
ಭಾವ ನಗರ: ಕೆಲವರಲ್ಲಿ ಎಲ್ಲೆಂದರಲ್ಲಿ ವಿಡಿಯೋ ಮಾಡುವ ಹುಚ್ಚಾಟ ಜಾಸ್ತಿಯಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಲೈಕ್, ವೀವ್ಸ್ ಪಡೆಯುವುದಕ್ಕೆ ಕೆಲವೊಮ್ಮೆ ಪ್ರಾಣವನ್ನು ಪಣಕ್ಕಿಟ್ಟು ವಿಡಿಯೋ ಮಾಡ್ತಿರುತ್ತಾರೆ.
ಅಂತಹುದೇ ಘಟನೆಯೊಂದು ಗುಜರಾತಿನ ಭಾವನಗರದಲ್ಲಿ ನಡೆದಿದೆ. ಸಿಂಹವನ್ನು ಹತ್ತಿರದಿಂದ ವಿಡಿಯೋ ಮಾಡಲು ಹೋದ ವ್ಯಕ್ತಿಯೊಬ್ಬ ಸ್ವಲ್ಪ ಅಂತರದಲ್ಲಿ ಅದರ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಭೇಟಿಯಾಡಿದ್ದ ಪ್ರಾಣಿಯನ್ನು ತಿನ್ನುತ್ತಿದ್ದ ಸಿಂಹದ ಬಳಿ ಮೊಬೈಲ್ ಹಿಡಿದು ಹೋದ ವ್ಯಕ್ತಿಯ ಕಡೆಗೆ ಸಿಂಹ ಬರುತ್ತಿರುವುದು ವಿಡಿಯೋದಲ್ಲಿದೆ.
ತನ್ನ ಕಡೆಗೆ ವ್ಯಕ್ತಿ ಬರುತ್ತಿರುವುದನ್ನು ನೋಡಿದ ಸಿಂಹ ನಿಧಾನವಾಗಿ ಆತನ ಕಡೆಗೆ ಹೆಜ್ಜೆ ಹಾಕಲು ಶುರು ಮಾಡುತ್ತದೆ. ಅಲ್ಲದೇ ಜೋರಾಗಿ ಗೊಣಗುತ್ತಾ ಹಿಂದೆ ಹೋಗುವಂತೆ ಎಚ್ಚರಿಕೆ ನೀಡಿದೆ. ಆದಾಗ್ಯೂ,ಆ ವ್ಯಕ್ತಿ ನಿಧಾನವಾಗಿ ಸಿಂಹದ ಕಡೆಯಿಂದ ಹಿಂದೆ ಸರಿಯುವಾಗ ಚಿತ್ರೀಕರಣವನ್ನು ಮುಂದುವರೆಸಿದ್ದಾನೆ.
ಘಟನಾ ಸ್ಥಳದಲ್ಲಿ ಇನ್ನೂ ಅನೇಕರ ಧ್ವನಿ ಕೇಳಿಸುತ್ತದೆ. ಸಿಂಹವು ಮುಂದೆ ಬರುತ್ತಿದ್ದಂತೆ ಅನೇಕರು ಎಚ್ಚರಿಕೆ ನೀಡುವ ಮಾತುಗಳು ಕೇಳಿಬರುತ್ತವೆ. ಅದೃಷ್ಟವಶಾತ್, ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಆತನ ದುಸ್ಸಾಹಸಕ್ಕೆ ಆನ್‌ಲೈನ್‌ನಲ್ಲಿ ತೀವ್ರ ಟೀಕೆಗಳು ಹಾಗೂ ಕಳವಳ ವ್ಯಕ್ತವಾಗುತ್ತಿದೆ.
Advertisement