Kia Motors ಘಟಕದಲ್ಲಿ 900 ಎಂಜಿನ್ ಕದ್ದ ಖತರ್ನಾಕ್ ಕಳ್ಳರು; 9 ಆರೋಪಿಗಳು ವಶಕ್ಕೆ!

ಆಂಧ್ರ ಪ್ರದೇಶದ ಸತ್ಯ ಸಾಯಿ ಜಿಲ್ಲೆಯಲ್ಲಿರುವ ಕಿಯಾ ಮೋಟಾರ್ಸ್‌ ಘಟಕದಲ್ಲಿ 900 ಎಂಜಿನ್‌ಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.
Kia Motors plant in Andhra Pradesh
ಕಿಯಾ ಮೋಟರ್ಸ್ (ಸಂಗ್ರಹ ಚಿತ್ರ)
Updated on

ಅನಂತಪುರಂ: ಖ್ಯಾತ ಕಾರು ತಯಾರಿಕಾ ಸಂಸ್ಥೆ ಕಿಯಾ ಮೋಟರ್ಸ್ ನ ಆಂಧ್ರ ಪ್ರದೇಶ ಘಟಕದಲ್ಲಿ ಬರೊಬ್ಬರಿ 900 ಕಾರುಗಳ ಎಂಜಿನ್ ಗಳು ಕಳವಾಗಿದ್ದು, ಈ ಪ್ರಕರಣ ಸಂಬಂಧ ಆಂಧ್ರ ಪ್ರದೇಶ ಪೊಲೀಸರು 9 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಆಂಧ್ರ ಪ್ರದೇಶದ ಸತ್ಯ ಸಾಯಿ ಜಿಲ್ಲೆಯಲ್ಲಿರುವ ಕಿಯಾ ಮೋಟಾರ್ಸ್‌ ಘಟಕದಲ್ಲಿ 900 ಎಂಜಿನ್‌ಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಳೆದ ತಿಂಗಳು ಸಂಸ್ಥೆಯ ಆಂತರಿಕ ಲೆಕ್ಕ ಪರಿಶೋಧನೆಯ ವೇಳೆ, ಎಂಜಿನ್‌ಗಳು ಕಾಣೆಯಾಗಿರುವುದು ತಿಳಿದು ಬಂದಿತ್ತು. ಮಾರ್ಚ್‌ 19ರಂದು ಕಿಯಾ ಮೋಟಾರ್ಸ್‌ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಈ ಸಂಬಂಧ ಅಧಿಕೃತ ದೂರು ನೀಡಿದ್ದರು.

Kia Motors plant in Andhra Pradesh
ಸದ್ಯದಲ್ಲೇ ಭಾರತ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಕಿಯಾ ಮೋಟರ್ಸ್

ಅಂತಾರಾಷ್ಟ್ರೀಯ ಕಾರು ಉದ್ಯಮವಾಗಿರುವ ಕಿಯಾ ಮೋಟರ್ಸ್ ಸಂಸ್ಥೆಯಿಂದಲೇ ಇಷ್ಟೊಂದು ದೊಡ್ಡ ಸಂಖ್ಯೆಯ ಎಂಜಿನ್‌ಗಳು ಕಣ್ಮರೆಯಾಗಿರುವುದು ವಿಚಿತ್ರವಾಗಿದ್ದರೆ, ಅವುಗಳನ್ನು ಎಲ್ಲಿಗೆ ಸ್ಥಳಾಂತರಿಸಲಾಯಿತು ಮತ್ತು ಅವುಗಳನ್ನು ಯಾರಿಗೆ ಮಾರಿ ಎಷ್ಟು ಹಣಗಳಿಸಲಾಯಿತು ಎಂಬುದು ಬಗೆಹರಿಯದ ಮತ್ತೊಂದು ರಹಸ್ಯವಾಗಿದೆ.

ಪ್ರಕರಣ ಕುರಿತು ತನಿಖೆ ನಡೆಸಿದ ಆಂಧ್ರಪ್ರದೇಶ ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಕದ್ದ ಎಂಜಿನ್‌ಗಳನ್ನು ದೇಶದ ಅನೇಕ ರಾಜ್ಯಗಳಿಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಆಂಧ್ರಪ್ರದೇಶದ ಗಡಿಯಲ್ಲಿ ಎಂಜಿನ್‌ ಕಳ್ಳಸಾಗಣೆಯ ಅಕ್ರಮ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂದಹಾಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯ ವಿಭಜನೆಯ ನಂತರ ಆಂಧ್ರ ಪ್ರದೇಶದಲ್ಲಿ ಸ್ಥಾಪನೆಯಾದ ಮೊದಲ ದೊಡ್ಡ ಪ್ರಮಾಣದ ಉದ್ಯಮ ಎಂಬ ಕೀರ್ತಿಗೆ ಕಿಯಾ ಮೋಟರ್ಸ್ ಭಾಜನವಾಗಿತ್ತು. ಸಂಸ್ಛೆಯ ಪೆನುಕೊಂಡ ಸ್ಥಾವರದಿಂದ ಮೊದಲ ಕಾರನ್ನು ಜೂನ್ 2019 ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com