
ನವೆದಹಲಿ: ಭಾರತೀಯ ವಾಯುಪಡೆಯು ಇದೇ ಮೊದಲ ಬಾರಿಗೆ ಲೇಸರ್ ನಿರ್ದೇಶಿತ ಅಧಿಕ ಶಕ್ತಿ ಹೊಂದಿರುವ ಶಸ್ತ್ರಗಳನ್ನು (DEW) ಒಳಗೊಂಡಿರುವ ಸಮಗ್ರ ವಾಯು ಪ್ರದೇಶ ರಕ್ಷಣಾ ವ್ಯವಸ್ಥೆ(IADWS) ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನೆರವೇರಿಸಿರುವುದನ್ನು ಚೀನಾದ ಮಿಲಿಟರಿ ತಜ್ಞರು ಪಶಂಸಿದ್ದು, ಇದನ್ನು 'ಮಹತ್ವದ ಪ್ರಗತಿ' ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.
IADWS ಬಹು ಹಂತದ ವಾಯು ಪ್ರದೇಶ ರಕ್ಷಣಾ ವ್ಯವಸ್ಥೆಯಾಗಿದ್ದು, ದೇಶಿಯವಾಗಿಯೇ ಅಭಿವೃದ್ಧಿಪಡಿಸಿರುವ ಕ್ಷಿಪಣಿಗಳನ್ನು ಒಳಗೊಂಡಿದೆ. ನೆಲದಿಂದ ಆಗಸಕ್ಕೆ ಕ್ಷಿಪ್ರವಾಗಿ ಚಿಮ್ಮಿ ಗುರಿಯನ್ನು ನಾಶ ಮಾಡಬಲ್ಲ ಕ್ಷಿಪಣಿಗಳು (QRSAM) ಕಡಿಮೆ ವ್ಯಾಪ್ತಿಯ ವಾಯು ಪ್ರದೇಶದಲ್ಲಿನ ಗುರಿ ನಾಶ ಮಾಡಬಲ್ಲ ರಕ್ಷಣಾ ವ್ಯವಸ್ಥೆ (VSHORADS)ಲೇಸರ್ ನಿರ್ದೇಶಿತ ಅಧಿಕ ಶಕ್ತಿ ಹೊಂದಿರುವ ಶಸ್ತ್ರಗಳನ್ನು(DEW) ಒಳಗೊಂಡಿದೆ.
DEW ಶಸ್ತ್ರವನ್ನು ಪ್ರಸ್ತುತ ಅಮೆರಿಕ, ರಷ್ಯಾ, ಚೀನಾ, ಯುಕೆ, ಜರ್ಮನಿ, ಇಸ್ರೇಲ್ ನಂತಹ ಕೆಲವೇ ರಾಷ್ಟ್ರಗಳು ಹೊಂದಿವೆ. ಇದೀಗ ಭಾರತದ ಪರೀಕ್ಷಾರ್ಥ ಪ್ರಯೋಗ ಚೀನಾದ ತಜ್ಞರ ಗಮನ ಸೆಳೆದಿದೆ.
ಕಡಿಮೆ ವ್ಯಾಪ್ತಿಯ ವಾಯುಪ್ರದೇಶದಲ್ಲಿ ಹಾರಾಟ ನಡೆಸುವ ಡ್ರೋನ್, ಕ್ರೂಸ್ ಕ್ಷಿಪಣಿಗಳು, ಹೆಲಿಕಾಪ್ಟರ್ ಗಳನ್ನು ಹೊಡೆದುರುಳಿಸುವಂತೆ ಭಾರತ ಹೊಸ ವಾಯು ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ ಎಂದು ಬೀಜಿಂಗ್ ಮೂಲದ ಏರೋಸ್ಪೇಸ್ ನಾಲೆಡ್ಜ್ ನಿಯತಕಾಲಿಕದ ಮುಖ್ಯ ಸಂಪಾದಕ ವಾಂಗ್ ಯಾನಾನ್ ಅವರು ಚೀನಾದ ಸರ್ಕಾರಿ ಗ್ಲೋಬಲ್ ಟೈಮ್ಸ್‌ಗೆ ತಿಳಿಸಿದ್ದಾರೆ.
IADWS, QRSAM ಮತ್ತು VSHORADS ಲೇಸರ್ ನಿರ್ದೇಶಿತ ಅಧಿಕ ಶಕ್ತಿ ಹೊಂದಿರುವ ಶಸ್ತ್ರಗಳನ್ನು ಹೊಂದಿರುವುದು ಗಮನಾರ್ಹ ಪ್ರಗತಿಯಾಗಿದೆ. ಕೆಲವೇ ರಾಷ್ಟ್ರಗಳು ಮಾತ್ರ ಇಂತಹ ಲೇಸರ್ ನಿರ್ದೇಶಿತ ಶಸ್ತ್ರಗಳನ್ನು ಹೊಂದಿವೆ. ಇವುಗಳು ಕರಾರುವಕ್ಕಾಗಿ ಗುರಿಗಳನ್ನು ಹೊಡೆದುರುಳಿಸಲಿವೆ ಎಂದು ಅವರು ಹೇಳಿದ್ದಾರೆ.
ಪೀಪಲ್ಸ್ ಲಿಬರೇಶನ್ ಆರ್ಮಿ ಆಧುನಿಕ ಶಸ್ತ್ರಾಸ್ತ್ರಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದು, ಪಾಕಿಸ್ತಾನಕ್ಕೆ ಗಮನಾರ್ಹ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತದೆ ಎಂಬ ಮಾತುಗಳ ನಡುವೆ ಚೀನಾದ ಈ ತಜ್ಞರ ಹೇಳಿಕೆಯನ್ನು ಮಹತ್ವದು ಎಂದು ಪರಿಗಣಿಸಲಾಗಿದೆ.
ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನ (SIPRI) ಇತ್ತೀಚಿನ ವರದಿಯ ಪ್ರಕಾರ, ಪಾಕಿಸ್ತಾನದ ಮಿಲಿಟರಿ ಉಪಕರಣಗಳಲ್ಲಿ ಶೇ. 81 ಕ್ಕಿಂತ ಹೆಚ್ಚಿನದನ್ನು ಚೀನಾ ಪೂರೈಸಿದೆ. ಇತ್ತೀಚಿನ ಆಪರೇಷನ್ ಸಿಂಧೂರ ಸಂಘರ್ಷದಲ್ಲಿ ಪಾಕಿಸ್ತಾನ ಮಿಲಿಟರಿ ಭಾರತದ ವಿರುದ್ಧ ಈ ಶಸಾಸ್ತ್ರಗಳನ್ನು ಬಳಸಿತ್ತು. ಆಪರೇಷನ್ ಸಿಂಧೂರ ಮುಗಿದ ಮೂರು ತಿಂಗಳಲ್ಲಿಯೇ ಹೊಸ ವಾಯು ರಕ್ಷಣಾ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನೆರವೇರಿಸಿದೆ.
Advertisement