ವಿಚ್ಛೇದನ ಪ್ರಕ್ರಿಯೆಯಲ್ಲಿ ಪತ್ನಿ ಮಾಡಿರುವ ಲೈಂಗಿಕ ದೌರ್ಬಲ್ಯ ಆರೋಪಗಳು ಮಾನಹಾನಿಕರವಲ್ಲ: ಬಾಂಬೆ ಹೈಕೋರ್ಟ್

ಪತ್ನಿ ತನ್ನ ಹಿತಾಸಕ್ತಿಯನ್ನು ಉಳಿಸಿಕೊಳ್ಳಲು, ವೈವಾಹಿಕ ಸಂಬಂಧದಲ್ಲಿ ಆಕೆಗೆ ಮೋಸ, ದೌರ್ಜನ್ಯವಾಗಿದೆ ಎಂದು ಸಾಬೀತುಪಡಿಸಲು ಆರೋಪಗಳನ್ನು ಮಾಡುವುದು ಸರಿಯಿದೆ ಎಂದು ನ್ಯಾಯಮೂರ್ತಿ ಮೋದಕ್ ಹೇಳಿದ್ದಾರೆ.
Bombay high court
ಬಾಂಬೆ ಹೈಕೋರ್ಟ್
Updated on

ಮುಂಬೈ: ವಿಚ್ಛೇದನ ಪ್ರಕ್ರಿಯೆಯ ಸಮಯದಲ್ಲಿ ಪತ್ನಿಯು ತನ್ನ ಪತಿಯ ವಿರುದ್ಧ ಮಾಡುವ ಲೈಂಗಿಕ ಕ್ರಿಯೆ ದೌರ್ಬಲ್ಯ ಆರೋಪಗಳು ಪತಿಯ ಮಾನನಷ್ಟವಲ್ಲ. ಮಹಿಳೆಯ ಹಿತಾಸಕ್ತಿಗಳನ್ನು ರಕ್ಷಿಸಲು ಅಂತಹ ಆರೋಪಗಳನ್ನು ಮಾಡಿದಾಗ ಅದು ಕಾನೂನು ಪ್ರಕ್ರಿಯೆಯ ಅಗತ್ಯ ಭಾಗವಾಗಿದೆ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.

ತನ್ನ ಪರಿತ್ಯಕ್ತ ಪತ್ನಿ ಮತ್ತು ಆಕೆಯ ಕುಟುಂಬದ ವಿರುದ್ಧ ಪುರುಷನ ಮಾನನಷ್ಟ ದೂರನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಎಂ ಮೋದಕ್ ತಾವು ಜುಲೈ 17 ರಂದು ನೀಡಿದ ಆದೇಶವನ್ನು ಇಂದು ಸಾರ್ವಜನಿಕವಾಗಿ ಪ್ರಕಟಿಸಿ ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ, ಲೈಂಗಿಕತೆ ದೌರ್ಬಲ್ಯ ಆರೋಪಗಳು ಬಹಳ ಪ್ರಸ್ತುತ ಮತ್ತು ವಿಚ್ಛೇದನಕ್ಕೆ ಕಾನೂನುಬದ್ಧ ಆಧಾರವಾಗಬಹುದು ಎಂದು ಹೇಳಿದ್ದಾರೆ.

ಪತ್ನಿ ತನ್ನ ಹಿತಾಸಕ್ತಿಯನ್ನು ಉಳಿಸಿಕೊಳ್ಳಲು, ವೈವಾಹಿಕ ಸಂಬಂಧದಲ್ಲಿ ಆಕೆಗೆ ಮೋಸ, ದೌರ್ಜನ್ಯವಾಗಿದೆ ಎಂದು ಸಾಬೀತುಪಡಿಸಲು ಆರೋಪಗಳನ್ನು ಮಾಡುವುದು ಸರಿಯಿದೆ ಎಂದು ನ್ಯಾಯಮೂರ್ತಿ ಮೋದಕ್ ಹೇಳಿದ್ದಾರೆ.

