Rare Wildlife Sighting: ಹೆಬ್ಬಾವು ತಿಂದ ಹುಲಿ.. ಮುಂದೇನಾಯ್ತು?; Pilibhit Tiger Reserveನಲ್ಲಿ ಅಪರೂಪದ ದೃಶ್ಯ

ಸಫಾರಿಗೆ ಆಗಮಿಸಿದ್ದ ಪ್ರವಾಸಿಗರು ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
Tiger Seen Eating Dead Python
ಹೆಬ್ಬಾವು ತಿಂದ ಹುಲಿ
Updated on

ಲಖನೌ: ಹುಲಿ ಅಭಯಾರಣ್ಯದಲ್ಲಿ ಅತಿ ಅಪರೂಪದ ದೃಶ್ಯವೊಂದು ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹುಲಿಯೊಂದು ಹೆಬ್ಬಾವನ್ನು ತಿಂದ ವಿಡಿಯೋ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ (Uttar Pradesh) ಪಿಲಿಭಿಟ್ ಹುಲಿ ಅಭಯಾರಣ್ಯದಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಸಫಾರಿಗೆ ಆಗಮಿಸಿದ್ದ ಪ್ರವಾಸಿಗರು ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಹುಲಿಯೊಂದು ಹೆಬ್ಬಾವನ್ನು ತಿಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿರುವಂತೆ ಕಾಡಿನ ರಸ್ತೆಯಲ್ಲಿ ಬೇಟೆ ಅರಸಿ ಬಂದ ಹುಲಿಯೊಂದು ಆಹಾರಕ್ಕಾಗಿ ಅತ್ತ ಇತ್ತ ನೋಡಿದ್ದು ಈ ವೇಳೆ ರಸ್ತೆ ಬದಿಯಲ್ಲಿ ಹೆಬ್ಬಾವು ಕಂಡಿದೆ. ಹತ್ತಿರ ಹೋಗಿ ನೋಡಿದ ಹುಲಿ ಅದನ್ನು ತನ್ನ ಕಾಲಿನಿಂದ ಸ್ಪರ್ಶ ಮಾಡಿದೆ.

ಅಷ್ಟು ಹೊತ್ತಿಗಾಗಲೇ ಹಾವು ಸತ್ತಿತ್ತು. ಈ ವೇಳೆ ನೋಡ ನೋಡುತ್ತಲೇ ಹುಲಿ ಹಾವನ್ನು ತಿಂದಿದೆ. ಈ ವಿಡಿಯೋದಲ್ಲಿ ಹುಲಿ ಹಾವನ್ನು ತಿನ್ನುವುದನ್ನು ಮಾತ್ರ ತೋರಿಸಲಾಗಿದೆ. ಆ ಹಾವನ್ನು ಹುಲಿಯೇ ಬೇಟೆಯಾಡಿತ್ತಾ ಅಥವಾ ಹಾವು ಮೊದಲೇ ಸತ್ತುಬಿದ್ದಿತ್ತಾ ಎಂಬುದು ಗೊತ್ತಾಗಿಲ್ಲ.

ಹುಲ್ಲು ತಿಂದ ಹುಲಿ

ಅಚ್ಚರಿ ಎಂದರೆ ಹಾವನ್ನು ತಿಂದು ಸ್ವಲ್ಪ ಸಮಯದ ನಂತರ ಹುಲಿ ಹುಲ್ಲನ್ನು ತಿನ್ನತೊಡಗಿತು. ಇದರಿಂದ ಪ್ರವಾಸಿಗರು ಅಚ್ಚರಿಗೊಂಡಿದ್ದು, ಇದಾದ ಕೆಲವೇ ಕ್ಷಣಗಳಲ್ಲಿ ಹುಲಿ ವಾಂತಿ ಮಾಡಿಕೊಳ್ಳಲಾರಂಭಿಸಿತು.

ಸ್ಥಳಕ್ಕೆ ಅಧಿಕಾರಿಗಳ ದೌಡು.. ಹುಲಿ ಆರೋಗ್ಯದ ಕುರಿತು ಮೇಲ್ವಿಚಾರಣೆ

ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಫಿಲಿಬಿಟ್ ಅರಣ್ಯಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಹುಲಿ ಆರೋಗ್ಯದ ಕುರಿತು ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com