆ 36 ಜೆಸಿಬಿಗಳು, 70 ಟ್ರ್ಯಾಕ್ಟರ್‌ಗಳು, 5 ಹಿಟಾಚಿ ಯಂತ್ರಗಳು, 10 ಡಂಪರ್‌ಗಳು ಮತ್ತು 1,400 ಪೊಲೀಸರನ್ನು ನಿಯೋಜಿಸಲಾಗಿತ್ತು
ಮಸೀದಿ ಧ್ವಂಸ ಕಾರ್ಯಾಚರಣೆ
ಮಸೀದಿ ಧ್ವಂಸ ಕಾರ್ಯಾಚರಣೆ
Updated on

ಗಿರ್ ಸೋಮನಾಥ: ದೇಶದ ಹಿಂದೂಗಳ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಗುಜರಾತ್ ನ ಗಿರ್ ಸೋಮನಾಥ ಜಿಲ್ಲೆಯಲ್ಲಿರುವ ಸೋಮನಾಥ ದೇವಾಲಯ ಬಳಿ ಅಕ್ರಮವಾಗಿ ನಿರ್ಮಿಸಲಾದ ಸುಮಾರು 500 ವರ್ಷಗಳಷ್ಟು ಹಳೆಯದಾದ ಅಕ್ರಮ ಸ್ಮಶಾನ, ಮಸೀದಿ, ದರ್ಗಾ ಮತ್ತು ವಸತಿ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ.

ಸರಿಯಾದ ಸರ್ವೆ ಮಾಡಿ ನೋಟಿಸ್ ನೀಡಿದ ನಂತರವೂ ತೆರವು ಮಾಡದ ಸುಮಾರು 100 ಎಕರೆ ಜಮೀನನ್ನು ಗುಜರಾತ್ ಆಡಳಿತ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದೆ. ಈ ವೇಳೆ 36 ಜೆಸಿಬಿಗಳು, 70 ಟ್ರ್ಯಾಕ್ಟರ್‌ಗಳು, 5 ಹಿಟಾಚಿ ಯಂತ್ರಗಳು, 10 ಡಂಪರ್‌ಗಳು ಮತ್ತು 1,400 ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.

ನಿರ್ಬಂಧಿತ ಪ್ರದೇಶಗಳಲ್ಲಿ ಪ್ರತಿಭಟನೆ ಮತ್ತು ಚಳುವಳಿ ನಡೆಸಿದ ಆಧಾರದ ಮೇಲೆ ನೂರಾರು ಜನರನ್ನು ಬಂಧಿಸಲಾಗಿದೆ.

ಅಲ್ಲದೇ, ಗುಜರಾತ್ ಸರ್ಕಾರ ವಕ್ಫ್ ಅತಿಕ್ರಮಣವನ್ನು ತೆರವುಗೊಳಿಸಿದೆ. ವಕ್ಫ್ ಸೋಮನಾಥ ದೇವಾಲಯದ ಬಳಿ ಸುಮಾರು 1.5 ಕಿಮೀ ವ್ಯಾಪ್ತಿಯಷ್ಟು ಜಮೀನನ್ನು ವಕ್ಫ್ ವಶಕ್ಕೆ ಪಡೆದಿತ್ತು.ಇದೀಗ ಕಾರ್ಯಾಚರಣೆ ಮೂಲಕ ಇದನ್ನು ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ನಿರ್ಮಿಸಲಾಗಿದ್ದ ಅಕ್ರಮ ಮನೆಗಳನ್ನು ಸಹ ಧ್ವಂಸಗೊಳಿಸಲಾಗಿದ್ದು, ಆ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ಮಸೀದಿ ಧ್ವಂಸ ಕಾರ್ಯಾಚರಣೆ
Shimla: ಅಕ್ರಮವಾಗಿ ಮಸೀದಿ ನಿರ್ಮಾಣ; ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆ, ಲಾಠಿ ಚಾರ್ಜ್!

ಅತಿಕ್ರಮ ವಿರೋಧಿ ಅಭಿಯಾನದ ಭಾಗವಾಗಿ ಒಂಬತ್ತು ಧಾರ್ಮಿಕ ಸ್ಥಳಗಳು, 100 ವಸತಿ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದ್ದು, ಸುಮಾರು 320 ಕೋಟಿ ರೂ. ಮೌಲ್ಯದ ಅಂದಾಜು 102 ಎಕರೆ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com