
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಗುಂಡು ಸಿಡಿದ ಪರಿಣಾಮ ಸೈನಿಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಈ ಕುರಿತು ಭಾನುವಾರ ಅಧಿಕಾರಿಗಳು ಮಾಹಿತಿ ನೀಡಿದ್ದು, ಶನಿವಾರ ರಾತ್ರಿ ಸೇನೆಯ ರಾಷ್ಟ್ರೀಯ ರೈಫಲ್ಸ್‌ನ ಕಾನ್ಸ್‌ಟೇಬಲ್ ಚೋಟು ಕುಮಾರ್ ಎಂಬ ಸೈನಿಕ ಆಕಸ್ಮಿಕವಾಗಿ ಗುಂಡು ತಗುಲಿ ಸಾವನ್ನಪ್ಪಿದ್ದಾನೆ.
ಮಧ್ಯ ಕಾಶ್ಮೀರ ಜಿಲ್ಲೆಯ ಮಾನಸ್ಬಲ್ ಪ್ರದೇಶವನ್ನು ತಲುಪುವಾಗ ಸೇನಾ ಟ್ರಕ್‌ನಲ್ಲಿದ್ದ ಸೋನು ಕುಮಾರ್ ಅವರ ಸರ್ವಿಸ್ ರೈಫಲ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಈ ವೇಳೆ ಗುಂಡು ಸೋನುಕುಮಾರ್ ಅವರ ಕುತ್ತಿಗೆ ಸೀಳಿಕೊಂಡು ದೇಹಹೊಕ್ಕಿದೆ. ಕೂಡಲೇ ಸೋನುಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆಯಲ್ಲಿ ಟ್ರಕ್ ಚಲಿಸುತ್ತಿದ್ದಾಗ ಸೋನುಕುಮಾರ್ ಬೆರಳು ಟ್ರಿಗರ್ ಮೇಲೆ ಇದ್ದು ಆಕಸ್ಮಿಕವಾಗಿ ಸೋನು ಕುಮಾರ್ ಟ್ರಿಗರ್ ಒತ್ತಿರುವ ಸಾಧ್ಯತೆ ಇದ್ದು, ಹೀಗಾಗಿ ಗುಂಡು ಹಾರಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದ್ದಾರೆ.
Advertisement