Pahalgam attack: ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಸ್ಥಳೀಯ ಉಗ್ರರ ಕೈವಾಡ ಬಹಿರಂಗ

ಭದ್ರತಾ ಪಡೆಗಳ ಅನುಪಸ್ಥಿತಿ ಮತ್ತು ವಾಹನ ಸಂಚಾರಕ್ಕೆ ಅವಕಾಶವಿಲ್ಲದ ಕಾರಣ ಭಯೋತ್ಪಾದಕರು ಬೈಸರನ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
Security personnel rush to the spot after terrorists attacked a group of tourists at Pahalgam, in Anantnag district, Jammu & Kashmir
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಗುಂಪಿನ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ನಂತರ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸುತ್ತಿರುವುದು
Updated on

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದಾರೆ.

ಭದ್ರತಾ ಪಡೆಗಳ ಅನುಪಸ್ಥಿತಿ ಮತ್ತು ವಾಹನ ಸಂಚಾರಕ್ಕೆ ಅವಕಾಶವಿಲ್ಲದ ಕಾರಣ ಭಯೋತ್ಪಾದಕರು ಬೈಸರನ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ರಕ್ಷಣಾ ಕಾರ್ಯಾಚರಣೆ ನಿಧಾನವಾಗಲು ಮತ್ತು ಸಾವುನೋವುಗಳನ್ನು ಹೆಚ್ಚಿಸಲು ಉಗ್ರರು ಈ ಸ್ಥಳವನ್ನು ಆಯ್ಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Security personnel rush to the spot after terrorists attacked a group of tourists at Pahalgam, in Anantnag district, Jammu & Kashmir
Pahalgam terror attack: ಭದ್ರತಾ ಸಂಸ್ಥೆಗಳಿಂದ ಮೂವರ ರೇಖಾಚಿತ್ರ ಬಿಡುಗಡೆ!

"ಅನಂತ್‌ನಾಗ್‌ನ ಆದಿಲ್ ಗುರಿ ಮತ್ತು ಸೋಪೋರ್‌ನ ಆಸಿಫ್ ಶೇಖ್ ಎಂಬ ಇಬ್ಬರು ಸ್ಥಳೀಯರು ಉಗ್ರರು ಈ ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ" ಎಂದು ಖಚಿತ ಮೂಲಗಳು ತಿಳಿಸಿವೆ.

ಸ್ಥಳೀಯ ಪೊಲೀಸರು ಒದಗಿಸಿದ ಮಾಹಿತಿಯನ್ನು NIA ತಂಡ ಮತ್ತಷ್ಟು ಪರಿಶೀಲಿಸುತ್ತಿದೆ.

ಪಾಕಿಸ್ತಾನಿ ಮತ್ತು ಸ್ಥಳೀಯ ಕಾಶ್ಮೀರಿ ಭಯೋತ್ಪಾದಕರು ಹೆಲ್ಮೆಟ್ ಗೆ ಅಳವಡಿಸಿದ ಕ್ಯಾಮೆರಾಗಳನ್ನು ಧರಿಸಿ, ಸಂಪೂರ್ಣ ದಾಳಿಯನ್ನು ಚಿತ್ರೀಕರಿಸಿ, ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆಯಾಗಿ, ಭಯೋತ್ಪಾದಕರ ಸಂಖ್ಯೆ ಏಳು ಎಂದು ನಂಬಲಾಗಿದೆ. ಈ ಪೈಕಿ ಅವರು ವಿದೇಶಿ ಉಗ್ರರಾಗಿದ್ದು, ಇಬ್ಬರು ಸ್ಥಳೀಯರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Security personnel rush to the spot after terrorists attacked a group of tourists at Pahalgam, in Anantnag district, Jammu & Kashmir
Pahalgam terror attack: ಇತ್ತೀಚಿಗೆ ವಿವಾಹವಾಗಿದ್ದ ಅರುಣಾಚಲ ಪ್ರದೇಶದ IAF ಅಧಿಕಾರಿ ಹತ್ಯೆ!

ಪಠಾಣಿ ಸೂಟ್‌ಗಳನ್ನು ಧರಿಸಿದ್ದ ಭಯೋತ್ಪಾದಕರು, ಬೈಸರನ್ ಹುಲ್ಲುಗಾವಲಿಗೆ ಆಗಮಿಸಿ ಅಮೆರಿಕ ನಿರ್ಮಿತ M4 ಕಾರ್ಬೈನ್ ಅಸಾಲ್ಟ್ ರೈಫಲ್‌ ಮತ್ತು AK-47 ಗಳಿಂದ ಗುಂಡಿನ ದಾಳಿ ನಡೆಸಿದ್ದಾರೆ.

ಏಪ್ರಿಲ್ 22 ರ ಸಂಜೆಯ ವೇಳೆಗೆ ಘಟನಾ ಸ್ಥಳದಿಂದ 50 ರಿಂದ 70 ಕ್ಕೂ ಹೆಚ್ಚು ಬಳಸಿದ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, ಭಯೋತ್ಪಾದಕರು ಹೊತ್ತೊಯ್ಯುತ್ತಿದ್ದ ಶಸ್ತ್ರಾಸ್ತ್ರಗಳ ವಿವರಗಳನ್ನು ನೀಡಿದ ಅವರು, ಉಗ್ರರಲ್ಲಿ ಇಬ್ಬರು M4 ಕಾರ್ಬೈನ್ ಅಸಾಲ್ಟ್ ರೈಫಲ್‌ಗಳನ್ನು ಹೊಂದಿದ್ದರೆ, ಉಳಿದ ಮೂವರು AK-47 ಗಳನ್ನು ಹೊತ್ತೊಯ್ಯುತ್ತಿದ್ದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com