ಚುನಾವಣಾ ಆಯೋಗದ ವೆಬ್‌ಸೈಟ್‌ ಸೇವೆಯಲ್ಲಿ ವ್ಯತ್ಯಯ; ಆರೋಪ ಅಲ್ಲಗಳೆದ ECI ಹೇಳಿದ್ದೇನು?

ಹಲವು ರಾಜ್ಯದಲ್ಲಿನ ಚುನಾವಣಾ ಆಯೋಗದ ವೆಬ್‌ಸೈಟ್‌ ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವಂತೆಯೇ ಈ ಆರೋಪಗಳನ್ನು ಆಯೋಗ ಅಲ್ಲಗಳೆದಿದೆ.
Election Commission of India
ಚುನಾವಣಾ ಆಯೋಗ
Updated on

ನವದೆಹಲಿ: ದೇಶಾದ್ಯಂತ 'ಮತಕಳ್ಳತನ' ವಿಚಾರವಾಗಿ ವ್ಯಾಪಕ ಚರ್ಚೆ ನಡೆಯುತ್ತಿರುವಂತೆಯೇ ಇತ್ತ ಚುನಾವಣಾ ಆಯೋಗದ ವೆಬ್‌ಸೈಟ್‌ ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, ಇದೀಗ ಈ ಕುರಿತು ಚುನಾವಣಾ ಆಯೋಗ ಪ್ರತಿಕ್ರಿಯಿಸಿದೆ.

ಹಲವು ರಾಜ್ಯದಲ್ಲಿನ ಚುನಾವಣಾ ಆಯೋಗದ ವೆಬ್‌ಸೈಟ್‌ ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವಂತೆಯೇ ಈ ಆರೋಪಗಳನ್ನು ಚುನಾವಣಾ ಆಯೋಗ ಅಲ್ಲಗಳೆದಿದೆ.

ಕಾಂಗ್ರೆಸ್‌ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನವಾಗಿದೆ. ಬಿಜೆಪಿಯು ಚುನಾವಣೆಗಳನ್ನು ಗೆಲ್ಲಲು ಚುನಾವಣಾ ಆಯೋಗ ಸಾಥ್‌ ನೀಡಿದೆ ಎಂದು ಗುರುವಾರವಷ್ಟೇ ಆರೋಪಿಸಿದ್ದರು. ಇದರ ಬೆನ್ನಲ್ಲೇ, ಹಲವು ರಾಜ್ಯಗಳಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್‌ ಸ್ಥಗಿತಗೊಂಡಿರುವುದಾಗಿ ಕೆಲವರು ಆರೋಪಿಸಿದ್ದಾರೆ.

#VoteChori ಟ್ಯಾಗ್‌ ಬಳಸಿ ಟ್ವೀಟ್ ಮಾಡಿರುವ ಸಮೃದ್ದಿ ಎಂಬವರು, 'ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್‌ನ ಇ–ವೋಟರ್‌ ಪಟ್ಟಿ ಓಪನ್‌ ಆಗುತ್ತಿಲ್ಲ. ಜನರು ಇದೀಗ, ರಾಹುಲ್‌ ಆರೋಪಗಳನ್ನು ನಂಬುತ್ತಾರೆ. ಬಿಜೆಪಿಯ ಭಕ್ತರು ಏನಾದರೂ ಹೇಳಲು ಬಯಸುವರೇ' ಎಂದು ಕೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳನ್ನು ಇನ್ನಷ್ಟು ಮಂದಿ ಹಂಚಿಕೊಂಡಿದ್ದಾರೆ.

