ಬಿರು ಬೇಸಿಗೆಯಲ್ಲಿ ಬ್ಲಾಂಕೆಟ್ ವಿತರಿಸಿದ ಬಿಹಾರ BJP ಸಚಿವ; 'ವಿಲಕ್ಷಣ ವರ್ತನೆ' ಎಂದು RJD ಟೀಕೆ

“ಏಪ್ರಿಲ್ 6 ರಂದು ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಸಚಿವರು ಜನರಿಗೆ ‘ಆಂಗ್ ವಸ್ತ್ರ’ ಹಸ್ತಾಂತರಿಸುವ ಮೂಲಕ ಗೌರವಿಸಿದರು” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಬಿರು ಬೇಸಿಗೆಯಲ್ಲಿ ಬ್ಲಾಂಕೆಟ್ ವಿತರಿಸಿದ ಬಿಹಾರ ಸಚಿವ
ಬಿರು ಬೇಸಿಗೆಯಲ್ಲಿ ಬ್ಲಾಂಕೆಟ್ ವಿತರಿಸಿದ ಬಿಹಾರ ಸಚಿವ
Updated on

ಪಾಟ್ನಾ: ಬಿಹಾರ ಜನ ಬಿಸಿಲಿನಿಂದ ತತ್ತರಿಸಿದ್ದು, ರಾಜ್ಯದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಇಂತಹ ಸಂದರ್ಭದಲ್ಲಿ ಬಿಹಾರ ಕ್ರೀಡಾ ಸಚಿವ ಸುರೇಂದ್ರ ಕುಮಾರ್ ಮೆಹ್ತಾ ಅವರು ಜನರಿಗೆ ಬ್ಲಾಂಕೆಟ್ ವಿತರಿಸುತ್ತಿರುವ ವಿಡಿಯೋ ಪೋಸ್ಟ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ.

ಬಿಜೆಪಿಯ ಸಂಸ್ಥಾಪನಾ ದಿನದ ಅಂಗವಾಗಿ ಬೇಗುಸರಾಯ್ ಜಿಲ್ಲೆಯ ಮನ್ಸುರ್ಚಕ್ ಬ್ಲಾಕ್‌ನ ಅಹಿಯಾಪುರ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಸುಮಾರು 700 ಜನರಿಗೆ ಸಾಂಪ್ರದಾಯಿಕ ಬಟ್ಟೆಗಳು ಮತ್ತು ಬ್ಲಾಂಕೆಟ್ ಗಳನ್ನು ವಿತರಿಸಿದರು.

“ಏಪ್ರಿಲ್ 6 ರಂದು ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಸಚಿವರು ಜನರಿಗೆ ‘ಆಂಗ್ ವಸ್ತ್ರ’ ಹಸ್ತಾಂತರಿಸುವ ಮೂಲಕ ಗೌರವಿಸಿದರು” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

“ಫಲಾನುಭವಿಗಳಿಗೆ ಬಟ್ಟೆಗಳ ಅಗತ್ಯ ಇತ್ತು. ಅವರಿಗೆ ಸಾಂಪ್ರದಾಯಿಕ ‘ಆಂಗ್ ವಸ್ತ್ರ’ವನ್ನು ನೀಡಲು ನಾವು ಈ ಸಂದರ್ಭವನ್ನು ಆಯ್ಕೆ ಮಾಡಿಕೊಂಡೆವು. ಇದೇ ವೇಳೆ ಜನರಿಗೆ ಬ್ಲಾಂಕೆಟ್ ಅನ್ನು ಸಹ ಹಸ್ತಾಂತರಿಸಲಾಯಿತು” ಎಂದು ಸಚಿವರ ಆಪ್ತರೊಬ್ಬರು ಈ ವರದಿಗಾರರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಬಿರು ಬೇಸಿಗೆಯಲ್ಲಿ ಬ್ಲಾಂಕೆಟ್ ವಿತರಿಸಿದ ಬಿಹಾರ ಸಚಿವ
ಬಿಹಾರ: 'ಹಿಂದ್ ಸೇನಾ' ಎಂಬ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಐಪಿಎಸ್ ಅಧಿಕಾರಿ

ಬಿರು ಬೇಸಿಗೆಯಲ್ಲಿ ಸಚಿವರು ಬ್ಲಾಂಕೆಟ್ ವಿತರಿಸುವ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಚುನಾವಣೆ ಸಮೀಪಿಸುತ್ತಿರುವ ಬಿಹಾರದಲ್ಲಿ ಅವರ ಈ ಕ್ರಮ ರಾಜಕೀಯ ಟೀಕೆಗೆ ಕಾರಣವಾಗಿದೆ. ಟೀಕೆ ವ್ಯಕ್ತವಾಗುತ್ತಿದ್ದಂತೆ ಸಚಿವ ಮೆಹ್ತಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಿಂದ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

"ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರದ ಈ ವರ್ತನೆಗೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು 'ವಿಲಕ್ಷಣ ವರ್ತನೆ' ಸಚಿವ ಮೆಹ್ತಾ ಅವರ ನಡೆಯನ್ನು ಆರ್‌ಜೆಡಿ ನಾಯಕ ನಿರಂಜನ್ ಯಾದವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com