Bombay high court
ಲೈಂಗಿಕ ದೌರ್ಬಲ್ಯ ಸಮಸ್ಯೆ ಹೆಚ್ಚಳ: ವ್ಯಕ್ತಿಯ ಮಾನಸಿಕ, ಆರ್ಥಿಕ ಒತ್ತಡ ಮುಖ್ಯ ಕಾರಣ!

ವಿಚ್ಛೇದನ ಮತ್ತು ಜೀವನಾಂಶ ಅರ್ಜಿಗಳಲ್ಲಿ ಮತ್ತು ಪ್ರತ್ಯೇಕ ಎಫ್‌ಐಆರ್‌ನಲ್ಲಿ ತನ್ನ ಪತ್ನಿ ಮಾಡಿದ ಆಪಾದನೆಗಳು ಸಾರ್ವಜನಿಕ ದಾಖಲೆಯ ಭಾಗವಾಗಿವೆ, ಇದರಿಂದ ನನ್ನ ಮಾನಹಾನಿಯಾಗಿದೆ ಎಂದು ಪತಿ ಅರ್ಜಿಯಲ್ಲಿ ಆರೋಪಿಸಿದ್ದರು. ವಿಚ್ಛೇದನಕ್ಕೆ ಲೈಂಗಿಕತೆ ದೌರ್ಬಲ್ಯ ಒಂದು ಆಧಾರವಾಗಿದೆ ಎಂಬ ಆರೋಪಗಳು ವಿಚ್ಛೇದನ ಪ್ರಕ್ರಿಯೆಯಲ್ಲಿ ಪ್ರಮುಖವಾಗುತ್ತದೆ ಎಂದರು.

ವೈವಾಹಿಕ ಸಂಬಂಧದಲ್ಲಿ ಬಿರುಕು ಬಂದು ವಿಚ್ಛೇದನದ ಹಂತಕ್ಕೆ ಬಂದಾಗ, ಪತ್ನಿ ತನ್ನ ಹಿತಾಸಕ್ತಿಯನ್ನು ಕಾಪಾಡಲು ಪತಿಯ ವಿರುದ್ಧ ಲೈಂಗಿಕ ದೌರ್ಬಲ್ಯ ಆರೋಪ ಮಾಡುವುದು ತನ್ನ ಹಿತಾಸಕ್ತಿ ಕಾಪಾಡಲು ಮಹಿಳೆಗೆ ಮುಖ್ಯವಾಗುತ್ತದೆ ಎಂದು ನ್ಯಾಯಾಲಯ ಭಾವಿಸುತ್ತದೆ ಮತ್ತು ಇದನ್ನು ಮಾನನಷ್ಟವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ತನ್ನ ವಿಚ್ಛೇದಿತ ಪತ್ನಿ ವಿಚ್ಛೇದನ ಮತ್ತು ಜೀವನಾಂಶ ಕೋರಿ ಸಲ್ಲಿಸಿದ ಅರ್ಜಿಗಳಲ್ಲಿ ಮತ್ತು ತನ್ನ ಮತ್ತು ತನ್ನ ಹೆತ್ತವರ ವಿರುದ್ಧದ ಎಫ್‌ಐಆರ್‌ನಲ್ಲಿ ತಾನು ದುರ್ಬಲ ಎಂದು ಆರೋಪಿಸಿದ್ದಾಳೆ ಎಂದು ಪತಿ ಹೇಳಿದ್ದರು.

ವಿಚ್ಛೇದಿತ ಪತ್ನಿಯ ಆರೋಪಗಳು ಮಾನನಷ್ಟಕರವಾಗಿದ್ದು ಅದನ್ನು ಸಾರ್ವಜನಿಕಗೊಳಿಸಬಾರದು. ಮಹಿಳೆ, ಆಕೆಯ ತಂದೆ ಮತ್ತು ಸಹೋದರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು, ಪುರುಷನ ಮಾನನಷ್ಟ ದೂರಿನ ಬಗ್ಗೆ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿ, ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ್ದರು.

ಮಹಿಳೆ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, ತನ್ನ ಪತಿ ಲೈಂಗಿಕ ತೃಪ್ತಿ ನೀಡಲು ದುರ್ಬಲನಾಗಿದ್ದು, ಇದರಿಂದ ವಿಚ್ಛೇದನ ನೀಡಬೇಕೆಂದು ಕೋರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com