ಮೇ 1ರಿಂದ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ? ಇದು ಹೇಗೆ ಕೆಲಸ ಮಾಡುತ್ತದೆ?

ಜಾಗತಿಕ ಸಂಚರಣೆ ಉಪಗ್ರಹ ವ್ಯವಸ್ಥೆ (GNSS) ಏಪ್ರಿಲ್ 1 ರಿಂದ ಜಾರಿಗೆ ಬರುವ ನಿರೀಕ್ಷೆಯಿತ್ತು, ವಿಳಂಬವಾಗಿ ಈಗ ಮೇ 1ರಿಂದ ಜಾರಿಗೆ ಬರುವ ಸಾಧ್ಯತೆಯಿದೆ.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಮೇ 1 ರಿಂದ ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಪ್ರಯಾಣವು ಹೆಚ್ಚು ಸುಗಮವಾಗಲಿದೆ, ಫಾಸ್ಟ್ ಟ್ಯಾಗ್ ಗಳ ಬದಲು ಹೊಸ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.

ಜಾಗತಿಕ ಸಂಚರಣೆ ಉಪಗ್ರಹ ವ್ಯವಸ್ಥೆ (GNSS) ಏಪ್ರಿಲ್ 1 ರಿಂದ ಜಾರಿಗೆ ಬರುವ ನಿರೀಕ್ಷೆಯಿತ್ತು, ವಿಳಂಬವಾಗಿ ಈಗ ಮೇ 1ರಿಂದ ಜಾರಿಗೆ ಬರುವ ಸಾಧ್ಯತೆಯಿದೆ.

ಈ ಬಗ್ಗೆ ಮಾತನಾಡಿರುವ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ, ಮುಂದಿನ 15 ದಿನಗಳಲ್ಲಿ ನಾವು ಹೊಸ ಟೋಲ್ ನೀತಿಯನ್ನು ತರುತ್ತಿದ್ದೇವೆ. ಟೋಲ್ ಪ್ಲಾಜಾಗಳಿಗಾಗಿ ನಿಲ್ಲಬೇಕಾಗಿಲ್ಲದ ಕಾರಣ ನಾವು ಸ್ಯಾಟಲೈಟ್ ಟೋಲ್ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದ್ದೇವೆ ಎಂದರು.

GNSS ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ?

ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಒಂದು ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ಪ್ರಯಾಣಿಸಿದ ದೂರವನ್ನು ಆಧರಿಸಿ ಅವರ ಬ್ಯಾಂಕ್ ಖಾತೆಗಳಿಂದ ನೇರವಾಗಿ ಹಣವನ್ನು ಕಡಿತಗೊಳಿಸಲಾಗುತ್ತದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪ್ರಕಾರ, ಹೊಸ ವ್ಯವಸ್ಥೆಯು ಸಮಯ ಮತ್ತು ವೆಚ್ಚ-ಪರಿಣಾಮಕಾರಿ ಮತ್ತು ವೇಗವಾಗಿರುತ್ತದೆ.

GNSS, FASTag ಗಿಂತ ಹೇಗೆ ಭಿನ್ನವಾಗಿದೆ?

FASTag ವ್ಯವಸ್ಥೆಯು ಸಾಂಪ್ರದಾಯಿಕ ನಗದು ಸಂಗ್ರಹ ವಿಧಾನಕ್ಕಿಂತ ವೇಗವಾಗಿದ್ದರೂ, ವಾಹನಗಳು ಟೋಲ್ ಬೂತ್‌ನಲ್ಲಿ ಹಲವೊಮ್ಮೆ ಕಾದು ನಿಲ್ಲಬೇಕಾಗುತ್ತದೆ. ಹಲವು ಬಾರಿ ವಿಶೇಷವಾಗಿ ಪೀಕ್ ಅವರ್ ಗಳಲ್ಲಿ ಇದು ದೀರ್ಘ ಸರತಿ ಸಾಲುಗಳಿಗೆ ಕಾರಣವಾಗುತ್ತದೆ.

ಆದಾಗ್ಯೂ, ಜಿಎನ್ ಎಸ್ ಎಸ್ ವ್ಯವಸ್ಥೆಯು ವಾಹನಗಳ ಸ್ಥಳಗಳನ್ನು ಪತ್ತೆಹಚ್ಚಲು ಉಪಗ್ರಹಗಳೊಂದಿಗೆ ಸಂವಹನ ನಡೆಸುವ ವರ್ಚುವಲ್ ಟೋಲ್ ಬೂತ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಟ್ರ್ಯಾಕ್ ಮಾಡಲಾದ ಸ್ಥಳದ ಪ್ರಕಾರ, ವಾಹನವು ಪ್ರಯಾಣಿಸಿದ ದೂರವನ್ನು ವಿಶ್ಲೇಷಣೆ ಮಾಡಿ ಟೋಲ್ ನ್ನು ಲೆಕ್ಕಹಾಕಲಾಗುತ್ತದೆ.

ಹೊಸ ವ್ಯವಸ್ಥೆಯು ಭೌತಿಕ ಟೋಲ್ ಬೂತ್‌ಗಳನ್ನು ಸ್ಥಾಪಿಸುವ ಅಗತ್ಯವನ್ನು ನಿವಾರಿಸುವುದಲ್ಲದೆ, ಬಳಕೆದಾರರಿಗೆ ಹೊಂದಿಕೊಳ್ಳುವ ಪಾವತಿ ಆಯ್ಕೆಗಳನ್ನು ಒದಗಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com