Uttarakhand: 'ಬಲವಂತದ ಮತಾಂತರಕ್ಕೆ ಜೀವಾವಧಿ ಶಿಕ್ಷೆ, 10 ಲಕ್ಷ ರೂ ದಂಡ'; CM Pushkar Singh Dhami

ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಸರ್ಕಾರವು ಲವ್ ಜಿಹಾದ್ ಆರೋಪದ ಬಗ್ಗೆ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಲಿದ್ದು, ಧಾಮಿ ಸಚಿವ ಸಂಪುಟ ಹೊಸ ತಿದ್ದುಪಡಿ ಮಸೂದೆಯನ್ನು ಅನುಮೋದಿಸಿದೆ.
Pushkar Singh Dhami
ಉತ್ತರಾಖಂಡ ಸಿಎಂ ಫುಷ್ಕರ್ ಸಿಂಗ್ ಧಾಮಿ
Updated on

ಡೆಹ್ರಾಡೂನ್: ಮತಾಂತರ ವಿರೋಧಿ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಿರ್ಧರಿಸಿರುವ ಉತ್ತರಾಖಂಡ ಸರ್ಕಾರ 'ಬಲವಂತದ ಮತಾಂತರಕ್ಕೆ ಜೀವಾವಧಿ ಶಿಕ್ಷೆ, 10 ಲಕ್ಷ ರೂ ದಂಡ ಹೇರುವ ಮಸೂದೆ ಜಾರಿಗೆ ತರಲು ನಿರ್ಧರಿಸಿದೆ.

ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಸರ್ಕಾರವು ಲವ್ ಜಿಹಾದ್ ಆರೋಪದ ಬಗ್ಗೆ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಲಿದ್ದು, ಧಾಮಿ ಸಚಿವ ಸಂಪುಟವು ಹೊಸ ತಿದ್ದುಪಡಿ ಮಸೂದೆಯನ್ನು ಅನುಮೋದಿಸಿದೆ. ಬಲವಂತದ ಮತಾಂತರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲು ತಿದ್ದುಪಡಿ ಮಸೂದೆ ಅವಕಾಶ ನೀಡುತ್ತದೆ. ಅಲ್ಲದೆ, 10 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.

ಉತ್ತರಾಖಂಡ ಸರ್ಕಾರವು ಇದನ್ನು ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲಿದೆ ಎಂದು ಹೇಳಲಾಗಿದ್ದು, ವಿಧಾನಸಭೆಯ ಮಳೆಗಾಲದ ಅಧಿವೇಶನ ಆಗಸ್ಟ್ 19 ರಿಂದ ಪ್ರಾರಂಭವಾಗುತ್ತಿದ್ದು, ಇದೇ ಸಂದರ್ಭದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು ಎಂದು ಹೇಳಲಾಗಿದೆ.

Pushkar Singh Dhami
Conversion racket: ಬೃಹತ್ ಮತಾಂತರ ಜಾಲ; ದೆಹಲಿಯಲ್ಲಿ ಕಿಂಗ್ ಪಿನ್ ಬಂಧಿಸಿದ ಯುಪಿ ಪೊಲೀಸರು! ಮತ್ತಷ್ಟು ರೋಚಕ ವಿವರ ಬಹಿರಂಗ

ತಿದ್ದುಪಡಿ ಮಸೂದೆ, ಆರೋಪಿ ಮುಟ್ಟುಗೋಲಿಗೂ ಅವಕಾಶ

ಪ್ರಸ್ತುತ ಉತ್ತರಖಂಡದಲ್ಲಿ ಜಾರಿ ಇರುವ ಕಾನೂನಿನಲ್ಲಿ, ಬಲವಂತದ ಮತಾಂತರದ ಸಂದರ್ಭದಲ್ಲಿ 10 ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸುವ ಅವಕಾಶವಿದೆ. ಹೊಸ ಕಾನೂನಿನಲ್ಲಿ, ಇದನ್ನು 14 ವರ್ಷಗಳಿಗೆ ಹೆಚ್ಚಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ, ಶಿಕ್ಷೆಯನ್ನು 20 ವರ್ಷಗಳವರೆಗೆ ಹೆಚ್ಚಿಸಬಹುದು. ತಿದ್ದುಪಡಿ ಮಾಡಿದ ಮಸೂದೆಯಲ್ಲಿ, ವಾರಂಟ್ ಇಲ್ಲದೆ ಆರೋಪಿಯನ್ನು ಬಂಧಿಸುವ ಹಕ್ಕನ್ನು ಪೊಲೀಸರಿಗೆ ನೀಡಲಾಗಿದೆ. ಅಲ್ಲದೆ, ಮತಾಂತರಕ್ಕೆ ಸಂಬಂಧಿಸಿದ ಅಪರಾಧದಿಂದ ಗಳಿಸಿದ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಬಹುದು.

