ಬ್ಯಾಂಕಾಕ್​ಗೆ ಹೋಗಿರುವುದು ಮನೆಯಲ್ಲಿ ಗೊತ್ತಾಗಬಾರದು ಅಂತ ಪಾಸ್‌ಪೋರ್ಟ್ ಪೇಜ್ ಹರಿದ ವ್ಯಕ್ತಿಯ ಬಂಧನ!

ಭಲೇರಾವ್ ಅವರು ಕಳೆದ ವರ್ಷ ನಾಲ್ಕು ಬಾರಿ ಬ್ಯಾಂಕಾಕ್‌ಗೆ ಭೇಟಿ ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಸ್‌ಪೋರ್ಟ್
ಪಾಸ್‌ಪೋರ್ಟ್
Updated on

ಮುಂಬೈ: ತಾನು ಬ್ಯಾಂಕಾಕ್‌ಗೆ ಹೋಗಿರುವುದು ತನ್ನ ಕುಟುಂಬಕ್ಕೆ ಗೊತ್ತಾಗಬಾರದು ಎಂದು ಪಾಸ್‌ಪೋರ್ಟ್‌ನ ಪುಟಗಳನ್ನು ಹರಿದು ಹಾಕಿದ 51 ವರ್ಷದ ಪುಣೆ ನಿವಾಸಿಯನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(CSMIA) ವಲಸೆ ಅಧಿಕಾರಿಗಳು ಆರೋಪಿ ವಿಜಯ್ ಭಲೇರಾವ್ ಅವರನ್ನು ತಡೆದರು. ಅವರ ಪಾಸ್‌ಪೋರ್ಟ್‌ ಪರಿಶೀಲಿಸಿದಾಗ ಕೆಲವು ಪುಟಗಳು ಹರಿದು ಹೋಗಿರುವುದು ಕಂಡುಬಂದಿದೆ.

ಭಲೇರಾವ್ ಅವರು ಕಳೆದ ವರ್ಷ ನಾಲ್ಕು ಬಾರಿ ಬ್ಯಾಂಕಾಕ್‌ಗೆ ಭೇಟಿ ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಸ್‌ಪೋರ್ಟ್
ಬೆಂಗಳೂರು-ಬ್ಯಾಂಕಾಕ್ ನಡುವೆ ನೇರ ಸ್ಪೈಸ್‌ಜೆಟ್ ವಿಮಾನಯಾನ

ಈ ತಿಂಗಳ ಆರಂಭದಲ್ಲಿ, ಅವರು ಮುಂಬೈ ವಿಮಾನ ನಿಲ್ದಾಣದಿಂದ ಇಂಡೋನೇಷ್ಯಾಕ್ಕೆ ಪ್ರಯಾಣ ಬೆಳೆಸಿದರು.

ಬ್ಯಾಂಕಾಕ್‌ಗೆ ತಾನು ಭೇಟಿ ನೀಡಿರುವುದನ್ನು ತನ್ನ ಕುಟುಂಬದಿಂದ ಮರೆಮಾಚಲು ಅವರು ತಮ್ಮ ಪಾಸ್‌ಪೋರ್ಟ್‌ನ ಪುಟಗಳನ್ನು ಹರಿದು ಹಾಕಿದ್ದಾರೆ ಎಂಬುದು ಅವರ ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಭಲೇರಾವ್ ಅವರನ್ನು ಸಹಾರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಭಾರತೀಯ ನ್ಯಾಯ ಸಂಹಿತಾ(BNS) ಮತ್ತು ಪಾಸ್‌ಪೋರ್ಟ್ ಕಾಯ್ದೆಯಡಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com