
ಜಮುಯಿ: ಬಿಹಾರದಲ್ಲಿ ಸೇತುವೆ ಕುಸಿತ ಘಟನೆಗಳು ಮರುಕಳಿಸಿದೆ. ಜಮುಯಿ ಜಿಲ್ಲೆಯ ಉಲಾಯಿ ನದಿಯ ಮೇಲಿನ ಹಳೆಯ ಮತ್ತು ನಿಷ್ಕ್ರಿಯವಾದ ಸೇತುವೆಯ ಒಂದು ಭಾಗ ಕುಸಿದಿರುವುದಾಗಿ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
"ಜಮುಯಿ ಹೊರವಲಯದಲ್ಲಿ ಶುಕ್ರವಾರ ನದಿಯ ಮೇಲಿನ ಸಣ್ಣ ಸೇತುವೆಯ ಒಂದು ಭಾಗವು ಕುಸಿದಿದೆ. ಅದನ್ನು ಕಳೆದ ವರ್ಷ ಸಂಚಾರಕ್ಕೆ ಮುಚ್ಚಲಾಗಿತ್ತು. ನದಿಯ ಮೇಲೆ ಹೊಸ ಸೇತುವೆಯನ್ನು ನಿರ್ಮಿಸಲಾಗುತ್ತಿದೆ ಎಂದು ಜಮುಯಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನವೀನ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಕಳೆದ ವರ್ಷ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ದೊಡ್ಡ ಮತ್ತು ಸಣ್ಣ ಸೇತುವೆಗಳು ಸೇರಿದಂತೆ ಹಲವಾರು ಸೇತುವೆ ಕುಸಿತದ ಘಟನೆಗಳು ನಡೆದಿತ್ತು.
Advertisement