ಶಾಪಿಂಗ್ ಮಾಡುತ್ತಿದ್ದ ಪತಿಯ 'ಗುಪ್ತಾಂಗ'ಕ್ಕೆ ಕೈ ಹಾಕಿದ ಯುವತಿ; ಪತ್ನಿ ರೌದ್ರಾವತಾರ, ಪತಿಗೂ ಕಪಾಳಮೋಕ್ಷ!

ಯುವತಿಯೊಬ್ಬಳು ಆ ವ್ಯಕ್ತಿಗೆ ಡಿಕ್ಕಿ ಹೊಡೆದು ಆತನ ಗುಪ್ತಾಂಗವನ್ನು ಹಿಡಿದುಕೊಳ್ಳುತ್ತಾಳೆ. ಇದೇನಾಗುತ್ತಿದೆ ಎಂದು ಗೊತ್ತಿಲ್ಲದೆ ಆ ವ್ಯಕ್ತಿ ಹಾಗೆಯೇ ನಿಂತುಬಿಡುತ್ತಾನೆ.
Woman grabs the mans private part infront of his wife
ವ್ಯಕ್ತಿಯ ಗುಪ್ತಾಂಗಕ್ಕೆ ಕೈ ಹಾಕಿದ ಯುವತಿ
Updated on

ನವದೆಹಲಿ: ಮಳಿಗೆಯೊಂದರಲ್ಲಿ ಶಾಪಿಂಗ್ ಮಾಡುತ್ತಿದ್ದ ವೇಳೆ ಯುವತಿಯೊಬ್ಬಳು ಗಂಡನ ಗುಪ್ತಾಂಗಕ್ಕೆ ಕೈ ಹಾಕಿದಳು ಎಂಬ ಒಂದೇ ಕಾರಣಕ್ಕೆ ಪತ್ನಿ ತನ್ನ ರೌದ್ರಾವತಾರ ತೋರಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಈ ವಿಡಿಯೋ ಎಲ್ಲಿಯದ್ದು ಎಂಬುದು ತಿಳಿದು ಬಂದಿಲ್ಲವಾದರೂ ವಿಡಿಯೋದಲ್ಲಿ ಅಂಗಡಿಯಲ್ಲಿ ಪತಿ ನಿಂತಿದ್ದಾಗ ಅಲ್ಲಿಗೆ ಬಂದ ಯುವತಿಯೊಬ್ಬಳು ಪತ್ನಿ ಎದುರೇ ಆಕೆಯ ಗಂಡನ ಗುಪ್ತಾಂಗಕ್ಕೆ ಕೈ ಹಾಕಿ ಅಲ್ಲಿಯೇ ನಿಂತಿದ್ದಾಳೆ. ಇದನ್ನು ಗಮನಿಸಿದ ಪತ್ನಿ ಆಕ್ರೋಶಗೊಂಡು ಆಕೆಯ ಜುಟ್ಟು ಹಿಡಿದು ಬಲವಾಗಿ ಎಳೆದಿದ್ದಾಳೆ. ಈ ವೇಳೆ ಯುವತಿ ಕೆಳಗೆ ಬಿದ್ದಿದ್ದಾಳೆ. ಈ ವಿಡಿಯೋ ವ್ಯಾಪಕ ವೈರಲ್ ಆಗಿದೆ.

ಆಗಿದ್ದೇನು?

ಮನೆಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಗಂಡ-ಹೆಂಡತಿ ಅಂಗಡಿಯೊಂದಕ್ಕೆ ಹೋಗಿದ್ದರು. ಅವರು ಬಾಗಿಲ ಬಳಿ ನಿಂತಿರುವಾಗ ಆಗಷ್ಟೇ ಅಂಗಡಿಯಿಂದ ಹೋಗುತ್ತಿದ್ದ ಯುವತಿಯೊಬ್ಬಳು ಆ ವ್ಯಕ್ತಿಗೆ ಡಿಕ್ಕಿ ಹೊಡೆದು ಆತನ ಗುಪ್ತಾಂಗವನ್ನು ಹಿಡಿದುಕೊಳ್ಳುತ್ತಾಳೆ. ಇದೇನಾಗುತ್ತಿದೆ ಎಂದು ಗೊತ್ತಿಲ್ಲದೆ ಆ ವ್ಯಕ್ತಿ ಹಾಗೆಯೇ ನಿಂತುಬಿಡುತ್ತಾನೆ. ಇದನ್ನು ನೋಡಿದ ಪತ್ನಿ ಆಕೆಯ ಕೈ ಹಿಡಿದು ಎಳೆದು ಜುಟ್ಟು ಹಿಡಿದು ಬಿಸಾಡುತ್ತಾಳೆ. ಈ ವೇಳೆ ಯುವತಿ ಕೆಳಗೆ ಬೀಳುತ್ತಾಳೆ.

Woman grabs the mans private part infront of his wife
ಟಿವಿ ಸಂದರ್ಶನದಲ್ಲಿ ಪ್ರಧಾನಿ ಮೋದಿ, RSS ನಿಂದನೆ ಆರೋಪ: ಕನ್ಹಯ್ಯಾ ಕುಮಾರ್ ವಿರುದ್ಧ ಪೊಲೀಸರಿಗೆ BJP ದೂರು

ಇದೇ ಸಂದರ್ಭದಲ್ಲಿ ಪತಿ ಪತ್ನಿಯನ್ನು ಸಮಾಧಾನ ಮಾಡಲು ಮುಂದಾಗುತ್ತಾನೆಯಾದರೂ ಆಕ್ರೋಶಗೊಂಡಿದ್ದ ಪತ್ನಿ ಪತಿಗೂ ಕಪಾಳ ಮೋಕ್ಷ ಮಾಡಿ ನಾಚಿಕೆಯಾಗುವುದಿಲ್ಲವೇ.. ಆಕೆ ಹಿಡಿದುಕೊಂಡಿದ್ದರೆ ಸುಮ್ಮನೇ ನಿಂತಿದ್ದೀಯಾ ಎನ್ನುವ ರೀತಿಯಲ್ಲಿ ಗದರುತ್ತಾಳೆ. ಇವಿಷ್ಟೂ ಘಟನೆ ಅಂಗಡಿಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಎಕ್ಸ್​ನಲ್ಲಿ ಕಾಣಿಸಿಕೊಂಡಿರುವ ಈ ವಿಡಿಯೋ ಗಂಟೆಗಳಲ್ಲೇ ಸಾವಿರಾರು ವೀಕ್ಷಣೆಗಳನ್ನು ಪಡೆದಿದ್ದು, ಸಾವಿರಾರು ಮೀಮ್ ಗಳು ಹರಿದಾಡುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com