
ಎಷ್ಟೇ ಕಷ್ಟಬಂದರೂ ತಾಯಿ ತನ್ನ ಮಕ್ಕಳನ್ನು ಬಿಟ್ಟುಕೊಡುವುದಿಲ್ಲ. ಮಕ್ಕಳಿಗಾಗಿಯೇ ತನ್ನ ಜೀವನವನ್ನು ಮುಡುಪಾಗಿಡುತ್ತಾಳೆ. ಆದರೆ ಇಲ್ಲೊಂದು ದೃಶ್ಯ ಎಲ್ಲರ ಮನಕಲಕುವಂತಿದೆ. ಹೌದು... ಇಲ್ಲೊಬ್ಬ ತಾಯಿ ಗಂಡನಿಗೆ ವಿಚ್ಛೇನದ ನೀಡಿ ಲವರ್ ಜೊತೆ ಹೋಗಿದ್ದಾಳೆ. ಈ ವೇಳೆ ಅಮ್ಮ ನಮ್ಮನ್ನು ಬಿಟ್ಟು ಹೋಗುತ್ತಿದ್ದಾಳೆ ಎಂದು ಅರಿತ ಮಕ್ಕಳು ಆಕೆಯನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ. ಅಮ್ಮ ನೀನು ನಮಗೆ ಬೇಕು ಬಿಟ್ಟುಹೋಗಬೇಡಮ್ಮ ಎಂದು ಮಕ್ಕಳು ಎಷ್ಟೇ ಗೊಗರೆದರು ತಾಯಿ ಮಕ್ಕಳಿಗೆ ಗದರುತ್ತಾಳೆ. ತನ್ನ ಕೈ ಹಿಡಿದುಕೊಂಡಿದ್ದ ಮಗಳನ್ನು ದೂರಕ್ಕೆ ದೂಡುತ್ತಾಳೆ. ಅಂತು ಮಕ್ಕಳ ಕಣ್ಣೀರಿಗೂ ಕರಗದ ಆ ತಾಯಿಯ ಮನಸ್ಸು ನಿಮಗಿಂತ ನನಗೆ ನನ್ನ ಪ್ರಿಯಕರ ಮುಖ್ಯ ಎಂದು ಬಿಟ್ಟು ಹೋಗುತ್ತಾಳೆ. ಈ ಘಟನೆ ಎಂತಹವರ ಮನಸ್ಸು ಕದಡುವಂತೆ ಮಾಡುತ್ತದೆ. ಸದ್ಯ ಈ ಘಟನೆ ಎಲ್ಲಿ ನಡೆದಿದೆ ಎಂಬುದು ವರದಿಯಾಗಿಲ್ಲ. ಮಿಸ್ ಮೋಹಿನಿ ಎಂಬುವವರು ಎಕ್ಸ್ನಲ್ಲಿ ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲಿನ ರೀತಿ ರಿವಾಜುಗಳನ್ನು ನೋಡಿದರೆ ಇದು ಉತ್ತರ ಭಾರತದಲ್ಲಿ ನಡೆದಿದೆ ಎಂಬುದು ತಿಳಿಯುತ್ತದೆ.
Advertisement