ಗಾಳಿಯ ಗುಣಮಟ್ಟ ಸುಧಾರಿಸುವವರೆಗೆ ಸಂಸತ್ತಿನ ಅಧಿವೇಶನವನ್ನು ದೆಹಲಿಯಿಂದ ಬೇರೆಡೆಗೆ ಸ್ಥಳಾಂತರಿಸಿ: ಬಿಜೆಡಿ ಸಂಸದರ ಒತ್ತಾಯ

ಚಂಡಮಾರುತ, ಪ್ರವಾಹ ಮತ್ತು ನೈಸರ್ಗಿಕ ವಿಕೋಪಗಳ ನಡುವೆ ಹೋರಾಡುವ ರಾಜ್ಯವಾದ ಒಡಿಶಾದಿಂದ ಬಂದಿರುವ ನನಗೆ ಬಿಕ್ಕಟ್ಟು ಹೇಗಿರುತ್ತದೆ ಎಂದು ತಿಳಿದಿದೆ. ಆದರೆ ನನಗೆ ತೊಂದರೆ ಕೊಡುತ್ತಿರುವುದು ದೆಹಲಿ ಎಂದು ಅವರು ಹೇಳಿದರು.
BJD Rajya Sabha member Manas Ranjan Mangaraj
ಬಿಜೆಡಿ ಸಂಸದ ರಂಜನ್ ಮಂಗರಾಜ್
Updated on

ನವದೆಹಲಿ: ಗಾಳಿಯ ಗುಣಮಟ್ಟ ಸುಧಾರಿಸುವವರಗೆ ಸಂಸತ್ತಿನ ಚಳಿಗಾಲ ಮತ್ತು ಬಜೆಟ್ ಅಧಿವೇಶನಗಳನ್ನು ದೆಹಲಿಯಿಂದ ಹೊರಗೆ ಸ್ಥಳಾಂತರಿಸುವಂತೆ ಬಿಜೆಡಿ ರಾಜ್ಯಸಭಾ ಸದಸ್ಯ ಮಾನಸ್ ರಂಜನ್ ಮಂಗರಾಜ್ ಗುರುವಾರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಒಡಿಶಾ ಮೂಲದ ಮಂಗರಾಜ್, ನೈಸರ್ಗಿಕ ವಿಕೋಪಗಳಿಗೆ ತಮ್ಮ ರಾಜ್ಯದ ಪರಿಣಾಮಕಾರಿ ಪ್ರತಿಕ್ರಿಯೆ ಮತ್ತು ದೆಹಲಿಯ ವಾಯು ಮಾಲಿನ್ಯವನ್ನು ಪರಿಹರಿಸುವಲ್ಲಿ ಇದೇ ರೀತಿಯ ತುರ್ತು ಅಗತ್ಯವಿದೆ ಎಂಬುದನ್ನು ತಿಳಿಸಿದ್ದಾರೆ.

ಚಂಡಮಾರುತಗಳು, ಪ್ರವಾಹಗಳು ಮತ್ತು ನೈಸರ್ಗಿಕ ವಿಕೋಪಗಳ ನಡುವೆ ಹೋರಾಡುವ ರಾಜ್ಯವಾದ ಒಡಿಶಾದಿಂದ ಬಂದಿರುವ ನನಗೆ ಬಿಕ್ಕಟ್ಟು ಹೇಗಿರುತ್ತದೆ ಎಂದು ತಿಳಿದಿದೆ. ಆದರೆ ನನಗೆ ತೊಂದರೆ ಕೊಡುತ್ತಿರುವುದು ದೆಹಲಿ ಎಂದು ಅವರು ಹೇಳಿದರು.

ಸದನವನ್ನು ಕಾರ್ಯನಿರ್ವಹಿಸುವಂತೆ ಮಾಡುವ ಸದಸ್ಯರು, ಸಂಸದೀಯ ಅಧಿಕಾರಿಗಳು, ಚಾಲಕರು, ನೈರ್ಮಲ್ಯ ಕಾರ್ಮಿಕರು ಮತ್ತು ಭದ್ರತಾ ಸಿಬ್ಬಂದಿ ವಿಷಕಾರಿ ಗಾಳಿಗೆ ಪ್ರತಿದಿನ ಒಡ್ಡಿಕೊಳ್ಳುವುದರ ಬಗ್ಗೆ ಸಂಸದರು ಗಮನ ಸೆಳೆದರು.

