

ನವದೆಹಲಿ: ಮಿಜೋರಾಂನ ಮಾಜಿ ರಾಜ್ಯಪಾಲ ಮತ್ತು ಬಿಜೆಪಿ ಹಿರಿಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಗುರುವಾರ ನಿಧನರಾದರು. ಹಿರಿಯ ವಕೀಲರು ಹಾಗೂ ಸಂಸದೆ ಬಾನ್ಸೂರಿ ಸ್ವರಾಜ್ ಅವರ ತಂದೆಯಾಗಿದ್ದ ಕೌಶಲ್ ಅವರಿಗೆ 73 ವರ್ಷ ವಯಸ್ಸಾಗಿತ್ತು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ದೆಹಲಿ ಬಿಜೆಪಿ, "ಮಿಜೋರಾಂನ ಮಾಜಿ ರಾಜ್ಯಪಾಲರು ಹಾಗೂ ಹಿರಿಯ ವಕೀಲರಾಗಿದ್ದ ಸ್ವರಾಜ್ ಕೌಶಲ್ ಅವರ ಹಠಾತ್ ನಿಧನದ ಸುದ್ದಿ ತಿಳಿಸಲು ವಿಷಾದಿಸುತ್ತೇವೆ ಎಂದು ಹೇಳಿದೆ.
ಇಂದು ಮಧ್ಯಾಹ್ನ ಎದೆನೋವು ಕಾಣಿಸಿಕೊಂಡ ನಂತರ AIIMS ಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಲೋಧಿ ರಸ್ತೆಯ ಸ್ಮಶಾನದಲ್ಲಿ ಕೌಶಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಪಕ್ಷ ಹೇಳಿದೆ.
ಎಕ್ಸ್ ನಲ್ಲಿ ಭಾವನಾತ್ಮಕ ಸಂದೇಶ ಪೋಸ್ಟ್ ಮಾಡಿರುವ ಬಾನ್ಸೂರಿ ಸ್ವರಾಜ್, ನನ್ನ ತಂದೆಯ ವಾತ್ಸಲ್ಯ, ಶಿಸ್ತು, ಸರಳತೆ, ದೇಶಭಕ್ತಿ ಮತ್ತು ಅಪಾರ ತಾಳ್ಮೆ ತನ್ನ ಜೀವನದ ಬೆಳಕಾಗಿದ್ದು, ಅದು ಎಂದಿಗೂ ಶಾಶ್ವತವಾಗಿರುತ್ತದೆ. ನಿಮ್ಮ ಅಗಲಿಕೆ ಅತ್ಯಂತ ನೋವುಂಟು ಮಾಡಿದೆ ಎಂದಿದ್ದಾರೆ.
ಆದರೆ ನೀವು ಈಗ ತಾಯಿಯೊಂದಿಗೆ ಮತ್ತೆ ಒಂದಾಗಿದ್ದೀರಿ ಎಂಬ ನಂಬಿಕೆಯನ್ನು ಮನಸ್ಸು ಹೊಂದಿದೆ. ನಿಮ್ಮ ಮಗಳಾಗುವುದು ನನ್ನ ಜೀವನದ ಅತ್ಯಂತ ದೊಡ್ಡ ಹೆಮ್ಮೆ ಮತ್ತು ನಿಮ್ಮ ಪರಂಪರೆ, ಮೌಲ್ಯಗಳು ಮತ್ತು ಆಶೀರ್ವಾದಗಳು ನನ್ನ ಮುಂದಿನ ಜೀವನಕ್ಕೆ ಆಧಾರವಾಗಿರುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.
Advertisement