Telangana: ಶೆಡ್ ಧ್ವಂಸ; ರೊಚ್ಚಿಗೆದ್ದ ರೈತ ದಂಪತಿ; ಕಾಂಗ್ರೆಸ್ MLA ಕಚೇರಿಯಲ್ಲಿ ಎಮ್ಮೆ ಕಟ್ಟಿಹಾಕಿ ಆಕ್ರೋಶ! Video

ಯಾವುದೇ ಮುನ್ಸೂಚನೆ ನೀಡದೆ ಎಮ್ಮೆಗಳ ಕೊಟ್ಟಿಗೆಯನ್ನು ಧ್ವಂಸಗೊಳಿಸಲಾಗಿದೆ ಎಂದು ವೆಶಲ್ಲಪಲ್ಲಿ ಗ್ರಾಮದ ಕೂರಕುಲ ಒಡೇಲು ಮತ್ತು ಲಲಿತಾ ಆರೋಪಿಸಿದ್ದಾರೆ.
tie buffaloes at Congress MLA's office
ಕಾಂಗ್ರೆಸ್ MLA ಕಚೇರಿಯಲ್ಲಿ ಎಮ್ಮೆ ಕಟ್ಟಿಹಾಕಿರುವ ಚಿತ್ರ
Updated on

ತೆಲಂಗಾಣ: ಜಾನುವಾರಗಳ ಶೆಡ್ ಧ್ವಂಸಕ್ಕೆ ಶಾಸಕರೇ ಕಾರಣ ಎಂದು ಆರೋಪಿಸಿದ ರೈತ ದಂಪತಿ, ಕಾಂಗ್ರೆಸ್ ಶಾಸಕ ಗಂಡ್ರಾ ಸತ್ಯ ನಾರಾಯಣ ಅವರ ಕಚೇರಿಯಲ್ಲಿ ಎಮ್ಮೆಗಳನ್ನು ಕಟ್ಟಿಹಾಕಿ ಆಕ್ರೋಶ ಹೊರಹಾಕಿರುವ ಘಟನೆ ತೆಲಂಗಾಣದ ಹಳ್ಳಿಯೊಂದರಲ್ಲಿ ನಡೆದಿದೆ.

ಯಾವುದೇ ಮುನ್ಸೂಚನೆ ನೀಡದೆ ಎಮ್ಮೆಗಳ ಕೊಟ್ಟಿಗೆಯನ್ನು ಧ್ವಂಸಗೊಳಿಸಲಾಗಿದೆ ಎಂದು ವೆಶಲ್ಲಪಲ್ಲಿ ಗ್ರಾಮದ ಕೂರಕುಲ ಒಡೇಲು ಮತ್ತು ಲಲಿತಾ ಆರೋಪಿಸಿದ್ದಾರೆ.

ಶಾಸಕರು ಹೇಳಿದ ಕಾರಣಕ್ಕೆ ಸ್ಥಳೀಯ ಅಧಿಕಾರಿಗಳು ಶೆಡ್ ಧ್ವಂಸ ಮಾಡಿದ್ದಾರೆ. ಶಾಸಕರ ಆದೇಶದ ಮೇರೆಗೆ ತಾವು ಕಾರ್ಯನಿರ್ವಹಿಸಿದ್ದೇವೆ ಎಂದು ಪೋಲೀಸರು ಹೇಳಿದ್ದಾರೆ ಎಂದು ದಂಪತಿ ಹೇಳಿಕೊಂಡರು.

ತಮ್ಮ ಜಾನುವಾರಗಳಿಗೆ ಯಾವುದೇ ಆಶ್ರಯವಿಲ್ಲದೆ ರೊಚ್ಚಿಗೆದ್ದ ದಂಪತಿ ಎಂಎಲ್ಎ ಕಚೇರಿಯ ಹೊರಗೆ ಎಮ್ಮೆಗಳನ್ನು ಕಟ್ಟಿಹಾಕಲು ನಿರ್ಧರಿಸಿದ್ದಾರೆ. ಒಂದು ರೂಪಾಯಿ ತೆಗೆದುಕೊಳ್ಳದೆ ಅವರಿಗೆ ಮತ ಹಾಕಿದ್ದೇವೆ. ಇದು ಅವರು ನಮಗೆ ನೀಡುವ ಪ್ರತಿಫಲವೇ? ದಂಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸ ಶೆಡ್ ನಿರ್ಮಿಸುವವರೆಗೆ ಎಮ್ಮೆಗಳನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಈ ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರ ನೀತಿಗಳು ತೆಲಂಗಾಣ ರೈತರನ್ನು ನೋಯಿಸುತ್ತಿದ್ದು, ತೆಲಂಗಾಣದ ಬದಲಿಗೆ ಆಂಧ್ರಪ್ರದೇಶದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com