

ನವದೆಹಲಿ: ಇಲ್ಲಿಯವರೆಗೂ ರಾಷ್ಟ್ರ ರಾಜಧಾನಿ ದೆಹಲಿಯೇ ದೇಶದ ಅತಿ ಹೆಚ್ಚಿನ ಮಾಲಿನ್ಯ ನಗರ ಎನ್ನಲಾಗಿತ್ತು. ಆದರೆ, ನವೆಂಬರ್ ನಲ್ಲಿ ಗಾಜಿಯಾಬಾದ್ ದೇಶದ ಅತ್ಯಂತ ಹೆಚ್ಚಿನ ಮಾಲಿನ್ಯ ನಗರವಾಗಿದೆ.
ಹೊಸ ವಿಶ್ಲೇಷಣೆ ಪ್ರಕಾರ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಮಾಸಿಕ ಸರಾಸರಿ PM2.5 ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ 249 ಮೈಕ್ರೋಗ್ರಾಂಗಳಿದ್ದು, ಗಾಳಿಯ ಗುಣಮಟ್ಟವು ಎಲ್ಲಾ 30 ದಿನಗಳಲ್ಲಿ ರಾಷ್ಟ್ರೀಯ ಮಾನದಂಡಗಳಿಗಿಂತ ಹೆಚ್ಚಾಗಿದೆ.
ಇಂಧನ ಮತ್ತು ಶುದ್ಧ ಗಾಳಿ ಸಂಶೋಧನೆಯ ಥಿಂಕ್ ಟ್ಯಾಂಕ್ ಸೆಂಟರ್ ವರದಿ ಪ್ರಕಾರ, ಗಾಜಿಯಾಬಾದ್ ಸೇರಿದಂತೆ ನೋಯ್ಡಾ, ಬಹದ್ದೂರ್‌ಗಢ, ದೆಹಲಿ, ಹಾಪುರ್, ಗ್ರೇಟರ್ ನೋಯ್ಡಾ, ಬಾಗ್‌ಪತ್, ಸೋನಿಪತ್, ಮೀರತ್ ಮತ್ತು ರೋಹ್ಟಕ್ ದೇಶದ 10 ಅತ್ಯಂತ ಕಲುಷಿತ ನಗರಗಳಾಗಿವೆ.
ಈ ನಗರಗಳಲ್ಲಿ ಆರು ಉತ್ತರ ಪ್ರದೇಶದಲ್ಲಿಯೇ ಇವೆ. ನಂತರ ಮೂರು ನಗರಗಳು ಹರಿಯಾಣದಲ್ಲಿದ್ದು, ದೆಹಲಿಯೂ ಸೇರಿದೆ. ದೆಹಲಿಯನ್ನು ಹೊರತುಪಡಿಸಿದರೆ, ಟಾಪ್ 10 ರಲ್ಲಿನ ಎಲ್ಲಾ ಇತರ ನಗರಗಳು ಹಿಂದಿನ ವರ್ಷಕ್ಕಿಂತ ಹೆಚ್ಚಿನ PM2.5 ಮಟ್ಟವನ್ನು ದಾಖಲಿಸಿವೆ. ಬೆಂಗಳೂರು ಈ ನಗರಗಳ ಪಟ್ಟಿಯಲ್ಲಿ ಇಲ್ಲ.
ರಾಜ್ಯ ಮಟ್ಟದಲ್ಲಿ ರಾಜಸ್ಥಾನ ಅತಿ ಹೆಚ್ಚು ಮಾಲಿನ್ಯ ನಗರಗಳನ್ನು ಹೊಂದಿದ್ದು, ನವೆಂಬರ್‌ನಲ್ಲಿ 34 ನಗರಗಳ ಪೈಕಿ 23 ನಗರಗಳು ರಾಷ್ಟ್ರೀಯ ಮಿತಿಯನ್ನು ಮೀರಿದೆ.
Advertisement