BJD Rajya Sabha member Manas Ranjan Mangaraj
ದೆಹಲಿ ಅಲ್ಲವೇ ಅಲ್ಲ: ನವೆಂಬರ್ ನಲ್ಲಿ ಇದೇ ದೇಶದ ಅತ್ಯಂತ ಹೆಚ್ಚಿನ ಮಾಲಿನ್ಯ ನಗರ! ಬೆಂಗಳೂರಿಗೆ ಎಷ್ಟನೇ ಸ್ಥಾನ?

ನಾವು ಅವರ ನೋವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದು ಸಾಮಾನ್ಯ ಎಂದು ನಾವು ನಟಿಸಲು ಆಗುವುದಿಲ್ಲ" ಎಂದು ಅವರು ಹೇಳಿದರು, ಗರಿಷ್ಠ ಮಾಲಿನ್ಯದ ತಿಂಗಳುಗಳಲ್ಲಿ ಸಂಸತ್ತಿನ ಅಧಿವೇಶನಗಳನ್ನು ನಡೆಸುವುದರಿಂದ ಅನಗತ್ಯವಾಗಿ ಜೀವಗಳು ಅಪಾಯಕ್ಕೆ ಸಿಲುಕುತ್ತವೆ ಎಂದು ಹೇಳಿದರು.

ಭುವನೇಶ್ವರ, ಹೈದರಾಬಾದ್, ಗಾಂಧಿನಗರ, ಬೆಂಗಳೂರು, ಗೋವಾ ಮತ್ತು ಡೆಹ್ರಾಡೂನ್ ಸೇರಿದಂತೆ ಶುದ್ಧ ಗಾಳಿ ಮತ್ತು ಸಾಕಷ್ಟು ಮೂಲಸೌಕರ್ಯ ಹೊಂದಿರುವ ಹಲವಾರು ನಗರಗಳನ್ನು ಪರ್ಯಾಯಗಳಾಗಿ ಪರಿಗಣಿಸುವಂತೆ ಮಂಗರಾಜ್ ಸೂಚಿಸಿದರು.

ಒಡಿಶಾ ಚಂಡಮಾರುತದ ಸಮಯದಲ್ಲಿ ಲಕ್ಷಾಂತರ ಜನರನ್ನು ಗಂಟೆಗಳಲ್ಲಿ ಸ್ಥಳಾಂತರಿಸಲು ಮತ್ತು ಜೀವಗಳನ್ನು ಉಳಿಸಲು ಸಾಧ್ಯವಾಗುವುದಾದರೆ, ಭಾರತ ಸರ್ಕಾರವು ತನ್ನದೇ ಆದ ಸದಸ್ಯರು ಮತ್ತು ಸಿಬ್ಬಂದಿಯ ಆರೋಗ್ಯವನ್ನು ರಕ್ಷಿಸಲು ಸಂಸತ್ತಿನ ಎರಡು ಅಧಿವೇಶನಗಳನ್ನು ಸ್ಥಳಾಂತರಿಸಬಹುದು" ಎಂದು ಅವರು ಪ್ರತಿಪಾದಿಸಿದರು.

ತಮ್ಮ ಪ್ರಸ್ತಾಪವು ರಾಜಕೀಯ ಪ್ರೇರಿತವಾಗಿಲ್ಲ ಎಂದು ಒತ್ತಿ ಹೇಳಿದ ಮಂಗರಾಜ್, "ಇದು ರಾಜಕೀಯದ ಬಗ್ಗೆ ಅಲ್ಲ. ಇದು ಜೀವನ ಮತ್ತು ಘನತೆಯ ಬಗ್ಗೆ. ಸಂಸತ್ತು ನಾಯಕತ್ವವನ್ನು ತೋರಿಸಬೇಕು. ಖಂಡಿಸುವ ಮೊದಲು ಬದುಕುವ ಹಕ್ಕು ಬರುತ್ತದೆ ಎಂಬುದನ್ನು ಸಂಸತ್ತು ತೋರಿಸಬೇಕು" ಎಂದು ಹೇಳಿದರು. ಚಳಿಗಾಲದ ತಿಂಗಳುಗಳಲ್ಲಿ ಉತ್ತಮ ಗಾಳಿಯ ಗುಣಮಟ್ಟವನ್ನು ಹೊಂದಿರುವ ನಗರಗಳಿಗೆ ಸಂಸತ್ತಿನ ಅಧಿವೇಶನಗಳನ್ನು ಶಿಫ್ಟ್ ಮಾಡುವ ಕಾರ್ಯಸಾಧ್ಯತೆಯನ್ನು ಆದಷ್ಟು ಶೀಘ್ರವೇ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com