
ಜೈಪುರ: ನಿಂತಿದ್ದ ಟ್ರಕ್ ಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ 7 ಮಕ್ಕಳು ಹಾಗೂ 4ಮಹಿಳೆಯರು ಸೇರಿ ಒಟ್ಟು 11 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯ ಬಾಪಿ ಬಳಿ ಸಂಭವಿಸಿದೆ. ಗಾಯಗೊಂಡ 9 ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖತುಶ್ಯಾಮ್ಜಿ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತರು ಮನೆಗೆ ಹಿಂತಿರುಗುತ್ತಿದ್ದಾಗ ಬೆಳಗಿನ ಜಾವ 3:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶದ ಇಟಾವಾ ಜಿಲ್ಲೆಯವರು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಎಸ್ಪಿ ಸಾಗರ್ ರಾಣಾ ಮಾತನಾಡಿ, ಖಾತು ಶ್ಯಾಮ್ ದೇವಸ್ಥಾನದಿಂದ ಭಕ್ತರು ಬರುವಾಗ ಅಪಘಾತ ಸಂಭವಿಸಿದೆ ನಿಂತಿದ್ದ ಟ್ರಕ್ ಗೆ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಬಂದಿದ್ದು, ಇಲ್ಲಿಯವರೆಗೆ 11 ಜನರು ಸಾವನ್ನಪ್ಪಿದ್ದಾರೆ.
ಹೆದ್ದಾರಿಯ ಸರ್ವಿಸ್ ಲೇನ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಪಿಕಪ್ ವಾಹನ ಡಿಕ್ಕಿ ಹೊಡೆದಾಗ ಇಪ್ಪತ್ತು ಜನರು ಅದರಲ್ಲಿದ್ದರು, ಗಾಯಗೊಂಡ ಎಂಟು ಜನರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು.
Advertisement