ThinkEdu 2024: ಭಾವನೆಗಳ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಔಪಚಾರಿಕ ಶಿಕ್ಷಣ ವಿಫಲವಾಗಿದೆ- ಸ್ವಾಮಿ ಮಿತ್ರಾನಂದ

ಕೋಪ, ಅಪರಾಧ ಮನೋಭಾವ ಮತ್ತು ವೈಫಲ್ಯಗಳಂತಹ ಭಾವನೆಗಳ ನಿರ್ವಹಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲೇ ಔಪಚಾರಿಕ ಶಿಕ್ಷಣವು ವಿಫಲವಾಗಿದೆ ಎಂದು ಚೆನ್ನೈನ ಚಿನ್ಮಯ ಮಿಷನ್‌ನ ಸ್ವಾಮಿ ಮಿತ್ರಾನಂದ ಅವರು ಹೇಳಿದ್ದಾರೆ.
ಸ್ವಾಮಿ ಮಿತ್ರಾನಂದ
ಸ್ವಾಮಿ ಮಿತ್ರಾನಂದ
Updated on

ಚೆನ್ನೈ: ಕೋಪ, ಅಪರಾಧ ಮನೋಭಾವ ಮತ್ತು ವೈಫಲ್ಯಗಳಂತಹ ಭಾವನೆಗಳ ನಿರ್ವಹಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲೇ ಔಪಚಾರಿಕ ಶಿಕ್ಷಣವು ವಿಫಲವಾಗಿದೆ ಎಂದು ಚೆನ್ನೈನ ಚಿನ್ಮಯ ಮಿಷನ್‌ನ ಸ್ವಾಮಿ ಮಿತ್ರಾನಂದ ಅವರು ಹೇಳಿದ್ದಾರೆ.

ಚೆನ್ನೈನ ಚಿನ್ಮಯ ಮಿಷನ್‌ನ ಸ್ವಾಮಿ ಮಿತ್ರಾನಂದ ಅವರು ಚೆನ್ನೈಯಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸುದ್ದಿ ಸಂಸ್ಥೆ ಆಯೋಜಿಸಿರುವ 13ನೇ ಥಿಂಕ್‌ಎಡು ಸಮ್ಮೇಳನದ ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.

ನೈತಿಕ ದಿಕ್ಸೂಚಿ: ಶಿಕ್ಷಣದಲ್ಲಿ ನಮಗೆ ಇದು ಏಕೆ ಬೇಕು" ಎಂಬ ವಿಷಯದ ಬಗ್ಗೆ ಹಿರಿಯ ಪತ್ರಕರ್ತೆ ಕಾವೇರಿ ಬಾಮಜೈ ಅವರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಯಿತು. ಇದೇ ವೇಳೆ ಶಿಶುವಿಹಾರದಲ್ಲಿ ಶಿಕ್ಷಕರ ಪಾತ್ರದ ಕುರಿತಂತೆಯೂ ಚರ್ಚೆಗಳು ನಡೆದವು.

ಈ ವೇಳೆ ಮಾತನಾಡಿರುವ ಸ್ವಾಮಿ ಮಿತ್ರಾನಂದ ಅವರು, ಈ ಹಂತದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಶಿಶುವಿಹಾರದಲ್ಲಿನ ಶಿಕ್ಷಕರಿಗೆ ಹೆಚ್ಚಿನ ವೇತನ ನೀಡಬೇಕೆಂದು ನಾವು ಪ್ರತಿಪಾದಿಸುತ್ತೇನೆ. ಈ ಹಂತದಲ್ಲಿ ಮಕ್ಕಳನ್ನು ಗಮನಿಸುವ ಮತ್ತು ಅರ್ಥಮಾಡಿಕೊಳ್ಳುವ ಅತ್ಯಗತ್ಯವಾಗಿರುತ್ತದೆ. ಈ ಹಂತದಲ್ಲಿ ಶಿಕ್ಷಕರು ಮಾಡಿದ ಅವಲೋಕನಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ವಿದ್ಯಾರ್ಥಿಗಳು 8ನೇ ತರಗತಿ ಸೇರಿದಂತೆ ವಿವಿಧ ಹಂತಗಳಲ್ಲಿ ಪ್ರಗತಿ ಸಾಧಿಸುತ್ತಾರೆ ಎಂದು ಹೇಳಿದರು.

ಇದೇ ವೇಳೆ ಮಕ್ಕಳಿಗೆ ವೈಯಕ್ತಿಕ ಕಲಿಕೆಯ ಮಾರ್ಗಗಳನ್ನು ಬೆಳೆಸುತ್ತಿರುವ ನೂತನ ಶಿಕ್ಷಣ ನೀತಿ (ಎನ್ಇಪಿ)ಯನ್ನೂ ಅವರು ಶ್ಲಾಘಿಸಿದರು.

ಇಂದಿನ ವಾತಾವರಣದಲ್ಲಿ ಒಬ್ಬ ವ್ಯಕ್ತಿಯ ಗಮನವನ್ನು 2-3 ನಿಮಿಷಗಳ ಹಿಡಿದಿಟ್ಟುಕೊಳ್ಳುವುದು ಸವಾಲಾಗಿನ ಕೆಲಸವಾಗಿದೆ. ಜನರು ಆಗಾಗ್ಗೆ ತಮ್ಮ ಮೊಬೈಲ್ ಫೋನ್ ಗಳನ್ನು ನೋಡುವುದರಿಂದ ಆಲಿಸುವ ಶಕ್ತಿ ಕಡಿಮೆಯಾಗುತ್ತಿದೆ. ಮಾಹಿತಿಯ ಅಗಾಧ ಒಳಹರಿವು ಅತಿಯಾದ ವ್ಯಾಕುಲತೆಗೆ ಕಾರಣವಾಗಿದೆ, ಜನರು ಅರ್ಥಪೂರ್ಣ ಚರ್ಚೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಹೀಗಾಗಿ ಸಾಧನೆಗಳ ಜೊತೆಗೆ ಇಟ್ಟುಕೊಂಡಿರುವ ಸಂಪರ್ಕವನ್ನು ಕಡಿತಗೊಳಿಸಿ, ಪ್ರಕೃತಿಯೊಂದಿಗೆ ಮರುಸಂಪರ್ಕ ಹೊಂದಬೇಕೆಂದು ನಾನು ಒತ್ತಾಯಿಸುತ್ತೇನೆಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com