Election Commission of India
ನಕಲಿ ವೋಟ್​ ನಿಂದಲೇ ನನ್ನ ಮೊದಲ ಸೋಲಾಯ್ತು; ಬಿಜೆಪಿ ಗೆಲುವಿನ ರಹಸ್ಯ ಬಯಲು: ಖರ್ಗೆ

ಆಯೋಗ ತಿರುಗೇಟು

ಆದರೆ, 'ಎಕ್ಸ್‌'ನಲ್ಲಿಯೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗ, ಯಾವುದೇ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಮತದಾರರ ಪಟ್ಟಿಯನ್ನು ಯಾರು ಬೇಕಾದರೂ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ. ಅದಕ್ಕೆ ಸಂಬಂಧಿಸಿದ ಲಿಂಕ್‌ ಅನ್ನೂ ನೀಡಿದೆ.

ಬೆಂಗಳೂರಿನಲ್ಲಿ ರಾಹುಲ್ ಗಾಂಧಿ

2024ರ ಲೋಕಸಭೆ ಚುನಾವಣೆ ವೇಳೆ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ ಕಳ್ಳತನವಾಗಿದೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ರಾಹುಲ್ ಗಾಂಧಿ ಗುರುವಾರ ಬಿಡುಗಡೆ ಮಾಡಿದ್ದರು. ಇದೇ ವಿಚಾರವಾಗಿ ಶುಕ್ರವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನಾ ಸಮಾವೇಶ ಕೂಡ ನಡೆಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ, 'ಚುನಾವಣಾ ಆಯೋಗ ನನ್ನಿಂದ ಅಫಿಡವಿಟ್ ಕೇಳುತ್ತಿದೆ.

ಮಾಡುವಂತೆ ಹೇಳುತ್ತಿದೆ. ನಾನು ಹೇಳಿದ್ದೆಲ್ಲವೂ ಸತ್ಯವೆಂದು ಸಂಸತ್ತಿನಲ್ಲೇ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಮಾಡಿದ್ದೇನೆ. ದೇಶದ ಜನರು ನಮ್ಮ ದಾಖಲೆಗಳನ್ನಿಟ್ಟುಕೊಂಡು ಚುನಾವಣಾ ಆಯೋಗವನ್ನು ಪ್ರಶ್ನಿಸಲಾರಂಭಿಸುತ್ತಿದ್ದಂತೆ ವೆಬ್‌ಸೈಟ್‌ ಅನ್ನು ಬಂದ್‌ ಮಾಡಲಾಗಿದೆ. ಜನರು ಪ್ರಶ್ನಿಸಲು ಆರಂಭಿಸಿದರೆ ತಮ್ಮ ನಾಟಕ ಬಯಲಾಗುತ್ತದೆ ಎಂಬ ಭಯ ಆಯೋಗವನ್ನು ಆವರಿಸಿದೆ' ಎಂದು ಹೇಳಿದ್ದಾರೆ.

1 ಲಕ್ಷಕ್ಕೂ ಹೆಚ್ಚು ಮತಗಳ ಕಳವು

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, 'ಚುನಾವಣಾ ಆಯೋಗದ ದತ್ತಾಂಶವನ್ನು ಉಲ್ಲೇಖಿಸಿ ಕರ್ನಾಟಕದ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳು ಕಳವು ಆಗಿವೆ ಎಂದು ಹೇಳಿದ್ದಾರೆ. ಈ ಕ್ಷೇತ್ರದಲ್ಲಿ 11,965 ನಕಲಿ ಮತದಾರರು, 40,009 ಮತದಾರರು ನಕಲಿ ಮತ್ತು ಅಮಾನ್ಯ ವಿಳಾಸಗಳನ್ನು ಹೊಂದಿದ್ದಾರೆ, 10,452 ಬೃಹತ್ ಮತದಾರರು ಅಥವಾ ಏಕ ವಿಳಾಸ ಮತದಾರರು, 4,132 ಮತದಾರರು ಅಮಾನ್ಯ ಫೋಟೋಗಳನ್ನು ಹೊಂದಿದ್ದಾರೆ ಮತ್ತು 33,692 ಮತದಾರರು ಹೊಸ ಮತದಾರರ ಫಾರ್ಮ್ 6 ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ' ಎಂದು ದೂರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com