ಹೊಸ ಮಸೂದೆಯಲ್ಲೇನಿದೆ?

ಹೊಸ ಮಸೂದೆಯಲ್ಲಿ, ಆರೋಪಿಯನ್ನು ವಾರಂಟ್ ಇಲ್ಲದೆಯೂ ಬಂಧಿಸಬಹುದು. ಈ ಮಸೂದೆಯಲ್ಲಿ, ಎಲ್ಲಾ ಅಪರಾಧಗಳನ್ನು ಜಾಮೀನು ರಹಿತವಾಗಿಸಲಾಗಿದೆ . ಕೆಲವು ಪ್ರಕರಣಗಳಲ್ಲಿ, ಆರೋಪಿಯು ತಪ್ಪಿತಸ್ಥನಲ್ಲ ಮತ್ತು ಮತ್ತೆ ಅಂತಹ ಅಪರಾಧ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆಯಾದಾಗ ಮಾತ್ರ ಜಾಮೀನು ನೀಡಲಾಗುತ್ತದೆ.

ಅಂತೆಯೇ ಪ್ರಸ್ತಾವಿತ ಮಸೂದೆಯಲ್ಲಿ, ಮತಾಂತರಕ್ಕೆ ಸಂಬಂಧಿಸಿದ ಅಪರಾಧಗಳ ಮೂಲಕ ಯಾವುದೇ ಆಸ್ತಿಯನ್ನು ಸಂಪಾದಿಸಿದ್ದರೆ, ಜಿಲ್ಲಾಧಿಕಾರಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಹೊಸ ಮಸೂದೆಯಲ್ಲಿ ಈ ಕಾನೂನಿನಡಿಯಲ್ಲಿ ಯಾವುದೇ ಅಪರಾಧದ ಮೂಲಕ ಯಾವುದೇ ಆಸ್ತಿಯನ್ನು ಗಳಿಸಲಾಗಿದೆ ಎಂದು ಮ್ಯಾಜಿಸ್ಟ್ರೇಟ್ ಭಾವಿಸಿದರೆ, ನ್ಯಾಯಾಲಯವು ಅಂತಹ ಅಪರಾಧವನ್ನು ಗಮನಕ್ಕೆ ತೆಗೆದುಕೊಂಡಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಬಹುದು ಎಂಬ ನಿಬಂಧನೆಯೂ ಇದೆ.

Pushkar Singh Dhami
Conversion racket: ಬೃಹತ್ ಮತಾಂತರ ಜಾಲ; ದೆಹಲಿಯಲ್ಲಿ ಕಿಂಗ್ ಪಿನ್ ಬಂಧಿಸಿದ ಯುಪಿ ಪೊಲೀಸರು! ಮತ್ತಷ್ಟು ರೋಚಕ ವಿವರ ಬಹಿರಂಗ

ಬುಧವಾರ ನಡೆದ ಸಂಪುಟವು ಉತ್ತರಾಖಂಡ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ ) ಮಸೂದೆ 2025ಕ್ಕೆ ಅನುಮೋದನೆ ನೀಡಿದೆ. ಸಂಪುಟದ ನಿರ್ಧಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, 'ಉತ್ತರಾಖಂಡ ದೇವಭೂಮಿ. ಆದರೆ ಕಳೆದ ಕೆಲವು ವರ್ಷಗಳಿಂದ ಅಕ್ರಮ ಮತಾಂತರದ ಘಟನೆಗಳು ಹೆಚ್ಚಿವೆ. ಸಾಮಾಜಿಕ ರಚನೆಯಲ್ಲಿ ಯಾವುದೇ ಬದಲಾವಣೆಯಾಗದಂತೆ ಕಾನೂನನ್ನು ಕಠಿಣಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com