ಮಲಯಾಳಂ ನಿರ್ದೇಶಕ ಖಾಲಿದ್ ರೆಹಮಾನ್, ಅಶ್ರಫ್ ಹಮ್ಜಾ ಬಂಧನ: ಹೈಬ್ರಿಡ್ ಗಾಂಜಾ ವಶಕ್ಕೆ
ಕೊಚ್ಚಿ: ಮಾದಕ ವಸ್ತುಗಳ ಇಟ್ಟುಕೊಂಡಿದ್ದ ಮಲೆಯಾಳಂ ಸಿನಿಮಾ ಇಬ್ಬರು ನಿರ್ದೇಶಕರನ್ನು ಕೊಚ್ಚಿ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಖಾಲೀದ್ ರೆಹಮಾನ್ ಹಾಗೂ ಆಶ್ರಫ್ ಹಮ್ಜಾ ಬಂಧಿತ ಬಂಧಿತ ಆರೋಪಿಗಳಾಗಿದ್ದಾರೆ. ಇಬ್ಬರ ಬಳಿಯಿದ್ದ ಹೈಬ್ರಿಡ್ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗೌಪ್ಯ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಇಂದು ಬೆಳಗಿನ ಜಾವ 2:30 ರ ಸುಮಾರಿಗೆ ನಿರ್ದೇಶಕರನ್ನು ಬಂಧನಕ್ಕೊಳಪಡಿಸಿದ್ದಾರೆ.
ಆಲಪ್ಪುಳ ಜಿಮ್ಖಾನಾ ಮತ್ತು ತಲ್ಲುಮಾಲಾದಂತಹ ಸಿನಿಮಾಗಳನ್ನು ನಿರ್ದೇಶಿಸಿದ ಮತ್ತು ಮಂಜುಮಲ್ ಬಾಯ್ಸ್ ಚಿತ್ರದಲ್ಲಿ ನಟಿಸಿದ್ದ ರೆಹಮಾನ್, ತಮಾಶಾ, ಭೀಮಂತೆ ವಾಝಿ ಮತ್ತು ಸುಲೈಖಾ ಮಂಜಿಲ್ ಚಿತ್ರದ ನಿರ್ದೇಶಕ ಹಮ್ಜಾ ಮನೆಗಳ ಮೇಲೆ ದಾಳಿ ನಡೆಸಿದಾಗ ಗಾಂಜಾ ಪತ್ತೆಯಾಗಿದ್ದು, ನಂತಹ ಇಬ್ಬರು ನಿರ್ದೇಶಕರು ಸೇರಿ ಹಲವರನ್ನು ಬಂಧನಕ್ಕೊಳಪಡಿಸಲಿದ್ದಾರೆಂದು ತಿಳಿದುಬಂದಿದೆ.
ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ, ಕೊಚ್ಚಿಯ ಗೋರ್ಸಿ ಬ್ರಿಡ್ಜ್ ಮೇಲೆ ದಾಳಿ ಮಾಡಿದಾಗ ಗಾಂಜಾ ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ರೆಹಮಾನ್ ಮತ್ತು ಹಮ್ಜಾ ನಿಯಮಿತ ಮಾದಕ ದ್ರವ್ಯ ಬಳಕೆದಾರರು ಎಂದು ಅಬಕಾರಿ ಇಲಾಖೆ ದೃಢಪಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